ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 16 ಹಾಗೂ ಮಧ್ಯಾಹ್ನ 13 ಮಂದಿಯಲ್ಲಿ ಹೊಸದಾಗಿ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1154ಕ್ಕೆ ಏರಿಕೆಯಾಗಿದೆ. ಈ ಪೈಕಿ 804 ಮಂದಿ ಗುಣಮುಖರಾಗಿದ್ದು, 334 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಪಿರಿಯಾಪಟ್ಟಣ ನವಿಲೂರಿನ 25 ವರ್ಷದ ಪುರುಷ, ಕುಶಾಲನಗರ ಗುಮ್ಮನಕೊಲ್ಲಿ ಚೌಡೇಶ್ವರಿ ಬಡಾವಣೆಯ 60 ವರ್ಷದ ಮಹಿಳೆ, ಕೂಡುಮಂಗಳೂರು ದೊಡ್ಡತ್ತೂರು ಗ್ರಾಮದ 40 ವರ್ಷದ ಮಹಿಳೆ, ಚೆಟ್ಟಳ್ಳಿ ಅಭ್ಯತ್ಮಂಗಲ ಶ್ರೀಮಂಗಲ ಎಸ್ಟೇಟ್ನ 49 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಕೊಡ್ಲಿಪೇಟೆ ಕಟ್ಟೆಪುರದ 39 ವರ್ಷದ ಪುರುಷ, ಮಡಿಕೇರಿ ಕಡಗದಾಳು ಗ್ರೀನ್ಸ್ ವಿಲ್ಲಾದ 42 ವರ್ಷದ ಮಹಿಳೆ, ಸುಂಟಿಕೊಪ್ಪ ಚೆಟ್ಟಳ್ಳಿ ರಸ್ತೆಯ ಶ್ರೀದೇವಿ ಲೇಔಟಿನ 53 ವರ್ಷದ ಪುರುಷ, ಮಾದಾಪುರ ಕಾರೆಕಾಡ್ ಗ್ರಾಮದ 45 ವರ್ಷದ ಪುರುಷ ಮತ್ತು 42 ವರ್ಷದ ಮಹಿಳೆ, ಮಾದಾಪುರ ಇಗ್ಗೋಡ್ಲುವಿನ ಸರ್ಕಾರಿ ಶಾಲೆ ಬಳಿಯ ಜಂಬೂರು ಬಾಣೆಯ 40, 48, 21 ವರ್ಷದ ಮಹಿಳೆಯರು, 21 ಮತ್ತು 26 ವರ್ಷದ ಪುರುಷರು, ಸೋಮವಾರಪೇಟೆ ಗರಗಂದೂರು ಗ್ರಾಮ ಮಲ್ಲಿಕಾರ್ಜುನ ಕಾಲೋನಿಯ 21 ವರ್ಷದ ಪುರುಷ ಮತ್ತು 51 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಶುಕ್ರವಾರ ಮಧ್ಯಾಹ್ನ ಸೋಮವಾರಪೇಟೆ ಕಲ್ಕಂದೂರು ಜಂಕ್ಷನ್ ಮಸೀದಿ ಬಳಿಯ 40 ವರ್ಷದ ಪುರುಷ, ಮಡಿಕೇರಿ ನಾಪೋಕ್ಲುವಿನ ಪಾರಣೆ ಅಂಚೆಯ ಕಲ್ಕಂದೂರು ಗ್ರಾಮದ 46 ವರ್ಷದ ಮಹಿಳೆ, ಕುಶಾಲನಗರ ಶಿರಂಗಾಲ ನೆಲ್ಲೂರು ಕೊಪ್ಪಲುವಿನ 35 ವರ್ಷದ ಪುರುಷ, ಕಾನೂರುವಿನ ತೂಚಮಕೇರಿ ಅಂಚೆಕಚೇರಿ ಬಳಿಯ 64 ವರ್ಷದ ಪುರುಷನಲ್ಲಿ ಸೋಂಕು ಗೋಚರಿಸಿದೆ.
ವೀರಾಜಪೇಟೆ ವಿಜಯನಗರ 1ನೇ ಹಂತದ 40 ವರ್ಷದ ಪುರುಷ ಮತ್ತು 27 ವರ್ಷದ ಮಹಿಳೆ, ವೀರಾಜಪೇಟೆ ಕಲ್ಲುಬಾಣೆ ಅಂಚೆಯ ಅರ್ಜಿ ಗ್ರಾಮದ 8 ವರ್ಷದ ಬಾಲಕಿ, ಮಡಿಕೇರಿ ನಾಪೋಕ್ಲುವಿನ ಮುಖ್ಯರಸ್ತೆಯ 65 ವರ್ಷದ ಮಹಿಳೆ, ಕುಶಾಲನಗರ ನೆಹರು ಬಡಾವಣೆಯ 59 ವರ್ಷದ ಮಹಿಳೆ, ಮಡಿಕೇರಿ ಕಾವೇರಿ ಲೇಔಟ್ನ ಕೆನರಾ ಬ್ಯಾಂಕ್ ಬಳಿಯ 22 ವರ್ಷದ ಮಹಿಳೆ. ಕುಶಾಲನಗರ ಗಾಯತ್ರಿ ಕಲ್ಯಾಣ ಮಂಟಪ ಬಳಿಯ 29 ವರ್ಷದ ಪುರುಷ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಗೋಣಿಕೊಪ್ಪ ಆಸ್ಪತ್ರೆ ವಸತಿಗೃಹದ 36 ವರ್ಷದ ಪುರುಷ, ವೀರಾಜಪೇಟೆ ಬಿಳುಗುಂದ ಗ್ರಾಮದ ಭಧ್ರಕಾಳಿ ದೇವಾಲಯ ಬಳಿಯ 47 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಇದುವರೆಗೆ 16 ಮಂದಿ ಸಾವಿಗೀಡಾಗಿದ್ದು, ಜಿಲ್ಲೆಯಲ್ಲಿನ ಕಂಟೈನ್ಮೆಂಟ್ ವಲಯಗಳ ಸಂಖ್ಯೆ 279ರಷ್ಟಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.