ಮುಂಬೈ: ಪಶ್ಚಿಮ ಬಂಗಾಳದಲ್ಲಿ ನಟ ಸುಶಾಂತ್ ಸಿಂಗ್ ಅವರ ಮೇಣದ ಪ್ರತಿಮೆ ಸಿದ್ಧವಾಗಿದೆ . ಹೌದು ,ಸುಶಾಂತ್ ಸಿಂಗ್ ಅವರ ಮೇಣದ ಪ್ರತಿಮೆ ನಿರ್ಮಾಣ ಮಾಡಿ ಎಂದು ಸ್ವತಃ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಆರಂಭಿಸಿದ್ದರು. ಇದೀಗ ಆ ಬೆನ್ನಲ್ಲೇ ಮೇಣದ ಪ್ರತಿಮೆ ಸಿದ್ಧವಾಗಿ ನಿಂತಿದೆ.
ಲಂಡನ್ನ ಮೇಡಂ ಟುಸ್ಸಾಡ್ಸ್ನಲ್ಲಿ ಸುಶಾಂತ್ ಅವರ ವ್ಯಾಕ್ಸ್ ಪ್ರತಿಮೆ ನಿರ್ಮಿಸಬೇಕೆಂದು ಅಭಿಮಾನಿಗಳು ಅಭಿಯಾನವನ್ನೇ ಆರಂಭಿಸಿದ್ದರು. ಅದಕ್ಕಾಗಿ ಸಹಿ ಸಂಗ್ರಹಿಸಿ, ಒಂದು ಲಕ್ಷ 70 ಸಾವಿರ ಸಹಿಗಳನ್ನೂ ಪಡೆಯಲಾಗಿತ್ತು. ಇದೀಗ ಪಶ್ಚಿಮ ಬಂಗಾಳದ ಅಸಾನ್ಸೂಲ್ನ ಸುಸಾಂತ್ ರಾಯ್ ಎಂಬುವವರು ಈ ಪ್ರತಿಮೆ ಮಾಡಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.