Sunday, August 14, 2022

Latest Posts

ಕೊಡಗು: ಸಂಪಾಜೆಯಲ್ಲಿ ಕಾಂಗ್ರೆಸ್ ನಿಂದ ನೆರವು

ಕೊಡಗು: ಕೋವಿಡ್-19 ರ ಹಿನ್ನೆಲೆಯಲ್ಲಿ ಸತತ 4ನೇ ಹಂತದ ಲಾಕ್ ಡೌನ್ ನಿಂದ ಕೆಲಸವಿಲ್ಲದೆ ತತ್ತರಿಸಿರುವ ಬಡ ಕುಟುಂಬಗಳಿಗೆ ಕಾಂಗ್ರೆಸ್ ವತಿಯಿಂದ ನೆರವಿನ ಹಸ್ತ ಚಾಚಲಾಯಿತು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಸ್. ಮೊಹಿದ್ದೀನ್ ಕುಂಞಿ ಅವರುರಂಜಾನ್ ಪ್ರಯುಕ್ತ ಮನೆ ಮನೆಗೆ ತೆರಳಿ ದಿನಸಿ ಸಾಮಗ್ರಿಗಳನ್ನು ವಿತರಿಸಿದರೆ, ಕೊಡಗು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅಧ್ಯಕ್ಷ ಸೂರಜ್ ಹೊಸೂರು ಅವರು ತರಕಾರಿಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಸಂಪಾಜೆ ಕಾಂಗ್ರೆಸ್ ವಲಯ ಅಧ್ಯಕ್ಷ ಪಿ.ಎಲ್ ಸುರೇಶ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹನೀಫ್ ಎಸ್.ಪಿ, ಗ್ರಾಮ ಪಂಚಾಯತ್ ಸದಸ್ಯೆ ರಾಜೇಶ್ವರಿ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಜಯಕುಮಾರ್ ಚೆದ್ಕಾರ್, ಸಂಪಾಜೆ ಟೈಲರ್ ಅಸೋಸಿಯೇಷನ್ ಅಧ್ಯಕ್ಷ ವಿಜಯಕುಮಾರ್ ಕನ್ಯಾನ, ಕಾಂಗ್ರೆಸ್ ಮುಖಂಡರಾದ ಬಾಬು ಚೆಡಾವು, ಉಮೇಶ್ ಗಾಣಿಗದ್ದೆ, ವಾಸು ಪೂಜಾರಿ, ದೇವಪ್ಪ ದೇವಜನ, ತಿಮ್ಮಪ್ಪ ಸಂಪಾಜೆ, ರಾಮ ಅರಮನೆತೋಟ, ನಾರಾಯಣ ಅರಮನೆ ತೋಟ, ಮೋಹನ್ ಬಾಳಕಜೆ, ಮೀನಪ್ಪ ಬಳ್ಳಕ್ಕ ಚೆಂಬು ಮತ್ತು ಇತರರು ಸಾಥ್ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss