Wednesday, July 6, 2022

Latest Posts

ಕೊನೆಗೂ ಈಡೇರಿದ ಬಹುದಿನಗಳ ಕನಸು ನನಸು, ಹೆಸರಘಟ್ಟದಲ್ಲೇ ನಿರ್ಮಾಣವಾಗಲಿದೆ ಫಿಲ್ಮ್ ಸಿಟಿ, ಯಾವಾಗಿನಿಂದ ಶುರು ಗೊತ್ತಾ?

ಲಾಕ್‌ಡೌನ್‌ನಿಂದಾಗಿ  ಚಿತ್ರಮಂದಿರ ಬಂದ್ ಆಗಿ  ಸುಮಾರು ನಾಲ್ಕೆ‘ದು  ತಿಂಗಳು  ಕಳೆದಿದೆ. ಇದ್ದರಿಂದ  ಚಿತ್ರರಂಗದಲ್ಲಿ  ಸಂಕಷ್ಟ    ತಲೆದೋರಿದ್ದು,  ತುಂಬಾ  ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಹೀಗಾಗಿ  ಚಿತ್ರರಂಗದ  ಸಮಸ್ಯೆಯನ್ನು  ಆಲಿಸಲು  ಹ್ಯಾಟ್ರಿಕ್  ಹೀರೋ  ಶಿವರಾಜ್‌ಕುಮಾರ್  ಅವರನ್ನು  ನಾಯಕನಾಗಿ  ನೇಮಕ ಮಾಡಿದ್ದಾರೆ. ಇತ್ತೀಚಿಗೆ ಉಪಮುಖ್ಯಮಂತ್ರಿಯನ್ನು  ಶಿವಣ್ಣ  ‘ಭೇಟಿ ಮಾಡಿದ್ದರು. ಫಿಲ್ಮ್ ಸಿಟಿ ನಿರ್ಮಾಣದ ವಿಚಾರ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಬೆಂಗಳೂರಿನ ಹೊರವಲಯದಲ್ಲಿ ವಿಶ್ವ ದರ್ಜೆಯ ಫಿಲ್ಮ್ ಸಿಟಿಯನ್ನು ನಿರ್ಮಾಣ ಮಾಡಲು ಸರ್ಕಾರ ನಿ‘ರ್ರಿಸಿದೆ.

ಈ ಮೊದಲು ಫಿಲ್ಮ್ ಸಿಟಿಯನ್ನು ಹೆಸರಘಟ್ಟದಲ್ಲಿ, ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಮೈಸೂರು, ಎಚ್ ಡಿ ಕುಮಾರಸ್ವಾಮಿ ಅಧಿಕಾರವಧಿಯಲ್ಲಿ ರಾಮನಗರ, ಕೊನೆಗೆ ಕನಕಪುರ ರಸ್ತೆಯ ರೋರಿಚ್ ಎಸ್ಟೇಟ್ ಹೀಗೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಅಂತ ಫಿಲ್ಮ್ ಸಿಟಿ ನಿರ್ಮಾಣದ ಜಾಗ ಬದಲಾಗುತ್ತಲೆ ಇದೆ. ಆದರೆ ಕೊನೆಯದಾಗಿ ಬೆಂಗಳೂರಿನ ಹೊರವಲಯದಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ.ಇದೀಗ ಸರ್ಕಾರ ಹೆಸರಘಟ್ಟದಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡಲು ನಿರ್ಧಾರ ಮಾಡಿದೆ. ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರರಂಗದ ಪುನಶ್ಚೇತನ ಮತ್ತು ಸಮಸ್ಯೆಗಳ ಬಗ್ಗೆ ಮಾತನಾಡಲು ಡಿಸಿಎಂ ಅಶ್ವತ್ಥ್ ನಾರಾಯಣ್ ಅವರನ್ನು ‘ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಮಯದಲ್ಲಿ ಅಶ್ವತ್ಥ್ ನಾರಾಯಣ್ ಫಿಲ್ಮ್ ಸಿಟಿ ನಿರ್ಮಾಣದ ಬಗ್ಗೆ ಮಾತನಾಡಿದ್ದಾರೆ.

ಫಿಲ್ಮ್ ಸಿಟಿ ರೋರಿಚ್ ಎಸ್ಟೇಟ್ ನಲ್ಲಿ ನಿರ್ಮಾಣ ಮಾಡಲು ಸಾ ಧ್ಯವಿಲ್ಲ. ಹೆಸರಘಟ್ಟದಲ್ಲಿ ಮಾಡುವ ಪ್ರಯತ್ನ ನಡೆಯುತ್ತಿದೆ. ಪಶುಸಂಗೋಪನಾ ಇಲಾಖೆಯ ೪೫೦ ಎಕರೆ  ಭೂಮಿ ಇದ್ದು ಇದರಲ್ಲಿ ಸಿನಿಮಾರಂಗಕ್ಕೆ ೧೫೦ ಎಕರೆ ‘ಭೂಮಿ ನೀಡುವಂತೆ ಒತ್ತಾಯ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ನಡೆಯುತ್ತಿದೆ. ತ್ವರಿತವಾಗಿ ಇದನ್ನು ಬಗೆಹರಿಸಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಚಾಲನೆ ಸಿಗಲಿದೆ ಎಂದು ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.ಚಿತ್ರರಂಗದಲ್ಲಿ ಅಸಂಘಟಿತ ದಿನಗೂಲಿ ನೌಕರರ ಹಿತ ಕಾಯುವ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು. ಅವರನ್ನು ಕಾರ್ಮಿಕ ಇಲಾಖೆಯಡಿ ತಂದು ಸರ್ಕಾರದ ಸವಲತ್ತುಗಳು ಅವರಿಗೂ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದು ಡಿಸಿಎಂ ಹೇಳಿದ್ದಾರೆ. ಶೀಘ್ರದಲ್ಲೇ  ಇದರ  ಬಗ್ಗೆ  ಕುರಿತು  ಸಿಎಂ  ಸ್ಪಷ್ಟನೆ  ನೀಡಲಿದ್ದಾರೆ.

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss