Sunday, August 14, 2022

Latest Posts

ಕೊಪ್ಪಳ: ಆ.15ರಂದು 2020ನೇ ಸಾಲಿನ ವಾರ್ಷಿಕ ಸಭೆ-ಸನ್ಮಾನ ಸಮಾರಂಭ

ಕೊಪ್ಪಳ: ತಾಲೂಕಿನ‌ ಹಲಗೇರಿಯ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ 2020ನೇ ಸಾಲಿನ ವಾರ್ಷಿಕ ಸಭೆಯು ಹಲಗೇರಿ ಗ್ರಾಮದ ರೈಲ್ವೆಗೇಟ್ ಬಳಿ ಆಗಸ್ಟ್ 15ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ. ಈ ಪ್ರಯುಕ್ತ ಹಲಗೇರಿ ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ಮತ್ತು ವೈದ್ಯಕೀಯ ಸಹಾಯಕರಿಗೆ ಸನ್ಮಾನ ಮತ್ತು ಪ್ರೋತ್ಸಾಹಧನ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಗುಡದಪ್ಪ ಬನಪ್ಪನವರ್ ಹೇಳಿದರು.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸಂಘದ ಮೊದಲ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದು, ವಿವಿಧ ವರ್ಗಗಳ ಸುಮಾರು 280 ಜನ ಸದಸ್ಯರು ಅಳವಂಡಿ ಹೋಬಳಿಯಾದ್ಯಂತ ಸಂಘದ ಸದಸ್ಯರಿದ್ದು, ಕುರಿ ಉದ್ಯಮಕ್ಕೆ ಉತ್ತೇಜನ ನೀಡುವುದು ಸಂಘದ ಉದ್ದೇಶವಾಗಿದೆ ಎಂದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss