ಕೊಪ್ಪಳದ 80 ವಲಸೆ ಕಾರ್ಮಿಕರಿಗೆ ಹೋಂ ಕ್ವಾರಂಟೈನ್

0
63

ಮಡಿಕೇರಿ: ಕೊಪ್ಪಳದಿಂದ ವಲಸೆ ಬಂದು ಕೇರಳದಲ್ಲಿ ನೆಲೆಸಿದ್ದ 80 ಮಂದಿ ಕಾರ್ಮಿಕರಗೆ ಕೊರೋನಾ ಸೋಂಕು ತಗುಲಿಲ್ಲ, ಆದರೆ ಇವರನ್ನು ಹೋಂ ಕ್ವಾರಂಟೈನ್ ನಲ್ಲಿರಿಸಲಾಗಿದೆ ಎಂದು ತಹಶಿಲ್ದಾರರು ತಿಳಿಸಿದ್ದಾರೆ.

80 ಜನ ಕಾರ್ಮಿಕರು ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತಿದ್ದು, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಭಾರತದಾದ್ಯಂತ ಸಂಪೂರ್ಣ ಸ್ತಬ್ಧವಾಗಿದ್ದು, ಇವರೆಲ್ಲರೂ ಮಾಕುಟ್ಟ ಚೆಕ್ಪೋಸ್ಟ್ ನಿಂದ ನಡೆದು ಬಂದು, ವಿರಾಜಪೇಟೆ ತಾಲೂಕಿಗೆ ಆಗಮಿಸಿದ್ದಾರೆ.

ಥರ್ಮಲ್ ಸ್ಕ್ರೀನಿಂಗ್ ಒಳಪಡಿಸಿದಾಗ ಅವರಲ್ಲಿ ಕೊರೋನಾ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ, ಸದ್ಯ ಇವರನ್ನು ಹೋಂ ಕ್ವಾರಂಟೈನ್ ನಲ್ಲಿ ಇರಿಸಿದ್ದು, ಕೊಪ್ಪಳ ಜಿಲ್ಲಾಡಳಿತದೊಂದಿಗೆ ಸಂಪರ್ಕಿಸಿ ಈ ಕಾರ್ಮಿಕರನ್ನು ಕೊಪ್ಪಳ ಜಿಲ್ಲೆಗೆ ವಾಹನದ ಮುಖಾಂತರ ಕಳುಹಿಸಿಕೊಡಲಾಗುವುದು ಎಂದು ತಹಶಿಲ್ದಾರರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here