ಕೊಪ್ಪಳದಲ್ಲಿ ನಡೆದ ದುರ್ಘಟನೆ: ವಿದ್ಯುತ್ ತಗುಲಿ ಬಾಲಕ ಸಾವು

0
29

ಕುಷ್ಟಗಿ:  ಪಟ್ಟಣದ ಒಂದನೇ ವಾರ್ಡ್ ಕೃಷ್ಣಗಿರಿ ಕಾಲೋನಿಯಲ್ಲಿ ಬಾಲಕನೊಬ್ಬನಿಗೆ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಮೃತ ಬಾಲಕ ಯಮನೂರಪ್ಪ (15) ಎಂದು ಗುರುತಿಸಲಾಗಿದೆ.
ಕಾಗದದ ತಟ್ಟೆ (ಪೇಪರ್ ಪ್ಲೇಟ್) ತಯಾರಿಸುವ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತಿದ್ದ ಎನ್ನಲಾಗಿದ್ದು, ಮಧ್ಯಾಹ್ನ ವೇಳೆ ಪೇಪರ್ ಪ್ಲೇಟ್ ತಯಾರಿಸುವ ಸಂದರ್ಭದಲ್ಲಿ ಬಾಲಕನಿಗೆ ಆಕಸ್ಮಿಕ ವಿದ್ಯುತ್ ತಗುಲಿದೆ. ಕೂಡಲೇ ಆತನನ್ನು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದಾಗ ಸಾವನ್ನಪ್ಪಿರುವುದು ದೃಢಪಟ್ಟಿದೆ.
ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಜಮಾಯಿಸಿದ ಮೃತ ಬಾಲಕನ ಪಾಲಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರು ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪಿಎಸ್ಐ ಚಿತ್ತರಂಜನ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here