Friday, August 19, 2022

Latest Posts

ಕೊಡಗು: ಭಾನುವಾರ ಬೆಳಗ್ಗೆ 14 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ 14 ಹೊಸ ಕೊರೋನಾ ಸೋಂಕು ಪ್ರಕರಣಗಳು ದೃಢಪಟ್ಟಿದೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಭಾಗಮಂಡಲ ಬಿಸಿಎಂ ಹಾಸ್ಟೆಲ್ ನ 31 ವರ್ಷದ ಪುರುಷ, ಭಾಗಮಂಡಲ ಭೂತನಕಾಡುವಿನ 29 ವರ್ಷದ ಮಹಿಳೆ, 66,25 ವರ್ಷದ ಪುರುಷರು ಮತ್ತು 55ವರ್ಷದ ಮಹಿಳೆ,ಮಡಿಕೇರಿ ಕ್ಲಬ್ ಮಹೀಂದ್ರದ 22ಮತ್ತು 21 ವರ್ಷದ ಪುರುಷರು,ಮಡಿಕೇರಿ ಬೊಯಿಕೇರಿಯ ಸ್ಯಾಂಡಲ್ ಕಾಡು ಎಸ್ಟೇಟಿನ 55 ಮತ್ತು 45 ವರ್ಷದ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ.

ಕುಶಾಲನಗರ ಹಾರಂಗಿ ರಸ್ತೆಯ ವೆಂಕಟೇಶ್ವರ ಬಡಾವಣೆ 4ನೇ ಬ್ಲಾಕಿನ 41ವರ್ಷದ ಪುರುಷ, ಮಡಿಕೇರಿ ಹಾಕತ್ತೂರುವಿನ ಬಿಳಿಗಿರಿ ಮಸೀದಿ ಎದುರಿನ 24 ವರ್ಷದ ಪುರುಷ,ಕುಶಾಲನಗರ ಗುಂಡುರಾವ್ ಲೇಔಟಿನ 38ವರ್ಷದ ಮಹಿಳೆ ಮತ್ತು 48 ವರ್ಷದ ಪುರುಷ, ವೀರಾಜಪೇಟೆ ಮೀನುಪೇಟೆಯ 3ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 2251ರಷ್ಟಾಗಿದ್ದು, ಈ ಪೈಕಿ 1852 ಮಂದಿ ಗುಣಮುಖರಾಗಿದ್ದಾರೆ. 369 ಸಕ್ರಿಯ ಪ್ರಕರಣಗಳಿದ್ದು, 30 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 320 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!