Thursday, October 29, 2020
Thursday, October 29, 2020

Latest Posts

ಭಯೋತ್ಪಾದಕ ದಾಳಿಗೆ ತತ್ತರಿಸಿದ ಫ್ರಾನ್ಸ್ ಜನತೆಯ ದು:ಖದಲ್ಲಿ ಭಾರತ ಪಾಲುದಾರ: ಮೋದಿ

ಹೊಸದಿಲ್ಲಿ: ಫ್ರಾನ್ಸ್‌ನ ಚರ್ಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ಮೋದಿ ಖಂಡಿಸಿದ್ದು, ಜಾಗತಿಕ ಉಗ್ರವಾದದ ವಿರುದ್ಧ ಭಾರತ-ಫ್ರಾನ್ಸ್ ಜಂಟಿಯಾಗಿ ಹೋರಾಡಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇಂದು ನೈಸ್ ನಗರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು...

ಸ್ವಯಂ ನಿವೃತ್ತಿ ಪಡೆದ ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಎ.ಆರ್. ಪ್ರಕಾಶ್

ಮೈಸೂರು : ವಾರ್ತ ಇಲಾಖೆ ಜಂಟಿ ನಿರ್ದೇಶಕರಾದ ಎ.ಆರ್. ಪ್ರಕಾಶ್ ಅವರು ಗುರುವಾರ ಸ್ವಯಂ ನಿವೃತ್ತಿ ಪಡೆದರು. ಅವರು ಹೊಸಪೇಟೆ, ಕಲಬುರಗಿ, ಮೈಸೂರು ಹಾಗೂ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಸ್ವಯಂ ನಿವೃತ್ತಿ...

ಚಿಂದಿ ಆಯುತ್ತಿದ್ದ ಬಡ ಹುಡುಗನ ಹೆಜ್ಜೆಯೀಗ ವೈದ್ಯಕೀಯ ರಂಗದೆಡೆಗೆ!

ಲಕ್ನೋ: ಪ್ರತಿಭೆಗೆ ಬಡತನವಿಲ್ಲ. ಮನಸ್ಸಿಟ್ಟು ,ಪ್ರಯತ್ನಪಟ್ಟು ಯಾವುದಾದರೂ ಗುರಿಯೆಡೆಗೆ ನಡೆದಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ಇದಕ್ಕೆ ನೇರ ಸಾಕ್ಷಿ ಚಿಂದಿ ಆಯ್ದು ಬದುಕಿನ ಬಂಡಿ ಎಳೆಯುವ ಬಡ ಕುಟುಂಬದ ಹುಡುಗ ಅರವಿಂದ್ ಕುಮಾರ್. ಚಿಂದಿ...

ಕೊಡಗು| ಶೇ.70 ಮಂದಿ ಸೋಂಕಿತರಿಗೆ ಕೊರೋನಾದ ಲಕ್ಷಣಗಳೇ ಇಲ್ಲ: ಫೇಸ್ ಬುಕ್ ಲೈವ್ ನಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್

ಕೊಡಗು: ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿತ ಪೈಕಿ ಶೇ. 70 ಮಂದಿಗೆ ಸೋಂಕಿನ ಲಕ್ಷಣವಿರುವುದೇ ಇಲ್ಲ. ಕೊವೀಡ್ನಿಂಾದಾಗಿ ಬಹುತೇಕರಿಗೆ ಆರೋಗ್ಯ ಸಂಬಂಧಿತ ಸಮಸ್ಯೆಯೇ ಉಂಟಾಗಿಲ್ಲ. ಆದರೆ, ಸೋಂಕಿತರನ್ನು ಗ್ರಾಮಸ್ಥರು ಸಂಶಯದಿಂದ ನೋಡುವಂತಾಗಿದ್ದು, ಇದರಿಂದಾಗಿ ಸೋಂಕಿತರು ಮುಜುಗರಕ್ಕೀಡಾಗುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಬೇಸರ ವ್ಯಕ್ತಪಡಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಸಂಜೆ ಮೊದಲ ಬಾರಿಗೆ ಆಯೋಜಿಸಲಾಗಿದ್ದ ‘ಫೇಸ್ ಬುಕ್ ಲೈವ್’ ನಲ್ಲಿ ಮಾತನಾಡಿದ ಅವರು, ಸೋಂಕು ಬಂದರೂ ಕೊಡಗಿನಲ್ಲಿ ಸೋಂಕಿತರು ಅತ್ಯಂತ ಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಆದರೂ ಕೆಲವರು ಸೋಂಕಿನ ಪ್ರಾರಂಭಿಕ ಲಕ್ಷಣಗಳಿದ್ದಾಗಲೂ ಅನೇಕ ಕಡೆ ಓಡಾಡುತ್ತಿದ್ದಾರೆ. ಇಂತಹವರು ತಮ್ಮ ವರ್ತನೆ ಬದಲಿಸಿಕೊಂಡು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಾಧ್ಯವಾದಷ್ಟು ಮನೆಯಲ್ಲೇ ಇರಿ: ಬೆಂಗಳೂರಿನಿಂದ ಬಂದವರು ಆದಷ್ಟು ದಿನ ಮನೆಯಲ್ಲಿಯೇ ಇರಿ. ಬೇರೆಯವರ ಮನೆಗಳಿಗೆ ತೆರಳದಿರಿ ಎಂದು ಮನವಿ ಮಾಡಿದ ಅವರು, ಸೋಂಕಿತರು ಕೊಡಗಿಗೆ ಬಂದ ಮೇಲೆ ಕಡ್ಡಾಯವಾಗಿ ಕ್ವಾರಂಟೈನ್ನುಲ್ಲಿರಿ. ಹೊರ ಜಿಲ್ಲೆಯಿಂದ ಕೊಡಗಿಗೆ ಬಂದವರಿಗೆ ಕೆಲವು ನಿಯಮಗಳು ಇದ್ದು ಇದನ್ನು ಕಡ್ಡಾಯವಾಗಿ ಪಾಲಿಸಿ ಎಂದೂ ಸಲಹೆ ಮಾಡಿದರು.

ಸೋಂಕಿತರಿಗೆ ವೈದ್ಯರೇ ನೇರವಾಗಿ ಸೋಂಕು ತಗುಲಿದ ಮಾಹಿತಿ ನೀಡುತ್ತಾರೆ. ಗಾಬರಿಯಾಗಬೇಕಾಗಿಲ್ಲ. ಮನೆಯಲ್ಲಿಯೇ ಸೋಂಕಿತರು ವೈದ್ಯಕೀಯ ಸಿಬ್ಬಂದಿ ಬರುವವರೆಗೆ ಇರಬೇಕು. ಮನೆಯಲ್ಲಿಯೇ ಸುಸಜ್ಜಿತ ಸೌಕರ್ಯವಿದ್ದರೆ, ಸೋಂಕಿತರು ಹೆಚ್ಚು ಅನಾರೋಗ್ಯವಿಲ್ಲದೆ ಆರೋಗ್ಯದಲ್ಲಿ ನಾರ್ಮಲ್ ಆಗಿದ್ದಾರೆ ಎಂದಾದರೆ ವೈದ್ಯರ ಸಲಹೆ ಮೇರೆಗೆ ಮನೆಗೆ ಕಳುಹಿಸಲಾಗುತ್ತದೆ ಎಂದೂ ಅವರು ಹೇಳಿದರು.
ಗೃಹ ಸಂಪರ್ಕ ತಡೆಯಲ್ಲಿದ್ದವರನ್ನು ಪ್ರತೀ ದಿನ ವೈದ್ಯರು ತಪಾಸಣೆ ಮಾಡುವುದಿಲ್ಲ. ಆದರೆ ವೈದ್ಯಕೀಯ ವಿದ್ಯಾರ್ಥಿಗಳು ಪ್ರತೀ ನಿತ್ಯ ಮಾತನಾಡಿ ಸಮಸ್ಯೆಯಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಸಮಸ್ಯೆಗಳಿದ್ದಲ್ಲಿ ಅವರನ್ನ ಕೋವಿಡ್ ಆಸ್ಪತ್ರೆಗೆ ಸಾಗಿಸಲಾಗುತ್ತದೆ ಎಂದೂ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಸೋಂಕಿತರನ್ನು ಒಂದೇ ವಾಹನದಲ್ಲಿ ಕರೆದೊಯ್ಯುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲಾ ಆರೋಗ್ಯಾಧಿಕಾರಿಗಳು ತಾಲೂಕು ಆರೋಗ್ಯಾಧಿಕಾರಿಗಳ ಮಾಹಿತಿ ಮೇರೆಗೆ ಅಂಬ್ಯುಲೆನ್ಸ್ನಗ ರೂಟ್ ಬಗ್ಗೆ ನಿರ್ಧರಿಸುತ್ತಾರೆ. ಒಂದು ಪ್ರದೇಶದಿಂದ ಆ ಪ್ರದೇಶದ ಸೋಂಕಿತರನ್ನು ಮಾತ್ರ ಕರೆದೊಯ್ಯಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಸೋಂಕಿತರಿಗೆ ಔಷಧಿ: ಬಹಳಷ್ಟು ವೈರಸ್ ಸಂಬಂಧಿತ ಕಾಯಿಲೆಗಳಿಗೆ ನೀಡಬಹುದಾದ ಔಷಧಿಯನ್ನೇ ಕೋರೋನಾಕ್ಕೆ ನೀಡಲಾಗುತ್ತಿದೆ. ಕೊರೋನಾಕ್ಕೆಂದೇ ಪ್ರತ್ಯೇಕ ಔಷಧಿ ಇಲ್ಲ. ಆದರೂ ಈ ಚಿಕಿತ್ಸೆಯಿಂದ ಜಿಲ್ಲೆಯಲ್ಲಿ ಶೇ.61ರಷ್ಟು ಮಂದಿ ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸುಳ್ಳು ಸುದ್ದಿ ಹಬ್ಬಿಸದಿರಿ-ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತನ್ನಿ: ಕೊಡಗಿನಲ್ಲಿ ಕೋರೋನಾ ಸಂಬಂಧಿತ ಸುಳ್ಳು ಸುದ್ದಿಗಳು, ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಫೇಕ್ ನ್ಯೂಸ್ನಿಂದಾಗಿ ಜನರು ಆತಂಕಕ್ಕೀಡಾಗುತ್ತಾರೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಎರಡು ದಿನಗಳ ಹಿಂದೆ ಕೊವೀಡ್ ಕೇರ್ ಸೆಂಟರ್ನಿಲ್ಲಿ ಮಹಿಳೆಯರಿಗೆ ಯಾವುದೇ ಸುರಕ್ಷತೆಯಿಲ್ಲ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ನಾನೇ ಖುದ್ದಾಗಿ ಮರುದಿನ ಸ್ಥಳಕ್ಕೆ ತೆರಳಿ ಗಮನಿಸಿದಾಗ ಅಲ್ಲಿ ಅಂತಹ ಸಮಸ್ಯೆಯೇ ಇರಲಿಲ್ಲ. ಮಾತ್ರವಲ್ಲದೆ ಅಲ್ಲಿ ಸೋಂಕಿತ ಮಹಿಳೆಯರೇ ದಾಖಲಾಗಿರಲಿಲ್ಲ. ಆದರೆ ಇಂತಹ ಸುದ್ದಿಗಳಿಂದ ಮಹಿಳೆಯರು ಗಾಬರಿಯಾಗುತ್ತಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸ್ಥೈರ್ಯ ಕುಸಿಯುವಂತೆ ಮಾಡಬೇಡಿ: ಕಳೆದ ಫೆಬ್ರವರಿಯಿಂದಲೇ ಜಿಲ್ಲೆಯ ಅಧಿಕಾರಿಗಳು ವಿರಾಮವಿಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಧಿಕಾರಿ, ಸಿಬ್ಬಂದಿಗಳ ಮಾನಸಿಕ ಸ್ಥೆರ್ಯ ಕುಸಿಯುವಂತೆ ಮಾಡಬೇಡಿ ಎಂದು ಮನವಿ ಮಾಡಿದ ಅನೀಸ್ ಕಣ್ಮಣಿ ಜಾಯ್ ಅವರು, ಯಾವುದೇ ಸಮಸ್ಯೆಯಿದ್ದರೂ ಡಿಸಿ ಕಂಟ್ರೋಲ್ ರೂಮ್ಗೆನ ವಿಚಾರ ತಿಳಿಸಿ. ಸಮಸ್ಯೆಯ ಪ್ರಕರಣವಿದ್ದಲ್ಲಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸುವುದಕ್ಕಿಂತ ಮುಂಚೆ ತನ್ನ ಗಮನಕ್ಕೆ ತನ್ನಿ ಎಂದು ಸಲಹೆ ಮಾಡಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ಭಯೋತ್ಪಾದಕ ದಾಳಿಗೆ ತತ್ತರಿಸಿದ ಫ್ರಾನ್ಸ್ ಜನತೆಯ ದು:ಖದಲ್ಲಿ ಭಾರತ ಪಾಲುದಾರ: ಮೋದಿ

ಹೊಸದಿಲ್ಲಿ: ಫ್ರಾನ್ಸ್‌ನ ಚರ್ಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ಮೋದಿ ಖಂಡಿಸಿದ್ದು, ಜಾಗತಿಕ ಉಗ್ರವಾದದ ವಿರುದ್ಧ ಭಾರತ-ಫ್ರಾನ್ಸ್ ಜಂಟಿಯಾಗಿ ಹೋರಾಡಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇಂದು ನೈಸ್ ನಗರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು...

ಸ್ವಯಂ ನಿವೃತ್ತಿ ಪಡೆದ ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಎ.ಆರ್. ಪ್ರಕಾಶ್

ಮೈಸೂರು : ವಾರ್ತ ಇಲಾಖೆ ಜಂಟಿ ನಿರ್ದೇಶಕರಾದ ಎ.ಆರ್. ಪ್ರಕಾಶ್ ಅವರು ಗುರುವಾರ ಸ್ವಯಂ ನಿವೃತ್ತಿ ಪಡೆದರು. ಅವರು ಹೊಸಪೇಟೆ, ಕಲಬುರಗಿ, ಮೈಸೂರು ಹಾಗೂ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಸ್ವಯಂ ನಿವೃತ್ತಿ...

ಚಿಂದಿ ಆಯುತ್ತಿದ್ದ ಬಡ ಹುಡುಗನ ಹೆಜ್ಜೆಯೀಗ ವೈದ್ಯಕೀಯ ರಂಗದೆಡೆಗೆ!

ಲಕ್ನೋ: ಪ್ರತಿಭೆಗೆ ಬಡತನವಿಲ್ಲ. ಮನಸ್ಸಿಟ್ಟು ,ಪ್ರಯತ್ನಪಟ್ಟು ಯಾವುದಾದರೂ ಗುರಿಯೆಡೆಗೆ ನಡೆದಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ಇದಕ್ಕೆ ನೇರ ಸಾಕ್ಷಿ ಚಿಂದಿ ಆಯ್ದು ಬದುಕಿನ ಬಂಡಿ ಎಳೆಯುವ ಬಡ ಕುಟುಂಬದ ಹುಡುಗ ಅರವಿಂದ್ ಕುಮಾರ್. ಚಿಂದಿ...

ಉಡುಪಿ| ಕಾರ್ಖಾನೆಯಿಂದ ಗೇರು ಬೀಜ ಕಳವು ಮಾಡಿದ ಇಬ್ಬರು ಆರೋಪಿಗಳ ಬಂಧನ

ಉಡುಪಿ: ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಗೇರುಬೀಜ ಕಾರ್ಖಾನೆಯಿಂದ ಗೇರು ಬೀಜ ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಎರಡೇ ದಿನಗಳಲ್ಲಿ ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮ ಮೊಟ್ಟೆತಡ್ಕ ನಿವಾಸಿ...

Don't Miss

ಭಯೋತ್ಪಾದಕ ದಾಳಿಗೆ ತತ್ತರಿಸಿದ ಫ್ರಾನ್ಸ್ ಜನತೆಯ ದು:ಖದಲ್ಲಿ ಭಾರತ ಪಾಲುದಾರ: ಮೋದಿ

ಹೊಸದಿಲ್ಲಿ: ಫ್ರಾನ್ಸ್‌ನ ಚರ್ಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ಮೋದಿ ಖಂಡಿಸಿದ್ದು, ಜಾಗತಿಕ ಉಗ್ರವಾದದ ವಿರುದ್ಧ ಭಾರತ-ಫ್ರಾನ್ಸ್ ಜಂಟಿಯಾಗಿ ಹೋರಾಡಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇಂದು ನೈಸ್ ನಗರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು...

ಸ್ವಯಂ ನಿವೃತ್ತಿ ಪಡೆದ ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಎ.ಆರ್. ಪ್ರಕಾಶ್

ಮೈಸೂರು : ವಾರ್ತ ಇಲಾಖೆ ಜಂಟಿ ನಿರ್ದೇಶಕರಾದ ಎ.ಆರ್. ಪ್ರಕಾಶ್ ಅವರು ಗುರುವಾರ ಸ್ವಯಂ ನಿವೃತ್ತಿ ಪಡೆದರು. ಅವರು ಹೊಸಪೇಟೆ, ಕಲಬುರಗಿ, ಮೈಸೂರು ಹಾಗೂ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಸ್ವಯಂ ನಿವೃತ್ತಿ...

ಚಿಂದಿ ಆಯುತ್ತಿದ್ದ ಬಡ ಹುಡುಗನ ಹೆಜ್ಜೆಯೀಗ ವೈದ್ಯಕೀಯ ರಂಗದೆಡೆಗೆ!

ಲಕ್ನೋ: ಪ್ರತಿಭೆಗೆ ಬಡತನವಿಲ್ಲ. ಮನಸ್ಸಿಟ್ಟು ,ಪ್ರಯತ್ನಪಟ್ಟು ಯಾವುದಾದರೂ ಗುರಿಯೆಡೆಗೆ ನಡೆದಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ಇದಕ್ಕೆ ನೇರ ಸಾಕ್ಷಿ ಚಿಂದಿ ಆಯ್ದು ಬದುಕಿನ ಬಂಡಿ ಎಳೆಯುವ ಬಡ ಕುಟುಂಬದ ಹುಡುಗ ಅರವಿಂದ್ ಕುಮಾರ್. ಚಿಂದಿ...
error: Content is protected !!