Wednesday, June 29, 2022

Latest Posts

ಕೊಪ್ಪಳದಲ್ಲಿ ವರುಣನ ಆರ್ಭಟ: ಕೊಚ್ಚಿಹೋದ ಬ್ರಿಡ್ಜ್

ಕೊಪ್ಪಳ: ಜಿಲ್ಲೆಯಲ್ಲಿ ಶನಿವಾರ ರಾತ್ರಿ ಸುರಿದ ಬಾರಿ ಮಳೆಯಿಂದಾಗಿ ಹಿರೆಹಳ್ಳಕ್ಕೆ ಹೆಚ್ಚುವರಿ ನೀರು ಹರಿದು ಬಂದ ಪರಿಣಾಮವಾಗಿ ಕೊಳೂರು ಬಳಿ ಇರುವ ಬ್ರೀಜ್ ಕಂ ಬ್ಯಾರೆಜ್ ಹೊಡೆದ ಪರಿಣಾಮವಾಗಿ ರೈತರು ಜಮಿನು ಕೊಚ್ಚಿ ಹೋಗಿದ್ದಲ್ಲದೆ ಕೋಳೂರು ಗ್ರಾಮದಲ್ಲಿ ನೀರು ನುಗ್ಗಿ ಸುಮಾರು ೩೦ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡು ನಿವಾಸಿಗಳು ಪರದಾಡುವಂತಾಯಿತು.

ರೈತರ ನೀರಾವರಿ ಅನುಕೂಲಕ್ಕಾಗಿ ಕೊಳೂರು ಬಳಿ ಹಿರೇಹಳ್ಳಕ್ಕೆ ಬ್ರೀಜ್ ಕಂ ಬ್ಯಾರೆಜ್ ನಿರ್ಮಾಣ ಮಾಡಲಾಗಿದೆ. ಆದರೆ ಹಿರೇಹಳ್ಳ ಜಾಲಾಶಯದಿಂದ ಹೆಚ್ಚುವರಿ ನೀರು ಬಿಟ್ಟ ಪರಿಣಾಮವಾಗಿ ಬ್ರೀಜ್ ಕಂ ಬ್ಯರೇಜ್ ಗೇಟ್ ಬಂದಾದ ಕಾರಣ ಕೋಳೂರು ಗ್ರಾಮದಲ್ಲಿ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಗಿದೆ.

ಅದರಂತೆ ಕೊನೆಗೆ ಮಂಗಳಾಪೂರ ಗ್ರಾಮದ ಕಡೆ ಬ್ರೀಜ್ ಕಂ ಬ್ಯಾರೇಜ್ ಕೊಚ್ವಿಹೋದ ಪರಿಣಾಮವಾಗಿ ಹೊರತಟ್ನಾಳ ಗ್ರಾಮದ ಸೋಮನಗೌಡ ಮಾಲಿಪಾಟೀಲ್ ಹಾಗೂ ಹನಮಪ್ಪ ಬಸಪ್ಪ ಚಲ್ಲೋಳ್ಳಿ, ಶಿವಗಂಗವ್ವ ಚಾಮಲಾಪೂರ,ಯಂಕನಗೌಡ ಮಾಲಿಪಾಟೀಲ್ ಎಂಬುವವರಿಗೆ ಸೇರಿದ ೬ ಎಕರೆ ಜಮಿನಿನಲ್ಲಿ ಸುಮಾರು ೩,ಎಕರೆದಷ್ಟು ಜಮೀನು ಕೊಚ್ಚಿಕೊಂಡು ಹೋಗಿದೆ ಈಗಾಗಿ ರೈತರು ಬ್ರೀಜ್ ಕಂ ಬ್ಯಾರೇಜ್ ಕಳಪೆ ಕಾಮಗಾರಿ ನಿರ್ಮಾಣ ಮಾಡಿದ್ದರಿಂದ ಕೊಚ್ಚಿ ಹೋಗಿ ರೈತರಿಗೆ ಅನ್ಯಾಯವಾಗಿದೆ ಆದ್ದರಿಂದ ನಮಗೆ ಸರಕಾರ ಪರಿಹಾರ ನೀಡಲು ಮುಂದಾಗ ಬೇಕು ಎಂದು ಆಗ್ರಹಿಸಿದ್ದಾರೆ.

ಇದಲ್ಲದೆ ಇದೆ ಮಳೆಗೆ ಹಿರೇಬಗನಾಳ ಗ್ರಾಮದ ಬಳಿ ಇರುವ ಹಳ್ಳ ತುಂಬಿ ಹರಿದ ಪರಿಣಾಮವಾಗಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿರುವ ಬಾಂಡೆಗಳು ತೆಲಾಡಿವೆ. ಇದರಿಂದ ನಿವಾಸಿಗಳು ರಾತ್ರಿಯೆಲ್ಲಾ ಸೋಮಾನುಗಳನ್ನು ಹಿಡದಿಡಲು ಹರಸಾಹಸ ಪಡುವಂತಾಗಿದೆ. ಇದಲ್ಲದೆ ತಗ್ಗು ಪ್ರದೇಶಗಳು ಜಲಾವೃತಗೊಂಡು ಜನರು ಅಸ್ತವ್ಯಸ್ತಗೊಂಡು ಪರದಾಡುವಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss