Sunday, August 14, 2022

Latest Posts

ಕೊಡಗು ಜಿಲ್ಲೆಯಲ್ಲಿ ಶುಕ್ರವಾರ 62 ಮಂದಿಗೆ ಕೊರೋನಾ ಹೊಸ ಪ್ರಕರಣ ಪತ್ತೆ

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 37 ಮತ್ತು ಮಧ್ಯಾಹ್ನ 25 ಸೇರಿದಂತೆ 62 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಅಲ್ಲದೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶಿರಂಗಾಲ ಗ್ರಾಮದ 65 ವರ್ಷದ ಪುರುಷರೊಬ್ಬರು ಶುಕ್ರವಾರ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 33 ಕ್ಕೇರಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 2496ರಷ್ಟಾಗಿದ್ದು, ಈ ಪೈಕಿ 2017 ಮಂದಿ ಗುಣಮುಖರಾಗಿದ್ದಾರೆ. 447 ಸಕ್ರಿಯ ಪ್ರಕರಣಗಳಿದ್ದು, 32 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್‌ಮೆOಟ್ ವಲಯಗಳ ಸಂಖ್ಯೆ 376 ಆಗಿದೆ ಎಂದು ಅವರು ಹೇಳಿದ್ದಾರೆ.
ವೀರಾಜಪೇಟೆ ತಾಲೂಕಿನ ಪಾಲಂಗಾಲದ 29 ವರ್ಷದ ಮಹಿಳೆ ಮತ್ತು 30 ವರ್ಷದ ಪುರುಷ, ವೀರಾಜಪೇಟೆ ಶಿವಕೇರಿ ಕೊಡವ ಸಮಾಜ ಸಮೀಪದ 65 ವರ್ಷದ ಪುರುಷ, ಕಡಂಗ ಮರೂರಿನ 76 ವರ್ಷದ ಪುರುಷ, ವೀರಾಜಪೇಟೆ ಮೀನುಪೇಟೆಯ ಪೊಲೀಸ್ ವಸತಿಗೃಹದ 55 ವರ್ಷದ ಪುರುಷ. ಪಾಲಿಬೆಟ್ಟ ಸರ್ಕಾರಿ ಆಸ್ಪತ್ರೆ ಸಮೀಪದ 58 ವರ್ಷದ ಮಹಿಳೆ. ಕಾಕೋಟುಪರಂಬು ಬಿಎಸ್‌ಎನ್‌ಎಲ್ ಟವರ್ ಸಮೀಪದ 42 ವರ್ಷದ ಪುರುಷ ಮತ್ತು 65 ವರ್ಷದ ಮಹಿಳೆ, ಸಿದ್ದಾಪುರ ಆರೆಂಜ್ ಕೌಂಟಿಯ 33 ವರ್ಷದ ಪುರುಷ. ವೀರಾಜಪೇಟೆ ಶಿವಕೇರಿಯ ಕೊಡವ ಸಮಾಜ ಸಮೀಪದ 59 ವರ್ಷದ ಮಹಿಳೆ, ಬಿಟ್ಟಂಗಾಲ ಅಂಬಟ್ಟಿ ಗ್ರಾಮದ ಡಿಎಂಪಿ ಶಾಲೆ ಬಳಿಯ 62 ವರ್ಷದ ಪುರುಷ, ವೀರಾಜಪೇಟೆ ಮೀನುಪೇಟೆಯ ಪೊಲೀಸ್ ವಸತಿಗೃಹದ 46 ವರ್ಷದ ಮಹಿಳೆ, ಗೋಣಿಕೊಪ್ಪ ಅಚ್ಚಪ್ಪ ಲೇಔಟ್‌ನ 3ನೇ ಬ್ಲಾಕ್‌ನ 38 ವರ್ಷದ ಮಹಿಳೆ ಮತ್ತು 43 ವರ್ಷದ ಪುರುಷ, ಟಿ.ಶೆಟ್ಟಿಗೇರಿ ಹರಿಹರ ಗ್ರಾಮದ 35 ವರ್ಷದ ಪುರುಷ. ಪೊನ್ನಂಪೇಟೆ ಹಳ್ಳಿಗಟ್ಟು ಗಣಪತಿ ನಗರದ 28 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಸೋಮವಾರಪೇಟೆ ತಾಲೂಕಿನ ಅಭ್ಯತ್ ಮಂಗಲ ಗ್ರಾಮದ 42 ವರ್ಷದ ಪುರುಷ ಮತ್ತು 31 ವರ್ಷದ ಮಹಿಳೆ, ಕುಶಾಲನಗರ ಮುಳ್ಳುಸೋಗೆ ಕುವೆಂಪು ಬಡಾವಣೆಯ 73 ವರ್ಷದ ಮಹಿಳೆ, ಕುಶಾಲನಗರ ಸರ್ಕಾರಿ ಆಸ್ಪತ್ರೆ ಎದುರಿನ ಸೋಮೇಶ್ವರ ದೇವಾಲಯ ಸಮೀಪದ 75 ವರ್ಷದ ಪುರುಷ ಮತ್ತು 58 ವರ್ಷದ ಮಹಿಳೆ, ಗೌಡಳ್ಳಿ ನಂದಿ ಗುಂಡಿಯ 62 ವರ್ಷದ ಪುರುಷ, ಸುಂಟಿಕೊಪ್ಪ ಬಿ.ಎಂ ರಸ್ತೆಯ ಕೆ.ಇ.ಬಿ ಸಮೀಪದ 44 ವರ್ಷದ ಪುರುಷ. ಕುಶಾಲನಗರ ಬಿ.ಎಂ ರಸ್ತೆಯ ವೆಂಕಟೇಶ್ವರ ಸಿನಿಮಾ ಮಂದಿರ ಎದುರಿನ 83 ವರ್ಷದ ಮಹಿಳೆ, ನೆಲ್ಲಿಹುದಿಕೇರಿ ನಲವತ್ತೆಕ್ರೆಯ 30 ವರ್ಷದ ಮಹಿಳೆ, ಗೌಡಳ್ಳಿ ಒಡೆಯನಪುರದ 31 ವರ್ಷದ ಮಹಿಳೆ, ಅಭ್ಯತ್ ಮಂಗಲದ 3 ವರ್ಷದ ಬಾಲಕ, ಸೋಮವಾರಪೇಟೆ ಚೆಟ್ಟಳ್ಳಿಯ ಕೋಟೆಗೇರಿ ಎಸ್ಟೇಟ್‌ನ 67 ವರ್ಷದ ಪುರುಷ, ಕುಶಾಲನಗರ ಕುವೆಂಪು ಬಡಾವಣೆಯ 17 ವರ್ಷದ ಬಾಲಕ, ಬಸವನಹಳ್ಳಿಯ 67 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಸುಂಟಿಕೊಪ್ಪ ಪಂಪ್ ಹೌಸ್ ಸಮೀಪದ 22 ವರ್ಷದ ಪುರುಷ. ಮಾಲಂಬಿ ಹೊಸಗುತ್ತಿ ಗ್ರಾಮದ 62 ವರ್ಷದ ಪುರುಷ, ಚೌಡ್ಲುವಿನ ಟೈರ್ ವರ್ಕ್ ಶಾಪ್ ಸಮೀಪದ 40 ವರ್ಷದ ಮಹಿಳೆ, ಆಡಿನಾಡೂರಿನ 35 ವರ್ಷದ ಪುರುಷ, ತಣ್ಣೀರುಹಳ್ಳ ಸರ್ಕಾರಿ ಶಾಲೆ ಎದುರಿನ 53 ವರ್ಷದ ಮಹಿಳೆ, ಸೋಮವಾರಪೇಟೆ ಮಹದೇಶ್ವರ ಬ್ಲಾಕ್ ನ 53 ವರ್ಷದ ಮಹಿಳೆ, ನಂದಿಗುAದದ 43 ವರ್ಷದ ಪುರುಷ, ವಾಲ್ನೂರು ಗ್ರಾಮದ ತ್ಯಾಗತ್ತೂರು ಕಾಲೋನಿಯ 21 ವರ್ಷದ ಮಹಿಳೆ, ಮೈಸೂರು ಪಿರಿಯಾಪಟ್ಟಣದ 26 ವರ್ಷದ ಪುರುಷ, ಜಂಬೂರು ಮಾದಾಪುರದ 41 ವರ್ಷದ ಮಹಿಳೆ, ಸೋಮವಾರಪೇಟೆ ರೇಂಜರ್ ಬ್ಲಾಕ್‌ನ 26 ವರ್ಷದ ಮಹಿಳೆ, ನಾಕೂರು ಗ್ರಾಮದ 78 ವರ್ಷದ ಮಹಿಳೆ, ಚೆಟ್ಟಳ್ಳಿ ಗ್ರಾಮದ 44 ವರ್ಷದ ಪುರುಷ, ಮಾದಾಪುರ ಜಂಬೂರು ಗ್ರಾಮದ 63 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ.
ಮಡಿಕೇರಿ ತಾಳತ್ತಮನೆಯ ಕೂರ್ಗ್ ಐಸ್ ರೆಸಾರ್ಟ್ ಎದುರಿನ 55 ವರ್ಷದ ಪುರುಷ, ಚೆಯ್ಯಂಡಾಣೆಯ ಚೇಲಾವರ ಗ್ರಾಮದ 26 ವರ್ಷದ ಪುರುಷ, ಚೆಟ್ಟಿಮಾನಿ ದೇವಾಲಯ ಸಮೀಪದ 41 ವರ್ಷದ ಪುರುಷ, ನಾಪೋಕ್ಲುವಿನ ಬೇತು ಮಕ್ಕಿ ದೇವಾಲಯ ಸಮೀಪದ 65 ವರ್ಷದ ಪುರುಷ, ಮಡಿಕೇರಿ ಸುಬ್ರಮಣ್ಯ ನಗರದ 58 ವರ್ಷದ ಪುರುಷ, ಕೊಳಕೇರಿ ಗ್ರಾಮದ 10 ಹಾಗೂ 1 ವರ್ಷದ ಬಾಲಕಿಯರು, ನಾಪೋಕ್ಲು ಇಂದಿರಾನಗರದ 70 ವರ್ಷದ ಮಹಿಳೆ, ಮಡಿಕೇರಿ ಮ್ಯಾನ್ಸ್ ಕಾಂಪೌAಡ್ ಸಮೀಪದ 45 ವರ್ಷದ ಪುರುಷ, ಮೂರ್ನಾಡು ಗಾಂಧಿನಗರದ 60 ವರ್ಷದ ಪುರುಷ ಮತ್ತು 55 ವರ್ಷದ ಮಹಿಳೆಯಲ್ಲಿ ಸೋಂಕು ಗೋಚರಿಸಿದೆ.
ಮಡಿಕೇರಿ ಮೆಡಿಕಲ್ ಕಾಲೇಜು ಬೋಧಕೇತರ ಸಿಬ್ಬಂದಿ ವಸತಿಗೃಹದ 24 ವರ್ಷದ ಪುರುಷ, ಮೇಕೇರಿಯ 1ನೇ ಮೈಲಿನ 41 ವರ್ಷದ ಪುರುಷ, ಮಡಿಕೇರಿ ಹೊಟೇಲ್ ತಾಜ್‌ನ 22 ವರ್ಷದ ಪುರುಷ, ಹೆಬ್ಬೆಟ್ಟಗೇರಿ ಕೆ.ನಿಡುಗಣೆಯ 40 ವರ್ಷದ ಮಹಿಳೆ, ತಾಳತ್ತಮನೆಯ ಮಂಜುಶ್ರೀ ಹೋಂಸ್ಟೇ ಸಮೀಪದ 42 ವರ್ಷದ ಪುರುಷ, ಸುದರ್ಶನ ಅತಿಥಿ ಗೃಹ ಎದುರಿನ 56 ವರ್ಷದ ಪುರುಷ, ಕೊಳಕೇರಿ ಗ್ರಾಮದ ಉಮಾಮಹೇಶ್ವರಿ ದೇವಾಲಯ ಸಮೀಪದ 25 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss