ಕೊಪ್ಪಳ| ಎರಡ್ಮೂರು ತಿಂಗಳಲ್ಲಿ ಫಾರಂ ನಂ 3 ನೀಡಲು ಚಿಂತನೆ: ಸಚಿವ ಬೈರತಿ ಬಸವರಾಜ

0
174

ಕೊಪ್ಪಳ: ರಾಜ್ಯಾದ್ಯಂತ ನಗರ ವಾಸಿಗಳು ಮನೆಗಳನ್ನು ಕಟ್ಟಿಕೊಳ್ಳಲು ಫಾರಂ ೩ ಕೊಡುವ ಬಗ್ಗೆ ಸರ್ಕಾರದ ಉನ್ನತ‌ಮಟ್ಟದಲ್ಲಿ ಸಭೆ ನಡೆಸಿ ಬೇಗ ತೀರ್ಮಾನಿಸಿ ಎರಡ್ಮೂರು ತಿಂಗಳಲ್ಲಿ ಸರಿ ಪಡಿಸಲಾಗುವುದು ಎಂದು ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜ ಹೇಳಿದರು.
ಅವರು ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮೊದಲಿಗೆ ಮನೆ ನಿರ್ಮಾಣದಲ್ಲಿ ಗೋಲ್ ಮಾಲ್ ಮಾಡಿ ಮನೆ ಕಟ್ಟಿಕೊಳ್ಳುವುದನ್ನು ತಡೆಯುವ ಉದ್ದೇಶದಿಂದ ಫಾರಂ ನಂ-೦೩ ನೀಡಲು ನಿರ್ಭಂದ ಹೆರಲಾಗಿತ್ತು
ಇದು ಯಾರೋ ಒಬ್ಬರು ಮಾಡುವ ತಪ್ಪಿನಿಂದಾಗಿ ಎಲ್ಲರೂ ಕಷ್ಟ ಅನುಭವಿಸುವುದು ಸರಿಯಲ್ಲ.
ಎಂದು ತಿರ್ಮಾನಕ್ಕೆ ಬರಲಾಗಿದೆ. ನಾನು ರಾಜ್ಯದಲ್ಲಿ ಪ್ರವಾಸ ಮಾಡಿದ್ದೇನೆ ಫಾರಂ ನಂ೩. ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ಸಮಯ‌ ಕೇಳಿದ್ದಾರೆ. ಅದನ್ನು ಇನ್ನು ಎರಡು ಮೂರು ತಿಂಗಳಲ್ಲಿ ನಿವಾರಣೆಗೆ ಕ್ರಮಕೈಗೊಳ್ಳಲಾಗಿದೆ.
ಫಾರಂ ೩ ಕೊಡುವ ಬಗ್ಗೆ ಸರ್ಕಾರದ ಉನ್ನತ‌ಮಟ್ಟದಲ್ಲಿ ಸಭೆ ನಡೆಸಿ ಬೇಗ ತೀರ್ಮಾನಿಸಿ ಸರಿ ಪಡಿಸಲಾಗುವುದು ಎಂದು ಹೇಳಿದರು.
ಪ್ರಧಾನಿಗೆ ದೇಶದ ಅಭಿವೃದ್ಧಿಯ ಬಗ್ಗೆ ಚಿಂತನೆ ಇಲ್ಲ. ಈಗಾಗಿ ಏನೆನೋ ತಿರ್ಮಾನ ಕೈಗೊಳ್ಳುತ್ತಾರೆ ಎಂದು ಕಾಂಗ್ರೆಸ್ ನವರ ಆರೋಪಕ್ಕೆ ಪ್ರತಿಕ್ರೀಯೆ ನೀಡಿದ ಅವರು, ಅವರ ಆರೋಪ ನಿರಾಧಾರ, ಪ್ರಧಾನಿಗಳು ದೇಶದ ಪರಿಸ್ಥಿತಿ ನೋಡಿಕೊಂಡು‌ ತೀರ್ಮಾನ ಮಾಡುತ್ತಿದ್ದಾರೆ. ಇನ್ನೊಬ್ಬರನ್ನು ಹೇಳಕೆಯಿಂದ ತಿರ್ಮಾನ ಕೈಗೊಳ್ಳಬೇಕಾಗಿಲ್ಲ ಎಂದು ತಿರುಗೇಟು ನೀಡಿದರು.
ಜಿಲ್ಕಾ ಉಸ್ತುವಾರಿ ಮಂತ್ರಿಗಳು ವಸೂಲಿ ಮಾಡಲು ಜಿಲ್ಲೆಗೆ ಬರುತ್ತಿದ್ದಾರೆ ಎಂಬ ಮಾಜಿ ಶಿವರಾಜ ತಂಗಡಗಿ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ ಅವರು, ಶಿವರಾಜ ತಂಗಡಿಗಿಯವರಿಗೆ ವಸೂಲಿ ಮಾಡಿದ ಆನುಭವ ಇದೆ. ಅದಕ್ಕೆ ಅವರು ತಮ್ಮ ವೃತ್ತಿಯನ್ನು ನೆನಪು ಮಾಡಿಕೊಂಡಿದ್ದರೆ. ಸಚಿವ ಬಿ ಸಿ ಪಾಟೀಲರಿಗೆ ಅಭಿವೃದ್ಧಿ ಮಾತ್ರ ಗೊತ್ತಿದೆ. ಈಗಾಗಿ ಅಭಿವೃದ್ಧಿಯ ಚಿಂತನೆ ಕಡೆ ಸಾಗುತ್ತಿದ್ದಾರೆ ಎಂದು ಹೇಳಿದರು.
ಕೊಪ್ಪಳ ನಗರದ ಯುಜಿಡಿ ಕಾಮಗಾರಿ ವಿಳಂಬ ಕುರಿತು ಪ್ರಶ್ನೇಗೆ ಉತ್ತರಿಸಿದ ಅವರು, ಕಾಮಗಾರಿ ಅವ್ಯವಹಾರ ಬಗ್ಗೆ ಇನ್ನೂ ನನಗೆ ಮಾಹಿತಿ ಇಲ್ಲ. ಆದರೆ ಕೊಪ್ಪಳದ‌ ಯುಜಿಡಿ ಕಾಮಗಾರಿ ಹೊಸದಾಗಿ ಮಾಡಲು ಡಿಪಿಅರ್ ಮಾಡಲು ಸೂಚಿಸಿದ್ದು, ಯುಜಿಡಿ ಮತ್ತು ಕುಡಿವ ನೀರಿನ ಕಾಮಗಾರಿ 2 ತಿಂಗಳಿನಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ಅದರಂತೆ ಗಂಗಾವತಿ ಅಮೃತ ಸಿಟಿ ಅವ್ಯವಹಾರ ಕುರಿತು ಮಾತನಾಡಿದ ಅವರು, ಗಂಗಾವತಿ ಅಮೃತ ಸೀಟಿ ಕಾಮಗಾರಿ ಅವ್ಯವಹಾರ ಕಳಪೆ ಕಾಮಗಾರಿ ಮುಲಾಜಿಲ್ಲದೆ ಕ್ರಮಕೈಗೊಳ್ಳಲು ಮುಂದಾಗಿದ್ದೇವೆ. ಆದರೆ ಜಿಲ್ಲಾಧಿಕಾರಿ ಅವರ, ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸುಮಾರು‌ 6 ಕೋಟಿ ಹಣ ಇದೆ. ನಿವೇಶನ ರಚನೆಗೆ ಟೆಂಡರ್ ಕರೆಯಲಾಗಿದೆ ನಗರಾಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ನಿವೇಶನದಲ್ಲಿ ಶೇ.5ರಷ್ಟು ಪತ್ರಕರ್ತರಿಗೆ ಮೀಸಲು ಇಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕ‌ ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಕುಡಾ ಅಧ್ಯಕ್ಷ ಮಹಾಂತೇಶ ಮೈನಳ್ಳಿ, ಆಯುಕ್ತ ಸಿದ್ದರಮೇಶ್ವರ ಇತರರು ಇದ್ದರು.

LEAVE A REPLY

Please enter your comment!
Please enter your name here