Wednesday, August 17, 2022

Latest Posts

ಕೊಡಗು| 14 ಮಂದಿಯಲ್ಲಿ ಕೊರೋನಾ ಸೋಂಕು ದೃಢ

ಕೊಡಗು: ಜಿಲ್ಲೆಯಲ್ಲಿ ಶನಿವಾರ 70 ಮಂದಿ ಕೊರೋನಾ ಸೋಂಕಿನಿಂದ ಮುಕ್ತರಾಗಿದ್ದರೆ ಭಾನುವಾರ ಬೆಳಗ್ಗೆ 14 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ.

ವೀರಾಜಪೇಟೆ ಬಿಳುಗುಂದದ 24 ವರ್ಷದ ಮಹಿಳೆ, ವೀರಾಜಪೇಟೆ ವಿದ್ಯಾನಗರ ಬ್ರೈಟ್ ಶಾಲೆ ಬಳಿಯ 28 ವರ್ಷದ ಮಹಿಳೆ, ಕೊಂಡಂಗೇರಿಯ 8, 4 ವರ್ಷದ ಬಾಲಕರು ಮತ್ತು 43 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ ವೀರಾಜಪೇಟೆ ಪಂಜರ ಪೇಟೆ ಸರ್ವೋದಯ ಕಾಲೇಜು ಸಮೀಪದ 32 ವರ್ಷದ ಮಹಿಳೆ ಮತ್ತು 6 ವರ್ಷದ ಬಾಲಕ, ಮಡಿಕೇರಿ ಬೊಯಿಕೇರಿಯ ಸಿಂಕೋನ ಸ್ಪೈಸಸ್ ಬಳಿಯ 53 ವರ್ಷದ ಪುರುಷ, ಮಡಿಕೇರಿ ಪಾರಾಣೆಯ ಅಂಗನವಾಡಿ ಬಳಿಯ 28ವರ್ಷದ ಮಹಿಳೆಯಲ್ಲಿ ಸೋಂಕು ಗೋಚರಿಸಿದೆ.

ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ವೀರಾಜಪೇಟೆ ಬಿಳುಗುಂದ ಗ್ರಾಮದ 58 ವರ್ಷದ ಪುರುಷ, ಕುಶಾಲನಗರ ಬಿ.ಎಂ ರಸ್ತೆಯ 1ನೇ ಬ್ಲಾಕ್ ನ 55ಮತ್ತು 22 ವರ್ಷದ ಪುರುಷರು, ಮಡಿಕೇರಿ ಎಲ್.ಐ.ಸಿ ಎದುರಿನ ನ್ಯೂ ಎಕ್ಸ್ ಟೆನ್ಷನ್ ನ 43 ವರ್ಷದ ಪುರುಷ,ಮಡಿಕೇರಿ ಮೇಕೇರಿಯ ಪೌಲ್ ರೆಸಾಟ್೯ ನ 24 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 1209 ರಷ್ಟಾಗಿದ್ದು, ಈ ಪೈಕಿ 911 ಮಂದಿ ಗುಣಮುಖರಾಗಿದ್ದಾರೆ. 282 ಸಕ್ರಿಯ ಪ್ರಕರಣಗಳಿದ್ದು, 16 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 266ರಷ್ಟಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!