Sunday, June 26, 2022

Latest Posts

ಕೊಡಗು ಜಿಲ್ಲೆಯ 78 ಸಹಕಾರ‌ ಸಂಘಗಳಲ್ಲಿ 8.21 ಕೋಟಿ ರೂ.ದುರುಪಯೋಗ: ಸಚಿವ ಎಸ್.ಟಿ.ಸೋಮಶೇಖರ್

ಹೊಸದಿಗಂತ ವರದಿ, ಮಡಿಕೇರಿ:

ಕೊಡಗು ಜಿಲ್ಲೆಯ 78 ಸಹಕಾರ‌ ಸಂಘಗಳಿಂದ ಒಟ್ಟು 821.87 ಲಕ್ಷ ರೂ. ದುರುಪಯೋಗವಾಗಿರುವುದಾಗಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ವಿಧಾನ ಮಂಡಲದ ಅಧಿವೇಶನದಲ್ಲಿ ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಿಲ್ಲೆಯಲ್ಲಿ ಒಟ್ಟು 73 ಪ್ರಾಥಮಿಕ ಕೃಷಿ ಪತ್ತಿನ ಹಾಗೂ 269 ಇತರೆ ಸಹಕಾರ ಸಂಘಗಳು ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ 342 ಸಹಕಾರ ಸಂಘಗಳಿವೆ. ಈ ಪೈಕಿ ಒಟ್ಟು 78 ಸಹಕಾರ ಸಂಘಗಳಿಂದ ರೂ. 821.87 ಲಕ್ಷ ಹಣ ದುರುಪಯೋಗವಾಗಿದೆ ಎಂದು ವಿವರಿಸಿದರು.
ದುರುಪಯೋಗವಾದ ಹಣದ ಪೈಕಿ 195.02 ಲಕ್ಷ ರೂ. ವಸೂಲಾತಿಯಾಗಿದ್ದು, ಸಂಬಂಧಪಟ್ಟ ಸಂಘಗಳಿಗೆ ಜಮಾ ಆಗಿದೆ. ಒಟ್ಟು 626.85ಲಕ್ಷ ರೂ. ವಸೂಲಾತಿಗೆ ಬಾಕಿ ಇದ್ದು, ಬಾಕಿ ಮೊತ್ತದ ವಸೂಲಾತಿಗೆ ಸಹಕಾರ ಸಂಘಗಳ ಕಾಯ್ದೆ ಪ್ರಕಾರ ವ್ಯಾಜ್ಯಗಳನ್ನು ದಾಖಲಿಸಿ ಇತ್ಯರ್ಥಗೊಳಿಸಲು ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss