Wednesday, August 10, 2022

Latest Posts

ಕೊಡಗು| ತವರಿಗೆ ಹೊರಟ ಉತ್ತರ ಪ್ರದೇಶದ ಕಾರ್ಮಿಕರು

ಮಡಿಕೇರಿ :ಜಿಲ್ಲಾಡಳಿತ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಉತ್ತರ ಪ್ರದೇಶ ವಲಸೆ ಕಾರ್ಮಿರನ್ನು ಕಳುಹಿಸಿಕೊಡಲಾಯಿತು.
ಮಡಿಕೇರಿಯಿಂದ ೨ ಕೆಎಸ್‌ಆರ್‌ಟಿಸಿ ಬಸ್ಸು, ಕುಶಾಲನಗರದಿಂದ ೨, ಕೊಡ್ಲಿಪೇಟೆಯಿಂದ ಮತ್ತು ವೀರಾಜಪೇಟೆಯಿಂದ ತಲಾ ಒಂದು ಬಸ್ ಸೇರಿದಂತೆ ಒಟ್ಟು ೬ ಬಸ್ಸುಗಳಲ್ಲಿ ಉತ್ತರಪ್ರದೇಶದ ೪ ಮಕ್ಕಳು ಹಾಗೂ ೨೬೬ ಕಾರ್ಮಿಕರು ಸೇರಿ ಒಟ್ಟು ೨೭೦ ಜನ ವಲಸೆ ಕಾರ್ಮಿಕರನ್ನು ಜಿಲ್ಲಾಧಿಕಾರಿ ಅವರ ಆದೇಶದಂತೆ ಕಳುಹಿಸಿಕೊಡಲಾಯಿತು.
ತಾಲೂಕು ಆಡಳಿತದಿಂದ ಮೂಲಕ ಕುಡಿಯುವ ನೀರು, ಬಿಸ್ಕತ್ತು ಮತ್ತು ಉಪಾಹಾರ ನೀಡಿ, ಕಾರ್ಮಿಕ ಇಲಾಖೆಯುಂದ ಮಾಸ್ಕ್ ಮತ್ತು ಸ್ಯಾನಿಟೈಜರ್ ನೀಡಿ ಕಾರ್ಮಿಕರನ್ನು ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣಕ್ಕೆ ಕಳುಹಿಸಿಕೊಡಲಾಯಿತು.
ಬಳಿಕ ರೈಲ್ವೆ ನಿಲ್ದಾಣದಲ್ಲಿ ದಾಖಲೆ ತೋರಿಸಿ ವೈದ್ಯಕೀಯ ಪರೀಕ್ಷೆ (ಸ್ಕ್ರಿನಿಂಗ್) ಮಾಡಿಸಿ ರೈಲ್ವೆ ನಿಲ್ದಾಣಕ್ಕೆ ತಲುಪಿಸಿ ವಿಶೇಷ ರೈಲಿನ ಮೂಲಕ ಉತ್ತರಪ್ರದೇಶಕ್ಕೆ ಕಳುಸಿಕೊಡಲಾಯಿತು ಎಂದು ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎಂ ಯತ್ನಟ್ಟಿ ಅವರು ತಿಳಿಸಿದ್ದಾರೆ.
ಈ ಸಂದರ್ಭ ಉಪ ವಿಭಾಗಧಿಕಾರಿ ಟಿ.ಜವರೇಗೌಡ, ಸೋಮವಾರಪೇಟೆ ತಹಶೀಲ್ದಾರ್ ಗೋವಿಂದ ರಾಜು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಸಿರಾಜ್ ಅಹ್ಮದ್, ಗ್ರಾಮಲೆಕ್ಕಾಧಿಕಾರಿ ಸಣ್ಣ ರುದ್ರಪ್ಪ, ಪೋಲಿಸ್ ಅಧಿಕಾರಿ ಐ.ಪಿ.ಮೇದಪ್ಪ, ಮಡಿಕೇರಿ ನಗರಸಭೆ ಸಿಬ್ಬಂದಿ ಬಶೀರ್ ಇತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss