Monday, August 8, 2022

Latest Posts

ಕೊಡಗು: 20 ಮಂದಿಗೆ ಕೊರೋನಾ ಸೋಂಕು ದೃಢ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 20 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.
ಸೋಮವಾರಪೇಟೆಯ ಬಳಗುಂದದ 88 ವರ್ಷದ ಪುರುಷ‌, ಸೋಮವಾರಪೇಟೆ ಶಾಂತಳ್ಳಿಯ 46 ವರ್ಷದ ಮಹಿಳೆ,ವೀರಾಜಪೇಟೆಯ ಪಂಜರಪೇಟೆ ಗಣಪತಿ ಬೀದಿಯ 29 ವರ್ಷದ ಮಹಿಳೆ, ವೀರಾಜಪೇಟೆ ಬೆಕ್ಕೆಸೊಡ್ಲೂರುವಿನ 48 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ವೀರಾಜಪೇಟೆಯ ಚೆಂಬೆಬೆಳ್ಳೂರು ರಸ್ತೆಯ 55ವರ್ಷದ ಮಹಿಳೆ,  ಕುಶಾಲನಗರ ಚಿಕ್ಕಣ್ಣ ಬಡಾವಣೆಯ 20 ವರ್ಷದ ಮಹಿಳೆ, ಕುಶಾಲನಗರದ ಗಂಧದಕೋಟೆಯ 27 ವರ್ಷದ ಮಹಿಳೆ ಮತ್ತು 15ವರ್ಷದ ಬಾಲಕನಲ್ಲಿ ಸೋಂಕು ದೃಢಪಟ್ಟಿದೆ
ವೀರಾಜಪೇಟೆ ಪೊನ್ನಂಪೇಟೆಯ ಕೃಷ್ಣ ಕಾಲೋನಿಯ 33 ವರ್ಷದ ಪುರುಷ, ಮಡಿಕೇರಿ ಭಗವತಿ ನಗರದ 58ವರ್ಷದ ಪುರುಷ,ಸೋಮವಾರಪೇಟೆ ಮಾದಾಪುರದ ಮುವ್ವತ್ತೊಕ್ಲು ಗ್ರಾಮದ 35ವರ್ಷದ ಪುರುಷ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಗುಂಡೂರಾವ್ ಬಡಾವಣೆಯ 66 ವರ್ಷದ ಮಹಿಳೆ, ಮಡಿಕೇರಿ ಕಾವೇರಿ ಲೇಔಟಿನ 63ವರ್ಷದ ಮಹಿಳೆ,ಮೈಸೂರಿನ ಕುಮಾರ್ ಬಾರ್ ರಸ್ತೆಯ 44ವರ್ಷದ ಮಹಿಳೆಯಲ್ಲಿ ಸೋಂಕು ಗೋಚರಿಸಿದೆ.

ಸೋಮವಾರಪೇಟೆ ಚಾಮುಂಡೇಶ್ವರಿ ದೇವಾಲಯ ಹಿಂಭಾಗದ ಜನತಾ ಕಾಲೋನಿಯ 39ವರ್ಷದ ಮಹಿಳೆ ಮತ್ತು 36 ವರ್ಷದ ಪುರುಷ‌,ಮಡಿಕೇರಿ ತ್ಯಾಗರಾಜ ಕಾಲೋನಿಯ ಅಂಗನವಾಡಿ ಬಳಿಯ 18ವರ್ಷದ ಮಹಿಳೆ, ವೀರಾಜಪೇಟೆ ಕಲ್ಲುಬಾಣೆ ಅಂಚೆಯ ಅರ್ಜಿ ಗ್ರಾಮದ 48 ವರ್ಷದ ಪುರುಷ, ಮಡಿಕೇರಿ ನಿಡುಗಣೆ ಗ್ರಾಮದ 68ವರ್ಷದ ಮಹಿಳೆ,ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೊಲೀಸ್ ವಸತಿ ಗೃಹದ 36ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 840ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss