Sunday, June 26, 2022

Latest Posts

ಕೊಡಗು ಜಿಲ್ಲೆಯಲ್ಲಿ ಶುಕ್ರವಾರ 43 ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಢ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 20 ಮತ್ತು ಮಧ್ಯಾಹ್ನ 23 ಸೇರಿದಂತೆ ಒಂದೇ ದಿನ 43 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 922ರಷ್ಟಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. ವೀರಾಜಪೇಟೆ ತಾಲೂಕಿನ ಸಿದ್ದಾಪುರದ ಅಂಬೇಡ್ಕರ್ ನಗರದ 21 ವರ್ಷದ ಪುರುಷ, 16 ವರ್ಷದ
ಬಾಲಕ 13 ವರ್ಷದ ಬಾಲಕಿ, ವೀರಾಜಪೇಟೆ ಕೊಣಜಗೇರಿಯ 34 ವರ್ಷದ ಪುರುಷ, ವೀರಾಜಪೇಟೆ ಅರಸು ನಗರದ 20 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಗೋಣಿಕೊಪ್ಪ ಪೊನ್ನಂಪೇಟೆ ರಸ್ತೆಯ ಉತ್ತಯ್ಯ ಕ್ಯಾಂಪಸ್‍ನ 45 ವರ್ಷದ ಪುರುಷ, ಗೋಣಿಕೊಪ್ಪ ಕೆಇಬಿ ಹಿಂಬಾಗದ 55 ವರ್ಷದ ಪುರುಷ, ಗೋಣಿಕೊಪ್ಪ ಕೆಇಬಿ ವಸತಿ ಗೃಹದ 57 ವರ್ಷದ ಪುರುಷ, ಮಡಿಕೇರಿ ಜೋಡುಪಾಲದ 10ನೇ ಮೈಲಿ ಬಳಿಯ 30 ವರ್ಷದ ಪುರುಷ ಮತ್ತು 57 ವರ್ಷದ ಮಹಿಳೆ, ಮಡಿಕೇರಿ ಬ್ರಾಹ್ಮಣರ ಬೀದಿಯ 55 ಮತ್ತು 20 ವರ್ಷದ ಪುರುಷ, ಮಕ್ಕಂದೂರಿನ ಉದಯಗಿರಿ ಬಳಿಯ 33 ವರ್ಷದ ಪುರುಷ, 31 ವರ್ಷದ ಮಹಿಳೆ, 11 ಮತ್ತು 12 ವರ್ಷದ ಬಾಲಕಿಯರು, ಮಡಿಕೇರಿ ಓಂಕಾರೇಶ್ವರ ದೇವಾಲಯ ಬಳಿಯ 59 ವರ್ಷದ ಮಹಿಳೆ ಮತ್ತು 60 ವರ್ಷದ ಪುರುಷ, ಮಡಿಕೇರಿ ಮುತ್ತಪ್ಪ ದೇವಾಲಯ ಬಳಿಯ 26 ವರ್ಷದ ಮಹಿಳೆ, ಕುಶಾಲನಗರ ನಿಜಾಮುದ್ದೀನ್ ಬಡಾವಣೆಯ 10 ವರ್ಷದ ಬಾಲಕಿಯಲ್ಲಿ ಸೋಂಕು ದೃಢಪಟ್ಟಿರುವುದಾಗಿ ಅವರು ಹೇಳಿದ್ದಾರೆ.
ಶುಕ್ರವಾರ ಮಧ್ಯಾಹ್ನ ಮಡಿಕೇರಿ ಹೆರವನಾಡು ಗ್ರಾಮದ ಅಪ್ಪಂಗಳದ 38 ವರ್ಷದ ಮಹಿಳೆ, ಕುಶಾಲನಗರ ಗುಂಡೂರಾವ್ ಬಡಾವಣೆಯ 1ನೇ ಬ್ಲಾಕ್‍ನ 58 ವರ್ಷದ ಪುರುಷ, ಸೋಮವಾರಪೇಟೆ ಗೌಡಳ್ಳಿ ಗಣೇಶ ದೇವಾಲಯ ಸಮೀಪದ 30 ವರ್ಷದ ಪುರುಷ, ಸೋಮವಾರಪೇಟೆ ಆರೋಗ್ಯ ವಸತಿ ಗೃಹದ 33 ವರ್ಷದ ಮಹಿಳೆ ಮತ್ತು 5 ವರ್ಷದ ಬಾಲಕ, ಶನಿವಾರಸಂತೆಯ ಸಹಕಾರಿ ಬ್ಯಾಂಕ್ ಬಳಿಯ 39 ವರ್ಷದ ಪುರುಷ, ಶನಿವಾರಸಂತೆಯ 22 ಮತ್ತು 47 ವರ್ಷದ ಪುರುಷರು, ಶನಿವಾರಸಂತೆಯ 49 ವರ್ಷದ ಪುರುಷ. ಕುಶಾಲನಗರ ಐಬಿ ಹಿಂಭಾದ ಸಿದ್ದಯ್ಯ ಪುರಾಣಿಕ್ ಲೇಔಟ್‍ನ 30 ವರ್ಷದ ಮಹಿಳೆ. ಪೆÇನ್ನಂಪೇಟೆ ಬೇಗೂರಿನ 37 ವರ್ಷದ ಪುರುಷ, ಸೋಮವಾರಪೇಟೆ ನಲ್ವತ್ತೆಕ್ರೆ ಗ್ರಾಮದ ಮಸೀದಿ ಬಳಿಯ 39 ವರ್ಷದ ಪುರುಷನಲ್ಲಿ ಸೋಂಕು ಗೋಚರಿಸಿದೆ ಎಂದು ಅವರು ತಿಳಿಸಿದ್ದಾರೆ.
ಪೊನ್ನಂಪೇಟೆಯ ಅರಣ್ಯ ಕಾಲೇಜು ವಸತಿ ಗೃಹದ 24 ವರ್ಷದ ಮಹಿಳೆ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ವೀರಾಜಪೇಟೆಯ ಕಲ್ಲುಬಾಣೆ ಅರ್ಜಿ ಗ್ರಾಮದ 45 ವರ್ಷದ ಪುರುಷ ಮತ್ತು 29 ವರ್ಷದ ಮಹಿಳೆ, ಕುಶಾಲನಗರ ನೆಹರು ಲೇಔಟ್‍ನ 46 ವರ್ಷದ ಪುರುಷ, 33 ವರ್ಷದ ಮಹಿಳೆ ಮತ್ತು 10 ವರ್ಷದ ಬಾಲಕಿ, ಮಡಿಕೇರಿ ಮಲ್ಲಿಕಾರ್ಜುನ ನಗರದ 27 ವರ್ಷದ ಪುರುಷ, ಮುತ್ತಪ್ಪ ದೇವಾಲಯ ಬಳಿಯ ಸಂತ ಜೋಸೆಫರ ಶಾಲೆ ರಸ್ತೆಯ 24 ವರ್ಷದ ಪುರುಷ, ವೀರಾಜಪೇಟೆ ಕಲ್ತೋಡು ಗ್ರಾಮದ 23 ವರ್ಷದ ಪುರುಷ, ಸೋಮವಾರಪೇಟೆ ಆರೋಗ್ಯ ವಸತಿ ಗೃಹದ 36 ವರ್ಷದ ಪುರುಷ, ಸುಂಟಿಕೊಪ್ಪ ಹರದೂರುವಿನ 36 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 922ರಷ್ಟಾಗಿದ್ದು, ಈ ಪೈಕಿ 579 ಮಂದಿ ಗುಣಮುಖರಾಗಿದ್ದಾರೆ. 332 ಸಕ್ರಿಯ ಪ್ರಕರಣಗಳಿದ್ದು, 11 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 262 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss