Saturday, August 13, 2022

Latest Posts

ಕೊಪ್ಪಳದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಪ್ರತಿಭಟನೆ; ಕುತಂತ್ರಿ ಚೀನಾಕ್ಕೆ ಬುದ್ದಿ ಕಲಿಸಲು ಆಗ್ರಹ

ಕೊಪ್ಪಳ: ಕೊರೋನಾ ಸಂಕಷ್ಟದಲ್ಲಿ  ಚೀನಾ ಕುತಂತ್ರಿ ಬುದ್ದಿ ಬೆಳಸಿಕೊಂಡ ನಮ್ಮ ದೇಶದ ಯೋದರ ಹತ್ಯೆಗೆ ಕಾರಣರಾದ ಕುತಂತ್ರಿ ಚಿನಾಗೆ ಬುದ್ದಿ ಕಲಿಸಬೇಕು ಎಂದು ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾದ ಪದಾಧಿಕಾರಿಗಳ ವತಿಯಿಂದ ಪ್ರತಿಭಟನೆ ನಡೆಸಿದರು. ಅವರು ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ವೀರ ಯೋಧರ ಹುತಾತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸಿ ಕುತಂತ್ರಿ ಚಿನಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ಇದರ ಅಧ್ಯಕ್ಷತೆಯನ್ನು ಮಹಿಳಾ ಮೋರ್ಚಾದ ಜಿಲ್ಲಾ ಅಧ್ಯಕ್ಷೆ ವಾಣಿಶ್ರೀ ಮಠದ ಮತ್ತು ನಗರ ಘಟಕದ ಅಧ್ಯಕ್ಷ ಸುನಿಲ್ ಹೆಸರೂರ್ ಅವರು ವಹಿಸಿಕೊಂಡು ಮಾತನಾಡಿ, ಚೀನಾ ಸೈನಿಕರು ವಿನಾ ಕಾರಣ ಭಾರತೀಯ ಯೋಧರ ಮೇಲೆ ಏರಿ ಬಂದಿದ್ದು, ಸುಮಾರು 20ಕ್ಕೂ ಅಧಿಕ ಯೋಧರನ್ನು ಹತ್ಯೆಗೈದಿದ್ದಾರೆ. ಆದರೆ ಇದಕ್ಕೆ ಪ್ರತಿಕಾರವಾಗಿ ಭಾರತೀಯ ಯೋಧರೂ ಕೂಡ 40ಕ್ಕೂ ಅಧಿಕ ಸೈನಿಕರನ್ನು ಹೊಡೆದುರುಳಿಸಿದ್ದಾರೆ ಎಂದು ಹೇಳಿದರು.
ಚೀನಾ ಶಾಂತಿ ಮಾತುಕತೆಯ ನಡುವೆಯೇ ವಿನಾ ಕಾರಣ ಕಾಲುಕೆರೆದು ಜಗಳಕ್ಕೆ ನಿಲ್ಲುತ್ತಿದೆ. ಆದರೆ ಇಂದು ಭಾರತದ ಆಡಳಿತ ವ್ಯವಸ್ಥೆ 1962 ಹಾಗೂ 1975ರಂತಿಲ್ಲ. ಇಂದು ಭಾರತೀಯ ಸೇನೆಯ ಯೋಧರು ಸುಸಜ್ಜಿತ ಶಸ್ತ್ರಾಸ್ತ್ರಗಳೊಂದಿಗೆ ವಿರೋಧಿ ಪಡೆಯನ್ನು ಹೊಡೆದುರುಳಿಸಲು ಸನ್ನದ್ಧರಾಗಿದ್ದಾರೆ ಮುಂದೆ ಪಾಕಿಸ್ತಾನದಂತೆ ಚಿನಾಕ್ಕೆ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಾಗರತ್ನ ಪಾಟೀಲ್, ಹೇಮಲತಾ ನಾಯಕ್, ಮಧುರಾ ಕರಣಂ,ಗ ಪೂರ್ಣಿಮಾ ಶೆಟ್ಟರ, ವೀಣಾ ಬನ್ನಿಗೋಳ, ಶೋಭಾ ನಗರಿ, ಶ್ಯಾಮಲಾ ಕೋನಾಪುರ, ಭಾರತಿ ಗುಡ್ಲಾನೂರ್, ಜಯಶ್ರೀ ಗೊಂಡಬಾಳ್, ಗೀತಾ ಪಾಟೀಲ್, ಸುವರ್ಣ, ಜಿಲ್ಲಾ ಮಾಧ್ಯಮ ವಕ್ತಾರರಾದ ಬಸವಲಿಂಗಯ್ಯ ಜಿ ಗದಗಿನಮಠ ಇನ್ನು ಮುಂತಾದವರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss