ಕೊಪ್ಪಳ: ಇಂದು ಕಂಡ ಕಂಕಣ ಸೂರ್ಯ ಗ್ರಹಣಕ್ಕೆ ಕೊಪ್ಪಳದಲ್ಲಿ ಜನತೆ ಹೊರಗಡೆ ಬಾರದೆ ರಸ್ತೆಗಳೆಲ್ಲವೂ ಜನರಿಲ್ಲದೆ ಬೀಕೋ ಎನ್ನುವಂತಿದ್ದರೆ ಜಿಲ್ಲೆಯಲ್ಲಿರುವ ಛಾಯಾಗ್ರಾಹಕರು ತಮ್ಮ ಮೂರನೇ ಕಣ್ಣು ಕ್ಯಾಮರಾ ಹಿಡಿದು ಗುಡ್ಡದ ಮೇಲೆ, ಮನೆಯ ಮೇಲೆ ಕುಳಿತು ಸೇರೆ ಹಿಡಿಯಲು ಮುಂದಾಗಿದ್ದು ಕಂಡು ಬಂದಿತು.
ಮಣ್ಣೆತ್ತಿನ ಅಮವಾಸ್ಯೆ ದಿನವೇ ಕಂಕಣ ಸೂರ್ಯಗ್ರಹಣ ಇದ್ದುದರಿಂದ ಜನರು ಭಯ ಬೀತರಾಗಿ ಮನೆಯಲ್ಲಿಯೇ ಇರುವಂತೆ ಮಾಡಿದೆ.
ಗ್ರಹಣ ಆರಂಭವಾಗುತ್ತಿದ್ದಂತೆ ಜಿಲ್ಲೆಯಲ್ಲಿಯಲ್ಲಿರುವ ಐತಿಹಾಸಿಕ ದೇವಸ್ಥಾನಗಳ ಬಾಗಿಲು ಹಾಕಲಾಗಿತ್ತು. ಅದರಂತೆ ನಗರದ ರಾಯರ ಮಠ, ಗವಿಸಿದ್ದೇಶ್ವರ ಮಠದಲ್ಲಿ ಹಾಗೂ ಹುಲಿಗಿಯ ಹುಲಿಗೆಮ್ಮ ದೇವಸ್ಥಾನದ ಬಾಗಿಲು ಹಾಕುವುದರ ಮೂಲಕ ದರ್ಶನಕ್ಕೆ ನಿಷೇಧಿಸಲಾಗಿತ್ತು. ಗ್ರಹಣ ಮೋಕ್ಷ ವಾಗುತ್ತಿದ್ದಂತೆ ದೇವಸ್ಥಾನದ ಬಾಗಿಲುಗಳು ತೆರೆದು ದೇವರ ಪೂಜೆ ಪುನಸ್ಕಾರಕ್ಕೆ ಮುಂದಾಗಿದ್ದವು. ಪೂಜೆ ಆರಂಭವಾಗುತ್ತಿದ್ದಂತೆ ಜನರು ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದಿದ್ದು ಕಂಡು ಬಂದಿತು.
ಛಾಯಾ ಗ್ರಾಹಕ ಅಮರ ದೀಪ ಸೂರ್ಯ ಗ್ರಹಣದ ಚಿತ್ರಗಳನ್ನು ಸೆರೆ ಹಿಡಿದು ಜಾಲತಾಣಗಳಿಗೆ ಹಾಕಿದ್ದರು.