Friday, July 1, 2022

Latest Posts

ಕೊಡಗು| ಮಂಗಳವಾರ 11 ಮಂದಿಯಲ್ಲಿ ಕೊರೋನಾ ಸೋಂಕು ದೃಢ, ಒಟ್ಟು ಸಂಖ್ಯೆ 1014ಕ್ಕೆ ಏರಿಕೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8 ಹಾಗೂ ಮಧ್ಯಾಹ್ನ 3 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 1014ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಮಡಿಕೇರಿ ಗೌಳಿ ಬೀದಿಯ ಹಳೆ ಇಂಡೇನ್ ಗ್ಯಾಸ್ ಕಚೇರಿ ಎದುರಿನ 30 ವರ್ಷದ ಪುರುಷ, ಚಾಮುಂಡೇಶ್ವರಿ ನಗರದ ಅಂಗನವಾಡಿ ಬಳಿಯ 15 ವರ್ಷದ ಬಾಲಕ, ಮಡಿಕೇರಿ ಮಹದೇವಪೇಟೆಯ ಕಾಜಲ್ ಲೇಔಟ್‍ನ 3 ನೇ ಬ್ಲಾಕ್‍ನ 50 ವರ್ಷದ ಪುರುಷ, ಕಾನ್ವೆಂಟ್ ರಸ್ತೆಯ ಮುತ್ತಪ್ಪ ದೇವಾಲಯ ಬಳಿಯ 47 ವರ್ಷದ ಮಹಿಳೆ, ವೀರಾಜಪೇಟೆ ಐಮಂಗಲ ಕೊಮ್ಮೆತೋಡುವಿನ ಅಂಚೆ ಕಚೇರಿ ಬಳಿಯ 55 ವರ್ಷದ ಮಹಿಳೆ, ಕುಶಾಲನಗರ ನಿಜಾಮುದ್ದೀನ್ ಲೇಔಟ್‍ನ 37 ಮತ್ತು 40 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಮಂಗಳವಾರ ಮಧ್ಯಾಹ್ನ 2 ಗಂಟೆ ವೇಳೆಗೆ 3 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಮಾರ್ಕೆಟ್ ರಸ್ತೆಯ ನಗರ ಆರೋಗ್ಯ ಕೇಂದ್ರ ಬಳಿಯ 62 ವರ್ಷದ ಪುರುಷ, ಮಡಿಕೇರಿ ಕನಕದಾಸ ರಸ್ತೆಯ ರಾಯಲ್ ಬಿರಿಯಾನಿ ಹೊಟೇಲ್ ಬಳಿಯ 17 ವರ್ಷದ ಪುರುಷ, ಕುಶಾಲನಗರ ಸಿದ್ದಯ್ಯ ಪುರಾಣಿಕ್ ಬಡಾವಣೆಯ 5 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ.
ಇದರೊಂದಿಗೆ ಜಿಲ್ಲೆಯಲ್ಲಿನ ಕೋವಿಡ್-19 ಸೋಂಕಿತರ ಸಂಖ್ಯೆ 1014ರಷ್ಟಾಗಿದ್ದು, ಈ ಪೈಕಿ 710 ಮಂದಿ ಗುಣಮುಖರಾಗಿದ್ದಾರೆ. 292 ಸಕ್ರಿಯ ಪ್ರಕರಣಗಳಿದ್ದು, 12 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 258ರಷ್ಟಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ವಿವರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss