Thursday, August 11, 2022

Latest Posts

ಕೊಡಗು | ವಲಸಿಗರಿಗೆ 5 ಕೆ.ಜಿ. ಅಕ್ಕಿ, 1 ಕೆ.ಜಿ. ಕಡಲೆ ಕಾಳು ವಿತರಣೆ

ಮಡಿಕೇರಿ: ಜೀವನ ನಿರ್ವಹಣೆಗಾಗಿ ಕೊಡಗು ಜಿಲ್ಲೆಗೆ ಬಂದು ನೆಲೆಸಿರುವ ವಲಸಿಗರಿಗೆ ಆತ್ಮ ನಿರ್ಭರ್ ಭಾರತ್ ಯೋಜನೆ ಅಡಿಯಲ್ಲಿ
ಮೇ ಮತ್ತು ಜೂನ್ ತಿಂಗಳಿಗೆ ತಲಾ ೫ ಕೆ.ಜಿ. ಅಕ್ಕಿ ಹಾಗೂ ೧ ಕೆ.ಜಿ. ಕಡಲೆ ಕಾಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶ ಗೌರವ್ ಕುಮಾರ್ ಶೆಟ್ಟಿ ಅವರು ತಿಳಿಸಿದ್ದಾರೆ.
ಹೊರ ರಾಜ್ಯ, ಹೊರ ಜಿಲ್ಲೆ, ಹೊರ ತಾಲೂಕಿನಿಂದ ಜೀವನ ನಿರ್ವಹಣೆಗಾಗಿ ಬಂದು ನೆಲೆಸಿರುವ ವಲಸಿಗರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದೆಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಆದೇಶದಂತೆ ಈ ಯೋಜನೆಯಡಿ ಬರುವ ಫಲಾನುಭವಿಗಳಿಗೆ ರಾಜ್ಯದಲ್ಲಿ ಅಥವಾ ಬೇರಾವುದೇ ರಾಜ್ಯಗಳಲ್ಲಿ ಪಡಿತರ ಚೀಟಿ ಹೊಂದಿರಬಾರದು. ಇದನ್ನು ಪರಿಶೀಲಿಸಿ ಖಾತ್ರಿ ಪಡಿಸಲು ಎಲ್ಲಾ ಫಲಾನುಭವಿಗಳಿಂದಲೂ ಅವರ ಆಧಾರ್ ಸಂಖ್ಯೆಯನ್ನು ಪಡೆದು ಆನ್ಲೈನ್ ತಂತ್ರಾಂಶದಲ್ಲಿ ಪರಿಶೀಲಿಸಿ ವಿತರಿಸಲಾಗುತ್ತದೆ. ಹಾಗಾಗಿ ಪ್ರತಿ ಫಲಾನುಭವಿಯೂ ಆಧಾರ್ ಸಂಖ್ಯೆಯ ಮುಖಾಂತರ ಪರಿಶೀಲಿಸಿ ಅವರ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಓಟಿ ಬಂದ ನಂತರ, ಈ ಓಟಿಪಿ ಯನ್ನು ದಾಖಲಿಸಿ ಪಡಿತರ ವಿತರಣೆಗೆ ಕ್ರಮವಹಿಸಲಾಗುವುದು ಅಥವಾ ಬಯೋ ಪಡೆಯುವುದರ ಮುಖಾಂತರ ಪಡಿತರ ವಿತರಣೆಗೆ ಕ್ರಮವಹಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.
ಮೇ, ೩೧ ರವರೆಗೆ ಮೇ ತಿಂಗಳ ಅಕ್ಕಿ ಹಾಗೂ ೧ ರಿಂದ ಜೂನ್ ೧೦ ರವರೆಗೆ ಜೂನ್ ಮಾಹೆಯ ಅಕ್ಕಿ ಮತ್ತು ಮೇ ಮತ್ತು ಜೂನ್ ಮಾಹೆಗಳ ಕಡಲೆಕಾಳನ್ನು ವಿತರಣೆ ಮಾಡಲಾಗುವದು. ಕೋವಿಡ್-೧೯ ವೈರಸ್ ಹರಡುವ ಭೀತಿ ಇರುವುದರಿಂದ ಫಲಾನುಭವಿಗಳು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ತೆರಳಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನೂಕು ನುಗ್ಗಲಿಗೆ ಅವಕಾಶ ನೀಡದೆ ಆಹಾರ ಧಾನ್ಯಗಳನ್ನು ಪಡೆದುಕೊಳ್ಳುವಂತೆ ಅವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ತಾಲೂಕು ಆಹಾರ ಶಿರಸ್ತೆದಾರರ/ಆಹಾರ ನಿರೀಕ್ಷಕರಾದ ಮಡಿಕೇರಿ ತಾಲೂಕಿಗೆ ಜಿ.ಜಿ.ಪ್ರಭುಶಂಕರ್ ಮೊ.ಸಂ.೯೯೭೨೩೬೪೩೦೩, ಸೋಮವಾರಪೇಟೆ ತಾಲೂಕಿಗೆ ಎಲ್. ಮಂಜುನಾಥ್ ೯೧೬೪೨೭೨೧೪೪, ಕೆ.ಸಿ.ರಾಮಚಂದ್ರ ೮೫೫೩೮೬೯೬೯೭ ಮತ್ತು ವೀರಾಜಪೇಟೆ ತಾಲೂಕಿಗೆ ಎಸ್.ಚಂದ್ರನಾಯಕ ೯೯೦೦೫೯೮೫೨೨ ನ್ನು ಸಂಪರ್ಕಿಸಬಹುದು ಎಂದು ಅವರು ವಿವರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss