ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರ ಹೊಸದಾಗಿ 41 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.
ಸೋಮವಾರ ಬೆಳಗ್ಗೆ 15 ಮಂದಿಯಲ್ಲಿ ಹಾಗೂ ಮಧ್ಯಾಹ್ನ 26 ಮಂದಿಯಲ್ಲಿ ಕೊರೋನಾ ಸೋಂಕು ಗೋಚರಿಸಿದೆ.
ವೀರಾಜಪೇಟೆಯ ವಡ್ಡರಮಾಡು ಗ್ರಾಮವೊಂದರಲ್ಲೇ 11 ಪ್ರಕರಣ ವರದಿಯಾಗಿದೆ.
ಗ್ರಾಮದ 38 ವರ್ಷದ ಪುರುಷ, 10 ಮತ್ತು 12 ವರ್ಷದ ಬಾಲಕ, 30 ವರ್ಷದ ಮಹಿಳೆ, 4, 10 ಮತ್ತು 11 ವರ್ಷದ ಬಾಲಕ, 14 ವರ್ಷದ ಬಾಲಕಿ, 45 ವರ್ಷದ ಪುರುಷ, 16 ವರ್ಷದ ಬಾಲಕಿ ಹಾಗೂ 47 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಮತ್ತೊಂದೆಡೆ ಬೆಂಗಳೂರು ಪ್ರಯಾಣದ ಇತಿಹಾಸವಿರುವ ವೀರಾಜಪೇಟೆ ಚಿಕ್ಕಪೇಟೆಯ 29 ವರ್ಷದ ಪುರುಷ, ವೀರಾಜಪೇಟೆ ಚಾರ್ಮುಡಿಯ 57 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಮಡಿಕೇರಿ ಮಹದೇವಪೇಟೆಯ ಅಬ್ದುಲ್ ಕಲಾಂ ಲೇಔಟ್ನ 64 ವರ್ಷದ ಪುರುಷ, ಆಂಟಿಜನ್ ಪರೀಕ್ಷೆಯ ಮುಖಾಂತರ ಬೆಂಗಳೂರು ಪ್ರಯಾಣದ ಇತಿಹಾಸ ಹೊಂದಿರುವ ಸೋಮವಾರಪೇಟೆಯ ಅಬ್ಬೂರುಕಟ್ಟೆಯ 50 ವರ್ಷದ ಮಹಿಳೆಯಲ್ಲೂ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನದ ವೇಳೆಗೆ ಮತ್ತೆ 26 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಭಾಗಮಂಡಲದ ಪೊಲೀಸ್ ಇಲಾಖೆಯ 26 ವರ್ಷದ ಪುರುಷ, ಭಾಗಮಂಡಲ ಎ.ಎನ್.ಎಫ್ ವಸತಿಗೃಹದ 43 ವರ್ಷದ ಪುರುಷ ಸಿಬ್ಬಂದಿ, ಸುಂಟಿಕೊಪ್ಪ ಅಂದಗೋವೆಯ 40 ವರ್ಷದ ಪುರುಷ, ಸುಂಟಿಕೊಪ್ಪದ ಹರದೂರು ಗುಂಡಿಗುಟ್ಟಿಯ 30 ವರ್ಷದ ಮಹಿಳೆ ಮತ್ತು 9 ತಿಂಗಳ ಮಗು, ಕುಶಾಲನಗರ ನವಗ್ರಾಮದ ಕುಡ್ಲೂರುವಿನ 13 ವರ್ಷದ ಬಾಲಕಿ, ಸೋಮವಾರಪೇಟೆಯ ಅಬ್ಬೂರುಕಟ್ಟೆ ಯಲಕನೂರಿನ 56 ಮತ್ತು 38 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿರುವುದಾಗಿ ಅವರು ಹೇಳಿದ್ದಾರೆ.
ಬೆಂಗಳೂರು ಪ್ರಯಾಣದ ಇತಿಹಾಸ ಹೊಂದಿರುವ ಸೋಮವಾರಪೇಟೆ ಅಬ್ಬೂರು ಕಟ್ಟೆಯ 42 ವರ್ಷದ ಪುರುಷ, ಸೋಮವಾರಪೇಟೆಯ ಚೌಡ್ಲು ಗಾಂಧಿನಗರದ 39 ವರ್ಷದ ಮಹಿಳೆ ಮತ್ತು 22 ವರ್ಷದ ಪುರುಷ, ಕೊಡ್ಲಿಪೇಟೆಯ ಬೆಂಬಳೂರು ಅಂಚೆಯ ಸಿರಾ ಗ್ರಾಮದ 33 ವರ್ಷದ ಪುರುಷ, ಚೆಟ್ಟಳ್ಳಿ ಚೇರಳಶ್ರೀಮಂಗಲದ 11 ವರ್ಷದ ಬಾಲಕಿ, ಕಾಜೂರು ಗ್ರಾಮದ 39 ವರ್ಷದ ಪುರುಷ, ಐಗೂರು ಸ್ಪ್ರಿಂಗ್ ವ್ಯಾಲಿ ಸಮೀಪದ 46 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ಕುಶಾಲನಗರದ ಮದಲಾಪುರ ಬಾಡಬೆಟ್ಟದ 32 ಮತ್ತು 65 ವರ್ಷದ ಪುರುಷ, ಮಡಿಕೇರಿಯ ಎಲ್ ಐ ಜಿ ವಸತಿ ಗೃಹದ 55 ವರ್ಷದ ಪುರುಷ ಮತ್ತು 44 ವರ್ಷದ ಮಹಿಳೆ, ಕುಶಾಲನಗರ ಮುಳ್ಳುಸೋಗೆ ಕುವೆಂಪು ಲೇಔಟ್ನ 60 ವರ್ಷದ ಪುರುಷ, ವೀರಾಜಪೇಟೆ ಕುಂಜಿಲಗೇರಿಯ 19 ವರ್ಷದ ಮಹಿಳೆ, ವೀರಾಜಪೇಟೆ ನಾತಂಗಾಲದ 55 ವರ್ಷದ ಮಹಿಳೆ, ರ್ಯಾಪಿಡ್ ಆಂಟಿಜೆನ್ ಪರೀಕ್ಷೆಯ ಮುಖಾಂತರ ಮಡಿಕೇರಿ ಪೊಲೀಸ್ ವಸತಿ ಗೃಹದ 44 ವರ್ಷದ ಮಹಿಳೆ, ವೀರಾಜಪೇಟೆಯ ಸುಂಕದಕಟ್ಟೆಯ 44 ವರ್ಷದ ಮಹಿಳೆ, 28 ವರ್ಷದ ಪುರುಷ ಮತ್ತು 25 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 513ಕ್ಕೆ ಏರಿಕೆಯಾಗಿದ್ದು, 322 ಮಂದಿ ಗುಣಮುಖರಾಗಿದ್ದಾರೆ. 181 ಸಕ್ರಿಯ ಪ್ರಕರಣಗಳಿದ್ದು, 10 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್ಮೆಂಟ್ ವಲಯಗಳ ಸಂಖ್ಯೆ 127ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.