Saturday, August 13, 2022

Latest Posts

ಕೊಡಗು| 9 ಮಂದಿಯಲ್ಲಿ ಕೊರೋನಾ ಸೋಂಕು ದೃಢ: ಸೋಂಕಿತರ ಸಂಖ್ಯೆ 594ಕ್ಕೆ ಏರಿಕೆ

ಮಡಿಕೇರಿ :ಕೊಡಗು ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 7.30ರ ವೇಳೆಗೆ 9 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ.

ಕುಶಾಲನಗರದ ನೇತಾಜಿ ಬಡವಾಣೆಯ 19 ವರ್ಷದ ಪುರುಷ, ಪಿರಿಯಾಪಟ್ಟಣದ ಆವರ್ತಿಯ 43 ವರ್ಷದ ಪುರುಷ,
ಶನಿವಾರಸಂತೆಯ ತ್ಯಾಗರಾಜ ಕಾಲೋನಿಯ 46 ವರ್ಷದ ಪುರುಷ,ವೀರಾಜಪೇಟೆಯ ಮೊಗರ ಗಲ್ಲಿಯ 40 ವರ್ಷದ ಮಹಿಳೆ ಮತ್ತು 22ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.

ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಕುಶಾಲನಗರದ ಮುಳ್ಳುಸೋಗೆಯ 33 ವರ್ಷದ ಪುರುಷ, ವೀರಾಜಪೇಟೆಯ 37ಮತ್ತು 45 ವರ್ಷದ ಮಹಿಳೆ, ಮಾದಾಪುರದ 48ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿನ ಒಟ್ಟು ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ 594ಆಗಿದ್ದು, ಈ ಪೈಕಿ 369 ಮಂದಿ ಗುಣಮುಖರಾಗಿದ್ದಾರೆ. 215ಸಕ್ರಿಯ ಪ್ರಕರಣಗಳಿದ್ದು, 10 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 155 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss