Monday, August 8, 2022

Latest Posts

ಕೊಪ್ಪಳ| ಕಳೆದ ವರ್ಷ ಕ್ರಾಪ್ ಸರ್ವೆ ಪ್ರಕಾರ ಮೆಕ್ಕೆಜೋಳಕ್ಕೆ ಪರಿಹಾರ‌ ನೀಡಲಾಗುವುದು: ಬಿ.ಸಿ.ಪಾಟೀಲ್

ಕೊಪ್ಪಳ: ಮೆಕ್ಕೆಜೋಳ ಬೆಳೆಗೆ ಪರಿಹಾರ ಕಳೆದ ವರ್ಷ ಕ್ರಾಪ್ ಸರ್ವೆ ಪ್ರಕಾರ ಮೊದಲ ಹಂತದಲ್ಲಿ ಪರಿಹಾರ‌ ನೀಡಲಾಗುವುದು ಎಂದು ಕೃಷಿ ಸಚಿವ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಅವರು ಬುಧವಾರ ನಗರದ ಪ್ರವಾಸ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಎತ್ತು ಎಳೆತು ಎಂದ ಮಾತ್ರಕ್ಕೆ ಕೊಟ್ಡಿಗೆ ಕಟ್ಟುವಕ್ಕಾಗಲ್ಲ ಎನ್ನುವ ಮಾತು ಹೇಳುತಾ. ಪರಿಹಾರ ಘೋಷಣೆ ಮಾಡಿ ಎಲ್ಲೂ ಹೋಗುವುದಿಲ್ಲ. ಮುಖ್ಯಮಂತ್ರಿಯವರು ಎಂದು ಮಾಡದ ಐತಿಹಾಸಿಕವಾಗಿ ಪರುಹಾರ ಘೋಷಣೆ ಮಾಡಿದ್ದಾರೆ. ಆದರೆ ಸರ್ವೆಯಲ್ಲಿ ಬಿಟ್ಟು ಹೋದ ರೈತರು ಸಮಿತಿಗೆ ಅರ್ಜಿ ಸಲ್ಲಿಸಿ, ನೋಂದಣಿ ಮಾಡಿಕೊಳ್ಳಬೇಕು. ಕೃಷಿ ಜೆಡಿ‌ ನೇತೃತ್ವದ ಸಮಿತಿ ಅಪ್ರೂವಲ್ ಮಾಡಿ ಹಣ ಬಿಡುಗಡೆ ಮಾಡಲಿದೆ. ಸರ್ಕಾರ ಮುಂದೆ ಇಟ್ಟ ಹೆಜ್ಜೆ ಹಿಂದೆ ತೆಗೆಯುವ ಮಾತಿಲ್ಲ. ಮಾರ್ಗಸೂಚಿ ರಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

೧೦೦ ದಿನ ಆದ ನಂತರ ಮಾಡಿದ ಕೆಲಸ ತೃಪ್ತಿ ನೀಡಿದೆ. ಮೂವತ್ತು ಜಿಲ್ಲೆ ಸುತ್ತಿದ್ದೇನೆ. ಸಮಸ್ಯೆ ತಿಳಿದು ಸರ್ಕಾರಕ್ಕೆ ವರದಿ ಮಾಡಿರುವೆ. ಸಿಎಂ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಬಾಗಲಕೋಟೆ ದ್ರಾಕ್ಷಿ ಬೆಳೆ ಆನ್ಲೈನ್ ಮಾರಾಟಕ್ಕೆ ಅವಕಾಶ. ಕೊಪ್ಪಳದಲ್ಲಿ ಭತ್ತ ಬೆಳೆ ಹಾನಿಗೆ ಪರಿಹಾರ‌ ೧೬೧೦ ಕೋಟಿ ರೂ. ಪ್ಯಾಕೇಜ್ ಮಾಡಿದ್ದಾರೆ. ಮೆಕ್ಕೆಜೋಳ ರೈತರಿಗೂ ಅನುಕೂಲ ಮಾಡಲು ಪರಿಹಾರ ಘೋಷಿಸಿದ್ದಾರೆ. ತಾಂತ್ರಿಕ ತೊಂದರೆ ಸರಿಪಡಿಸಿ ಪರಿಹಾರ ವಿತರಣೆ ಮಾಡಲಾಗುವುದು.

ಜಿ. ಅದ್ಯಕ್ಷ ಅವಿಶ್ವಾಸ ಕುರಿತು ಮಾತನಾಡಿದ ಅವರು ಸದ್ಯಕ್ಕೆ ಅವಿಶ್ವಾಸ ಇಲ್ಲ. ಸರಕಾರದ ಗೈಡಲೈನ್ಸ್ ಬಂದ ಮೇಲೆ ನೋಡೋನ ಕಾದು ನೋಡಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿ.ಪ.ಅಧ್ಯಕ್ಷ ವಿಶ್ವನಾಥ ರಡ್ಡಿ, ಜಿ.ಪಂ ಸದಸ್ಯ ಗವಿಸಿದ್ದಪ್ಪ ಕರಡಿ ಮತ್ತಿತರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss