Tuesday, August 16, 2022

Latest Posts

ಕೊಪ್ಪಳದಲ್ಲಿ ಹೃದಯವಿದ್ರಾವಕ ಘಟನೆ: ಅಡುಗೆ ಭಟ್ಟನನ್ನು ಹೊತ್ತೊಯ್ದು ತಿಂದ ಚಿರತೆ

ಕೊಪ್ಪಳ: ಆಧಿಶಕ್ತಿ ದುರ್ಗಾ ದೇವಿ ದೇವಸ್ಥಾನದ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ ಯುವಕನನ್ನು ಚಿರತೆ ಹೊತ್ತೋಯ್ದು ಪೀಸ್ ಪೀಸ್ ಮಾಡಿ ತಿಂದು ಹಾಕಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪ ಗುರುವಾರ ನಸುಕಿನ ವೇಳೆ ಜರುಗಿದೆ.

ಆನೆಗೊಂದಿ ಬಳಿಯ ಮೇಗೋಟೆ ದುರ್ಗಾ ಬೆಟ್ಟದ ದೇಗುಲವೊಂದರಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ ಹುಲಗೇಶ್ ಈರಪ್ಪ ಮಡ್ಲರ್ (೨೫) ಮೃತ ದುರ್ದೈವಿಯಾಗಿದ್ದಾನೆ.

ಮೃತ ಹುಲಿಗೇಶ್ ನಿದ್ದೆಯಲ್ಲಿದ್ದಾಗ ಬೇಟೆಗೆ ಹೊಂಚು ಹಾಕಿದ ಚಿರತೆ ಸದ್ದು ಮಾಡದೇ ಹುಲಗೇಶ್‌ನನ್ನು ಸುಮಾರು ಒಂದು ಕಿ.ಮೀ ದೂರದ ಕಾಡುಪೊದೆಯೊಳಗೆ ಹೊತ್ತೊಯ್ದು ಚಿಂದಿ ಮಾಡಿ ತಿಂದು ಬಿಸಾಕಿ ಪರಾರಿಯಾಗಿದೆ .

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಆನೆಗೊಂದಿ ಸುತ್ತಮುತ್ತಲಿನ ಜನ ಬೆಚ್ಚಿ ಬಿದ್ದಿದ್ದಾರೆ . ಈ ಭಾಗದಲ್ಲಿ ಚಿರತೆ , ಕರಡಿ ಹಾವಳಿ ವಿಪರೀತವಾಗಿದೆ.

ಹಿಂದೆ 9 ವರ್ಷದ ಮಗುವಿಗೆ ಇದೇ ಸ್ಥಳದಲ್ಲಿ ಚಿರತೆ ದಾಳಿ ಮಾಡಿ ಗಾಯ ಗೊಳಿಸಿತ್ತು . ಮಗುವಿನ ಪಾಲಕರ ಕೂಗಾಟ ಗಲಾಟೆಗೆ ಚಿರತೆ ಬೆದರಿ ಓಡಿ ಹೋಗಿತ್ತು .

ತಿಂಗಳ ಹಿಂದೆ ಚಿಕ್ಕರಾಂಪುರ್ ಗ್ರಾಮದ 55 ವರ್ಷದ ಮಾಬಮ್ಮ ಎನ್ನುವ ಮಹಿಳೆಗೆ ಚಿರತೆ ದಾಳಿ ಮಾಡಿತ್ತು . ತೀವ್ರ ಗಾಯಗೊಂಡ ಮಹಿಳೆಯನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು . ಇದೀಗ ಯುವಕನ ಬಲಿ ತೆಗೆದುಕೊಂಡು ಗ್ರಾಮಸ್ಥರ ಆತಂಕ ಹೆಚ್ಚಿಸಿದೆ . ವ್ಯಕ್ತಿಯನ್ನು ಎಳೆದೊಯ್ದು ತಿಂದು ಹಾಕಿದ್ದು , ದೇಹದಿಂದ ಬುರುಡೆ ಕಿತ್ತು ಬಂದಿದ್ದು , ಇದೀಗ ವ್ಯಕ್ತಿಯ ಮಾಂಸದ ಅವಶೇಷಗಳು ಪತ್ತೆಯಾಗಿವೆ .

ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದು ಚಿರತೆ ಹಿಡಿಯಲು ಅರಣ್ಯ ಇಲಾಖೆ ತುರ್ತುಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ .

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss