ಮಡಿಕೇರಿ: ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ 8 ಗಂಟೆ ವೇಳೆಗೆ 13 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ.ಇದರೊಂದಿಗೆ ಸೋಂಕಿತರ ಸಂಖ್ಯೆ 696 ,ಆಗಿದ್ದು, ಈ ಪೈಕಿ 409 ಮಂದಿ ಗುಣಮುಖರಾಗಿದ್ದಾರೆ.
ಮಡಿಕೇರಿಯ ಕೃಷಿ ಇಲಾಖೆ ಕಚೇರಿ ಸಮೀಪದ 21 ವರ್ಷದ ಮಹಿಳೆ,ಮಡಿಕೇರಿ ಮಹದೇವಪೇಟೆಯ 69 ವರ್ಷದ ಪುರುಷ ಮತ್ತು 24 ವರ್ಷದ ಮಹಿಳೆ,ಸೋಮವಾರಪೇಟೆ ಚೆಟ್ಟಳ್ಳಿ ಪೊನ್ನತ್ ಮೊಟ್ಟೆಯ 27 ವರ್ಷದ ಪುರುಷ,ಮಡಿಕೇರಿ ಆಜಾದ್ ನಗರದ 40 ಮತ್ತು 19 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.
ಸೋಮವಾರಪೇಟೆ ಶನಿವಾರ ಸಂತೆ ಯ ಗುಂಡೂರಾವ್ ಬಡಾವಣೆಯ 1 ವರ್ಷದ ಗಂಡು ಮಗು,ಕುಶಾಲನಗರ ಕೂಡಿಗೆ ಸೇತುವೆ ಬಳಿಯ 64 ವರ್ಷದ ಪುರುಷ ಮತ್ತು 54 ವರ್ಷದ ಮಹಿಳೆ,ಕುಶಾಲನಗರ ಗುಮ್ಮನಕೊಲ್ಲಿಯ ಬಸವೇಶ್ವರ ದೇವಾಲಯ ಹಿಂಭಾಗದ 47 ವರ್ಷದ ಪುರುಷ,ಸೋಮವಾರಪೇಟೆ ಕುಸುಬೂರಿನ ಬೇಲೂರು ಬಾಣೆಯ 60 ವರ್ಷದ ಮಹಿಳೆ, ಕಡಂಗಮರೂರುವಿನ 58ವರ್ಷದ ಪುರುಷ,ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿಯ ಡೈರಿ ಫಾರಂನ ಅಗ್ನಿಶಾಮಕ ಕಚೇರಿ ಸಮೀಪದ 24 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 696ಆಗಿದ್ದು, 409 ಮಂದಿ ಗುಣಮುಖರಾಗಿದ್ದಾರೆ. 276 ಸಕ್ರಿಯ ಪ್ರಕರಣಗಳಿದ್ದು, 11 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 194ಆಗಿದೆ ಎಂದು ಅವರು ಹೇಳಿದ್ದಾರೆ.