spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊಡಗು: ಮತ್ತೆ 13 ಮಂದಿಗೆ ಕೊರೋನಾ, ದ್ವಿಶತಕ ದಾಟಿದ ಸೋಂಕಿತರ ಸಂಖ್ಯೆ

- Advertisement -Nitte

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಮತ್ತೆ 13 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದ್ವಿಶತಕ ದಾಟಿದೆ.
ಮಂಗಳವಾರ ಬೆಳಗ್ಗೆ 12 ಮಂದಿಯಲ್ಲಿ ಕಾಣಿಸಿಕೊಂಡಿದ್ದ ಮಹಾಮಾರಿ ಕೊರೋನಾ, ಮಧ್ಯಾಹ್ನದ ವೇಳೆಗೆ ಮತ್ತೆ 13 ಮಂದಿಯಲ್ಲಿ ವಕ್ಕರಿಸಿಕೊಳ್ಳುವುದರೊಂದಿಗೆ ಒಂದೇ ದಿನದಲ್ಲಿ 25 ಮಂದಿಯನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.
ಕುಶಾಲನಗರ ಜನತಾ ಕಾಲೋನಿಯ ಜ್ವರದ ಲಕ್ಷಣವಿದ್ದ 17 ವರ್ಷದ ಯುವತಿ, ಅಂತರ ಜಿಲ್ಲೆಯ ಪ್ರವಾಸದ ಇತಿಹಾಸವಿರುವ ಸಿದ್ದಾಪುರದ ಹಳೆಸಿದ್ದಾಪುರ ಹೆಚ್‍ಎಸ್ ರಸ್ತೆಯ 70 ವರ್ಷ ಪುರುಷ ಹಾಗೂ 43 ವರ್ಷದ ಮಹಿಳೆ, ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿಯ ಕೂರ್ಗಳ್ಳಿ ಎಸ್ಟೇಟ್‍ನ, ಅಂತರ ರಾಜ್ಯ ಪ್ರವಾಸ ಇತಿಹಾಸವಿರುವ 20 ವರ್ಷದ ಮಹಿಳೆ, ಅಂತರ ರಾಜ್ಯ ಪ್ರವಾಸದ ಇತಿಹಾಸವಿರುವ ಸಿದ್ದಾರಪುರ ಎಂ.ಜಿ.ರಸ್ತೆಯ 47 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.
ಮತ್ತೊಂದೆಡೆ ಗೋಣಿಕೊಪ್ಪದ ಹರಿಶ್ಚಂದ್ರಪುರ ಜೈಹಿಂದ್ ವರ್ಕ್‍ಶಾಪ್ ಬಳಿಯ ಜ್ವರ ಲಕ್ಷಣವಿದ್ದ 43 ವರ್ಷದ ಮಹಿಳೆ, ಪೊನ್ನಂಪೇಟೆಯ ಹುದಿಕೇರಿ ರಸ್ತೆಯ ಮೇಟಗೇರಿಯ ಜ್ವರ ಲಕ್ಷಣವಿದ್ದ 42 ವರ್ಷದ ಪುರುಷ, ಮೂಲತಃ ಹುಂಡಿ ಗ್ರಾಮದ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದು, ಪ್ರಸಕ್ತ ಬಾಡಗ ಬಾಣಂಗಾಲದಲ್ಲಿ ನೆಲೆಸಿರುವ 10 ಮತ್ತು 15 ವರ್ಷದ ಬಾಲಕರು ಹಾಗೂ 33 ವರ್ಷದ ಮಹಿಳೆ, ಶನಿವಾರಸಂತೆಯ ಗುಂಡೂರಾವ್ ಬಡಾವಣೆಯ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ 20 ವರ್ಷದ ಪುರುಷ, ಅಂತರ ಜಿಲ್ಲೆ ಇತಿಹಾಸವಿದ್ದು, ಜ್ವರ ಲಕ್ಷಣವಿದ್ದ ಮಡಿಕೇರಿ ಮಹದೇವಪೇಟೆಯ 52 ವರ್ಷದ ಪುರುಷ, ತೊರೆನೂರು ಗ್ರಾಮದ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಅಲ್ಲಿನ ಗ್ರಾಮ ಪಂಚಾಯತ್ ಮುಂಭಾಗದ 36 ವರ್ಷ ಪ್ರಾಯದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸೋಂಕಿತರ ಸಂಖ್ಯೆ 209ಕ್ಕೇರಿದ್ದು, ಈ ಪೈಕಿ 69 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ,ಮೂರು ಮಂದಿ ಸಾವಿಗೀಡಾಗಿದ್ದಾರೆ. 137 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಂಗಳವಾರ ಕೊಡಗು ಜಿಲ್ಲೆಯಲ್ಲಿ ಹೊಸದಾಗಿ 16 ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದ್ದು, ಇದರೊಂದಿಗೆ ನಿಯಂತ್ರಿತ ಪ್ರದೇಶಗಳ ಸಂಖ್ಯೆಯೂ 92ಕ್ಕೆ ಏರಿಕೆಯಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss