Tuesday, July 5, 2022

Latest Posts

ಕೊಡಗು| ಜಿಲ್ಲೆಯ ಜನತೆಯ ಆತಂಕ ದೂರ: ಗುರುವಾರ ಹೊಸ ಪ್ರಕರಣ ವರದಿಯಾಗಿಲ್ಲ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗುರುವಾರವೂ ಕೊರೋನಾ ಸೋಂಕಿನ ಯಾವುದೇ ಪ್ರಕರಣ ವರದಿಯಾಗಿಲ್ಲ. ಇದರಿಂದಾಗಿ ಜಿಲ್ಲೆಯ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ನೆರೆಯ ಜಿಲ್ಲೆಗಳಲ್ಲಿ ಕೋವಿಡ್೧-೯ ಸೋಂಕಿನ ಪ್ರಮಾಣ ದಿನೇದಿನೇ ಅಧಿಕಗೊಳ್ಳುತ್ತಿದ್ದು, ಇದು ಸಹಜವಾಗಿಯೇ ಕೊಡಗಿನ ಜನರನ್ನೂ ಆತಂಕಕ್ಕೆ ತಳ್ಳಿತ್ತು. ಆದರೆ ಸಂಜೆಯ ಬುಲೆಟಿನ್ ಪ್ರಕಟವಾದ ಬಳಿಕ ಯಾವುದೇ ಪ್ರಕರಣ ವರದಿಯಾಗದಿರುವುದು ಜನರಲ್ಲಿ ಸಮಾಧಾನ ಮೂಡಿಸಿದೆ.
ಈ ನಡುವೆ ಕೋವಿಡ್-೧೯ ರ ಸಂಬಂಧ ಜಿಲ್ಲಾಡಳಿತ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಇತರೆ ದೇಶ/ರಾಜ್ಯಗಳಿಂದ ಪಾಸ್‌ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರನ್ನು ಕಡ್ಡಾಯವಾಗಿ ೧೪ ದಿನಗಳ ಕಾಲ ಸಾಂಸ್ಥಿಕ ಸಂಪರ್ಕ ತಡೆಯಲ್ಲಿಡಲಾಗುತ್ತಿದೆ.
ಅದರಂತೆರಿತರ ದೇಶದಿಂದ ಬಂದಿರುವ ೧೬, ಇತರ ರಾಜ್ಯಗಳ ೨೭೯ ಮಂದಿ ಸೇರಿದಂತೆ ಒಟ್ಟು ೨೯೫ ಮಂದಿ ಸಂಪರ್ಕ ತಡೆಯಲ್ಲಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದುವರೆಗೆ ಒಟ್ಟು ೨೪೦೪ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಗಿದ್ದು,ಈ ಪೈಕಿ ೨೨೬೩ ಪ್ರಕರಣಗಳಲ್ಲಿ ನೆಗೆಟಿವ್ ವರದಿ ಬಂದಿದ್ದು, ೧೩೮ ಪ್ರಕರಣಗಳಲ್ಲಿ ವರದಿ ನಿರೀಕ್ಷಿಸಲಾಗುತ್ತಿದೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಪ್ರಸಕ್ತ ೭೩ಮಂದಿ ದಾಖಲಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss