Thursday, June 30, 2022

Latest Posts

ಕೊಪ್ಪಳ| ಕೊರೋನಾ ಭಯ ಬೇಡ: ಇದರ ವಿರುದ್ದ ಹೋರಾಟದ ಜೀವನ ನಡೆಸುವ ಕೆಲಸವಾಗಬೇಕು: ಸಂಸದ ಸಂಗಣ್ಣ ಕರಡಿ

ಕೊಪ್ಪಳ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೋನಾ ಕುರಿತು ಜನರು ಆತಂಕ ಪಡುವುದು ಬೇಡ. ಆದರೆ ಆತ್ಮಸ್ಥೈರ್ಯದಿಂದ ಕೊರೋನಾದ ವಿರುದ್ಧ ಹೋರಾಡುವುದರೊಂದಿಗೆ ಜೀವನ ಸಾಗಿಸುತ್ತಾ ಕೊರೋನಾವನ್ನು ಸೋಲಿಸುವ ಕೆಲಸವಾಗಬೇಕು ಎಂದು ಸಂಸದ ಸಂಗಣ್ಣ ಕರಡಿ ಅವರು ಮನವಿಸಿದ್ದಾರೆ.

ಶನಿವಾರ ಸಾಮಾಜಿಕ ಜಾಲ ತಾಣಗಳ ಮೂಲಕ ಜನರಲ್ಲಿ ಮನವಿಸಿದ ಅವರು, ಜಿಲ್ಲೆಯಲ್ಲಿ  ಮೊದಲಿಗೆ ಕಡಿಮೆ ಸಂಖ್ಯೆಯಲ್ಲಿ ಬರುತ್ತಿದ್ದ ಕೊರೋನಾ ಈಗ ಹೆಚ್ಚುತ್ತಾ ಸಾಗಿದೆ. ಅದಕ್ಕೆ ಈಗ ಜಿಲ್ಲೆಯಲ್ಲಿ ಮತ್ತೊಂದು ಹೊಸ ಯಂತ್ರದ ಮೂಲಕ ಗಂಟಲ ದ್ರವಗಳ ಪರೀಕ್ಷೆ ನಡೆಸಿದ್ದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಾ ಸಾಗಿದೆ ಕೊರೋನಾ ಎಂದಾಕ್ಷಣ ಯಾರು ಭಯ ಪಡುವ ಅಗತ್ಯತೆ  ಇಲ್ಲ. ಇದೊಂದು ಸಾಂಕ್ರಾಮೀಕ ರೋಗವಾಗಿದ್ದರಿಂದ ಪ್ರತಿಯೋಬ್ಬರು ಕಡ್ಡಾಯವಾಗಿ ಪೇಸ್ ಮಾಸ್ಕ್‍ಗಳನ್ನು ಹಾಕಿಕೊಳ್ಳಬೇಕು. ವೈದ್ಯರು ಹೇಳಿದಂತೆ ಹಾಗಿಂದಾಗೆ ಸಾನಿಟೈಜರ ಬಳಸುವುದು, ಕೈ,ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವ ಕೆಲಸ ಮಾಡಬೇಕು.

ರೋಗ ನಿರೋಧಕ ಶಕ್ತಿ ಇದ್ದರೆ ಯಾವ ಕೊರೋನಾ ಏನು ಮಾಡಲು ಆಗುವುದಿಲ್ಲ. ಬಂದರೂ ಕೂಡ ಅದು ನೆಗಡಿ, ಕೆಮ್ಮಿನ ರೂಪದಲ್ಲಿ ಬಂದು ಹೋಗುತ್ತದೆ. ಆದ್ದರಿಂದ  ಪ್ರತಿಯೋಬ್ಬರು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು  ಕಷಾಯ ಹಾಗೂ ಬಿಸಿನೀರು  ಸೇವನೆ ಮಾಡುತ್ತಾ ಇರಬೇಕು. ಅನಗತ್ಯವಾಗಿ ಹೊರಗಡೆ ಸಂಚರಿಸದೇ ಇರುವುದು  ಹಾಗೂ ಅನಗತ್ಯ ವಸ್ತುಗಳನ್ನು ಮತ್ತು ಜನರನ್ನು ಮುಟ್ಟದೇ ದೂರ ಇರುವುದರ ಜೋತೆಗೆ  ಒಬ್ಬರಿಂದ ಸುಮಾರು 6 ಅಡಿ ಸಾಮಾಜಿಕ ಅಂತರ ಕಾಯ್ದುಕೊಂಡರೆ ಕೊರೋನಾದಿಂದ ದೂರ ಇರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕೊರೋನಾ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈಧ್ಯರ ಸಲಹೆ ಪಡೆದು ಪರೀಕ್ಷೆಗೋಳಪಡಬೇಕು. ಇದರ  ಮುಂಜಾಗ್ರತ ಕ್ರಮ ಕೈಗೊಳ್ಳಲು  ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಅದರಂತೆ ಜಿಲ್ಲಾಡಳಿತ ಆಸ್ಪತ್ರೆಯಲ್ಲಿ ಬೆಡ್, ಚಿಕಿತ್ಸೆ, ಸೇರಿದಂತೆ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರಕಾರ ನಿಮ್ಮೊಂದಿಗೆ  ಇದೆ. ಆದ್ದರಿಂದ ಜನರು ಕೊರೋನಾ  ಅಂದು ತಕ್ಷಣ ಭಯ ಪಡದೇ ಇದನ್ನು ಆತ್ಮಸ್ಥೈರ್ಯದಿಂದ ಎದುರಿಸುವ ಕೆಲಸವಾಗಬೇಕು ಎಂದು ಮನವಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss