Sunday, August 14, 2022

Latest Posts

ಕೊಪ್ಪಳ ಕಲ್ಯಾಣ ಕರ್ನಾಟಕ ಜನಸಂಖ್ಯೆ ಅನುಸಾರ ಅನುದಾನ ಬಿಡುಗಡೆಗೊಳಿಸಿ: ಶಾಸಕ ಅಮರೇಗೌಡ ಬಯ್ಯಾಪುರ

ಕೊಪ್ಪಳ : ಹೈ-ಕ ಭಾಗವನ್ನು ಪ್ರತಿಷ್ಠೆಗಾಗಿ ಕಲ್ಯಾಣ ಕರ್ನಾಟಕವನ್ನಾಗಿ ಘೋಷಣೆ ಮಾಡಲಾಗಿದೆ. ಶೈಕ್ಷಣಿಕ ವರ್ಷದಲ್ಲಿ ಆರು ತಿಂಗಳು ಗತಿಸಿದರೂ ಸಮರ್ಪಕ ಅನುದಾನ ಬಿಡುಗಡೆಯಾಗಿಲ್ಲ. ಮಂಡಳಿಗೆ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ ಒತ್ತಾಯಿಸಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕದ ಮಂಡಳಿಗೆ ಅಧ್ಯಕ್ಷರನ್ನು ಆಯ್ಕೆಮಾಡಿದ್ದು ಪರಿಪೂರ್ಣವಲ್ಲ. ಅಧಿವೇಶನದಲ್ಲಿ ಮಂಡನೆ ಮಾಡಿ ಅಧ್ಯಕ್ಷರ ಆಯ್ಕೆಗೆ ಒಪ್ಪಿಗೆ ಪಡೆದಿಲ್ಲ. ನೇರವಾಗಿ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಅಧ್ಯಕ್ಷರಿಗೆ ಕ್ಯಾಬಿನೆಟ್ ರ್ಯಾಂಕ್ ನೀಡಬೇಕಿತ್ತು. ಆದರೆ, ಸರಕಾರ ನೇಮಕ ಮಾಡಿದೆ, ಇದರಲ್ಲಿ ನಮ್ಮದೇನು ಅಭ್ಯಂತರವಿಲ್ಲ. ಒಬ್ಬ ಕ್ಯಾಬಿನೆಟ್ ಮಂತ್ರಿ ಶಾಸಕರ ಕೈಕೆಳಗೆ ಕೆಲಸ ಮಾಡುವುದು ಸರಿಯಾದ ಕ್ರಮವಲ್ಲ. ಕೂಡಲೇ ಸಂಬಂಧಿಸಿದವರು ಇದನ್ನು ಸರಿಪಡಿಸುವ ಕೆಲಸ ಮಾಡಬೇಕು. ಹಿಂದಿನ ಸರಕಾರದಂತೆ ಮಂಡಳಿಯನ್ನು ರಚನೆ ಮಾಡಬೇಕು.
ಅಲ್ಲದೆ ಹಣ ಖರ್ಚು ಮಾಡಬೇಕಾದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕವನ್ನು ಸರಕಾರ ನಿರ್ಲಕ್ಷ್ಯ ಮಾಡಿದೆ. ಬಜೆಟ್‍ನಲ್ಲಿ ಸಿಎಂ ನಮ್ಮ ಭಾಗಕ್ಕೆ 1,500 ಕೋಟಿ ಘೋಷಣೆ ಮಾಡಿದ್ದರು. ಇದರಲ್ಲಿ ನಮ್ಮಿಂದ 1,100 ಕೋಟಿ ರೂ. ಅನುದಾನ ಪ್ರಸ್ತಾವನೆಯನ್ನು ಪಡೆದುಕೊಂಡಿದ್ದರು. ಆದರೆ ಆರು ತಿಂಗಳಾದರೂ ಪ್ರಸ್ತಾವನೆಯನ್ನೇ ಸರಕಾರ ಮಂಜೂರು ಮಾಡಿಲ್ಲ. ಇದು ಶಾಸಕರ ಹಕ್ಕನ್ನು ಮೊಟಕುಗೊಳಿಸಿದಂತೆ ಆಗುತ್ತದೆ ಎಂದರು.
371ಜೆ ಸಮರ್ಪಕ ಜಾರಿಯಾಗಿಲ್ಲ: ನೇರ ನೇಮಕಾತಿ ಮಾಡುವ ಹುದ್ದೆಗಳಿಗೆ ಯಾವ ಆರ್ಥಿಕ ನಿಬಂಧನೆ ಇಲ್ಲ. ಆದರೆ, ಸರಕಾರ ಎಲ್ಲ ನೇಮಕಾತಿಯನ್ನು ತಡೆಹಿಡಿದು, ಆದೇಶವನ್ನು ಸರಕಾರ ಉಲ್ಲಂಘಿಸಿದೆ. ಆರು ಜಿಲ್ಲೆಗಳಲ್ಲಿ ಶೇ.40ಹುದ್ದೆಗಳು ಖಾಲಿಯಾಗಿವೆ. ಅಲ್ಲದೆ ಕಕ ಭಾಗಕ್ಕೆ ನೀಡುವ ಶೇ.8ರಷ್ಟು ವಿನಾಯಿತಿಯನ್ನು ಕೆಲವು ಹುದ್ದೆಗಳಲ್ಲಿ ನಮಗೆ ನೀಡಿಲ್ಲ. ವಿದ್ಯಾರ್ಥಿಗಳು ಹಾಗೂ ಉದ್ಯೋಗ ಆಕಾಂಕ್ಷಿಗಳಿಗೆ ಪ್ರತಿ ಬಾರಿ ಅನ್ಯಾಯವಾಗುತ್ತಿದೆ. ಇದಕ್ಕಾಗಿ ತಾಂತ್ರಿಕತೆ ಹಾಗೂ ನೇಮಕಾತಿ ಕೋಶ ವಿಭಾಗವನ್ನು ತೆರೆಯಬೇಕು. ಈ ಮೂಲಕ ಸಮಸ್ಯೆಗಳನ್ನು ಪರಿಹಾರ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss