ಕೊಪ್ಪಳ:ಕೊರೋನಾ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳು ಸರಕಾರ ಕೇಳಿದ ಶೆ.50ರಷ್ಟು ಬೆಡ್ ನೀಡಲು ನಿರಾಕರಿಸಲು ಮುಂದಾದರೆ ಕೊಪ್ಪಳ ಕೆ.ಎಸ್. ಆಸ್ಪತ್ರೆಯ ಮಂಡಳಿಯು ಪಾರ್ಥ ಇಂಟರ್ನ್ಯಾಶನಲ್ ಹೋಟೆಲ್ನ್ನು ಬಾಡಿಗೆಗೆ ಪಡೆದು ಪತ್ರ್ಯೇಕ 100 ಹಾಸಿಗೆಯ ಆಸ್ಪತ್ರೆಯನ್ನು ತಯಾರಿಸಿ ಕೊರೋನಾ ಚಿಕಿತ್ಸೆಗೆ ಮುಂದಾಗಿರುವುದು ಎಲ್ಲರ ಪ್ರಶಂಂಸಗೆ ಪಾತ್ರರಾಗಿದ್ದಾರೆ.
ಹೌದು, ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗಿರುವ ಕೊರೋನಾ ಚಿಕಿತ್ಸೆಗಾಗಿ ಸರಕಾರ ಖಾಸಗಿ ಆಸ್ಪತ್ರೆಗಳಿಗೆ ಶೆ. 50 ರಷ್ಟು ಬೆಡ್ಗಳನ್ನು ಮೀಸಲಿಡಬೇಕು ಎಂದು ಆದೇಶ ಮಾಡಿದರೂ ಕೂಡ ಅದನ್ನು ನೀಡದೇ ಅಮಾನಿವಿಯ ವರ್ತನೆಯನ್ನು ತೋರಲು ಮುಂದಾಗುವುದು ಕಾಣುತ್ತೇವೆ. ಅದರಂತೆ ಕೊಪ್ಪಳ ನಗರದ ಕೆ.ಎಸ್.ಆಸ್ಪತ್ರೆ ಮಂಡಳಿಯು ಕೊರೋನಾ ಚಿಕಿತ್ಸೆಗಾಗಿ 100 ಹಾಸಿಗೆಯ ಆಸ್ಪತ್ರೆಯನ್ನೇ ನಿರ್ಮಾಣ ಮಾಡಿಕೊಡಲು ಒಪ್ಪಿಗೆ ನೀಡಿದ್ದರು. ಆದರೆ ಒಪ್ಪಿಗೆಯಂತೆ ಕೆ.ಎಸ್.ಆಸ್ಪತ್ರೆಯ ಮಾಲಿಕ ಡಾ.ಬಸವರಾಜ ಕ್ಯಾವಟರ್ ಅವರು, ನಗರದಲ್ಲಿರುವ ಪಾರ್ಥ ಇಂಟರ್ನ್ಯಾಶನಲ್ ಹೋಟೇಲ್ನ್ನು ಬಾಡಿಗೆ ಪಡೆದು ಹೋಟೇಲ್ನಲ್ಲಿಯೇ ಈಗ 100 ಹಾಸಿಗೆ ಪ್ರತ್ಯೇಕ ಆಸ್ಪತ್ರೆಯನ್ನು ಕೊರೋನಾ ಚಿಕಿತ್ಸೆಗೆ ಸಿದ್ದ ಮಾಡುತ್ತಿರುವುದು ಹೆಮ್ಮೆಯ ವಿಷಯ.
ಈ ಆಸ್ಪತ್ರೆಯಲ್ಲಿ ಕೊವಿಡ್ ರೋಗಿಗಳಿಗೆ ಸಾಮಾನ್ಯ ಉತ್ತಮ, ದರ್ಜೆಯ ಚಿಕಿತ್ಸೆ, ಎಲ್ಲಾ ರೀತಿಯ ಆಕ್ಸಿಜನ್ ಸೇರಿದಂತೆ ಎಲ್ಲಾ ಸೌಕರ್ಯಗಳನ್ನು ವ್ಯವಸ್ಥೆ ಮಾಡಿ ಬೆಂಗಳೂರು ನುರಿತ ತಜ್ಞರಿಂದ ಚಿಕಿತ್ಸೆ ಕೂಡ ನೀಡುವುದಾಗಿ ತಿಳಿಸುತ್ತಾರೆ ಕೆ.ಎಸ್.ಆಸ್ಪತ್ರೆಯ ಮಾಲಿಕರಾದ ಡಾ. ಬಸವರಾಜ ಕ್ಯಾವಟರ್ವರು.
ಅದರಂತೆ ನಗರದ ಬಸ್ ನಿಲ್ದಾಣ ಪಕ್ಕದಲ್ಲಿಯೇ ಇರುವ ಖಾಸಗಿ ಸಿಟಿ ಆಸ್ಪತ್ರೆಯು ಮಂಡಳಿಯು ಕೊರೋನಾ ಚಿಕಿತ್ಸೆಗಾಗಿ ಇಡಿ ಆಸ್ಪತ್ರೆಯನ್ನು ಬಿಟ್ಟು ಕೋಡುವುದರ ಮೂಲಕ ಮಾನವಿಯತೆ ಮೆರೆದಿದ್ದಾರೆ.
ಈಗಾಗಲೇ ಈ ಆಸ್ಪತ್ರೆಯಲ್ಲಿ ಸಾಮಾನ್ಯ ಚಿಕಿತ್ಸೆಯನ್ನು ನಿಲ್ಲಿಸಿ ಕೊರೋನಾ ಚಿಕಿತ್ಸೆಗೆ ಮೀಸಲು ಇಡಲಾಗಿದೆ. ಆದರೆ ಸರಕಾರ ಶೆ.50ರಷ್ಟು ಬೆಡ್ಗಳನ್ನು ಕೇಳಿದರೆ ಕೊಪ್ಪಳ ಕೆ.ಎಸ್.ಆಸ್ಪತ್ರೆಯವರು ಪ್ರತ್ಯೇಕ 100 ಹಾಸಿಗೆ ಆಸ್ಪತ್ರೆ ನಿರ್ಮಾಣ ಮಾರುವುದು ಮತ್ತು ಸಿಟಿ ಖಾಸಗಿ ಆಸ್ಪತ್ರೆಯು ಕೊರೋನಾ ಚಿಕಿತ್ಸೆಗೆ ಬಿಟ್ಟು ಕೊಟ್ಟಿರುವುದು ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.