ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶನಿವಾರ 70 ಮಂದಿ ಕೊರೋನಾ ಸೋಂಕಿನಿಂದ ಮುಕ್ತರಾಗಿದ್ದರೆ ಭಾನುವಾರ ಬೆಳಗ್ಗೆ 14 ಹಾಗೂ ಮಧ್ಯಾಹ್ನ 8 ಮಂದಿಯಲ್ಲಿ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ.
ವೀರಾಜಪೇಟೆ ಬಿಳುಗುಂದದ 24 ವರ್ಷದ ಮಹಿಳೆ, ವೀರಾಜಪೇಟೆ ವಿದ್ಯಾನಗರ ಬ್ರೈಟ್ ಶಾಲೆ ಬಳಿಯ 28 ವರ್ಷದ ಮಹಿಳೆ, ಕೊಂಡಂಗೇರಿಯ 8, 4 ವರ್ಷದ ಬಾಲಕರು ಮತ್ತು 43 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ ವೀರಾಜಪೇಟೆ ಪಂಜರ ಪೇಟೆ ಸರ್ವೋದಯ ಕಾಲೇಜು ಸಮೀಪದ 32 ವರ್ಷದ ಮಹಿಳೆ ಮತ್ತು 6 ವರ್ಷದ ಬಾಲಕ, ಮಡಿಕೇರಿ ಬೊಯಿಕೇರಿಯ ಸಿಂಕೋನ ಸ್ಪೈಸಸ್ ಬಳಿಯ 53 ವರ್ಷದ ಪುರುಷ,ಮಡಿಕೇರಿ ಪಾರಾಣೆಯ ಅಂಗನವಾಡಿ ಬಳಿಯ 28ವರ್ಷದ ಮಹಿಳೆಯಲ್ಲಿ ಸೋಂಕು ಗೋಚರಿಸಿದೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ವೀರಾಜಪೇಟೆ ಬಿಳುಗುಂದ ಗ್ರಾಮದ 58 ವರ್ಷದ ಪುರುಷ, ಕುಶಾಲನಗರ ಬಿ.ಎಂ ರಸ್ತೆಯ 1ನೇ ಬ್ಲಾಕ್ನ 55ಮತ್ತು 22 ವರ್ಷದ ಪುರುಷರು, ಮಡಿಕೇರಿ ಎಲ್.ಐ.ಸಿ ಎದುರಿನ ನ್ಯೂ ಎಕ್ಸ್ ಟೆನ್ಷನ್ ನ 43 ವರ್ಷದ ಪುರುಷ,ಮಡಿಕೇರಿ ಮೇಕೇರಿಯ ಪೌಲ್ ರೆಸಾರ್ಟ್ನ 24 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಭಾನುವಾರ ಮಧ್ಯಾಹ್ನ 8 ಹೊಸ ಕೋವಿಡ್-19 ಪ್ರಕರಣಗಳು ಗೋಚರಿಸಿದ್ದು, ಕುಶಾಲನಗರ ಆರ್.ಸಿ ಲೇಔಟ್ನ 62 ವರ್ಷದ ಪುರುಷ, ಬಸಪ್ಪ ಲೇಔಟ್ನ 37 ವರ್ಷದ ಮಹಿಳೆ, ಸುಂಟಿಕೊಪ್ಪ ಚೆಟ್ಟಳ್ಳಿ ರಸ್ತೆಯ ಗದ್ದೆಹಳ್ಳದ 17 ವರ್ಷದ ಬಾಲಕಿ, ಕುಶಾಲನಗರ ಪೊಲೀಸ್ ಠಾಣೆ ಹಿಂಭಾಗದ 50 ವರ್ಷದ ಮಹಿಳೆ, ಸೋಮೇಶ್ವರ ಬಡಾವಣೆಯ 30 ವರ್ಷದ ಪುರುಷ, ಮಡಿಕೇರಿ ಹೊಸಬಡಾವಣೆಯ 60 ವರ್ಷದ ಪುರುಷನಲ್ಲಿ ಸೋಂಕು ಕಂಡು ಬಂದಿದೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ವೈದ್ಯಕೀಯ ಕಾಲೇಜಿನ ಬೋಧಕೇತರ ಸಿಬ್ಬಂದಿ ವಸತಿ ಗೃಹದ 21 ವರ್ಷದ ಮಹಿಳೆ, ಮೈಸೂರು ಜಿಲ್ಲೆ ಎಚ್.ಡಿಕೋಟೆಯ 22 ವರ್ಷದ ಮಹಿಳೆಗೆ ಸೋಂಕು ಗೋಚರಿಸಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1217ರಷ್ಟಾಗಿದ್ದು, ಈ ಪೈಕಿ 911 ಮಂದಿ ಗುಣಮುಖರಾಗಿದ್ದಾರೆ. 290 ಸಕ್ರಿಯ ಪ್ರಕರಣಗಳಿದ್ದು, 16 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್ಮೆಂಟ್ ವಲಯಗಳ ಸಂಖ್ಯೆ 272ರಷ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ