ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 9 ಹಾಗೂ ಮಧ್ಯಾಹ್ನ 16 ಸೇರಿದಂತೆ ಒಟ್ಟು 25 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ.
ಬೆಳಗ್ಗೆ ಮಡಿಕೇರಿಯ ಹಿಲ್ ರಸ್ತೆಯ ಮುನೀಶ್ವರ ದೇವಾಲಯ ಬಳಿಯ 34 ವರ್ಷದ ಮಹಿಳೆ, ಕಾರಗುಂದ ಟೌನ್ ಶಾಲೆ ಬಳಿಯ 33 ವರ್ಷದ ಮಹಿಳೆ, ಸೋಮವಾರಪೇಟೆ ಗಾಂಧಿನಗರ ಮಾರಿಯಮ್ಮ ದೇವಾಲಯ ಬಳಿಯ 19 ವರ್ಷದ ಪುರುಷ, ವೀರಾಜಪೇಟೆ ಗೋಣಿಕೊಪ್ಪ 1ನೇ ಬ್ಲಾಕ್ನ 53 ವರ್ಷದ ಪುರುಷ, ವೀರಾಜಪೇಟೆ ಗಾಂಧಿನಗರದ 48 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಗೋಣಿಕೊಪ್ಪ ಆರೋಗ್ಯ ವಸತಿ ಗೃಹದ 42 ವರ್ಷದ ಮಹಿಳೆ, ಸೋಮವಾರಪೇಟೆ ಹೊಸ ಬಡಾವಣೆ ಎಂ.ಜಿ ಬ್ಲಾಕ್ನ 4 ವರ್ಷದ ಬಾಲಕಿ, ವೀರಾಜಪೇಟೆ ಬೆಟೋಳಿ ಅಂಚೆಯ ರಾಮನಗರ ಗ್ರಾಮದ 70 ವರ್ಷದ ಪುರುಷ, ಮಡಿಕೇರಿ ಮುತ್ತಪ್ಪ ದೇವಾಲಯ ಬಳಿಯ 36 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮಧ್ಯಾಹ್ನ ಕುಶಾಲನಗರ ಶಿರಂಗಾಲ ಗೇಟ್ನ 42 ವರ್ಷದ ಪುರುಷ, ಮಡಿಕೇರಿ ನಾಪೋಕ್ಲುವಿನ ಕೊಳಕೇರಿಯ 33 ವರ್ಷದ ಮಹಿಳೆ, ಮಡಿಕೇರಿ ಚೇರಂಬಾಣೆ ಕೊಳಗದಾಳು ಅಯ್ಯಪ್ಪ ಕಾಲೋನಿಯ 53 ವರ್ಷದ ಪುರುಷ, ಮಡಿಕೇರಿ ನಾಪೋಕ್ಲುವಿನ ಭರತ್ ಬೇಕರಿಯ 59 ವರ್ಷದ ಮಹಿಳೆ, ಸೋಮವಾರಪೇಟೆ ಹಾಲೇರಿ ಗ್ರಾಮದ ತತ್ತಿಬಾಣೆ ಪೈಸಾರಿಯ 49 ವರ್ಷದ ಪುರುಷ, ಮಡಿಕೇರಿ ಕಾವೇರಿ ಲೇಔಟ್ನ ಸುರಕ್ಷಾ ಹೋಮ್ನ 56 ವರ್ಷದ ಪುರುಷನಲ್ಲಿ ಸೋಂಕು ಗೋಚರಿಸಿದೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಮುತ್ತಪ್ಪ ದೇವಾಲಯ ಹಿಂಭಾಗದ ಮಲ್ಲಿಕಾರ್ಜುನ ನಗರ ಬಳಿಯ 32 ವರ್ಷದ ಮಹಿಳೆ, ಹಾಸನ ಅರಕಲಗೋಡು ಬೈಪಾಸ್ ರಸ್ತೆಯ 25 ಮತ್ತು 24 ವರ್ಷದ ಪುರುಷರು, ಮಡಿಕೇರಿ ಮುತ್ತಪ್ಪ ದೇವಾಲಯ ಬಳಿಯ 19 ಮತ್ತು 38 ವರ್ಷದ ಮಹಿಳೆ, ಮಡಿಕೇರಿ ಮುತ್ತಪ್ಪ ದೇವಾಲಯ ಬಳಿಯ 36 ವರ್ಷದ ಪುರುಷ, ಮಡಿಕೇರಿ ಮಲ್ಲಿಕಾರ್ಜುನ ನಗರದ 42 ವರ್ಷದ ಮಹಿಳೆ, 17 ವರ್ಷದ ಬಾಲಕ, 10 ವರ್ಷದ ಇಬ್ಬರು ಬಾಲಕಿಯರಿಗೆ ಸೋಂಕು ದೃಢಪಟ್ಟಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 1003ಕ್ಕೆ ಏರಿಕೆಯಾಗಿದ್ದು, ಈ ಪೈಕಿ 686 ಮಂದಿ ಗುಣಮುಖರಾಗಿದ್ದಾರೆ. 305 ಸಕ್ರಿಯ ಪ್ರಕರಣಗಳಿದ್ದು, 12 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್ಮೆಂಟ್ ವಲಯಗಳ ಸಂಖ್ಯೆ 255 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.