Thursday, August 11, 2022

Latest Posts

ಕೊಪ್ಪಳ: ಕೊರೋನಾ ಭ್ರಷ್ಟಾಚಾರ ಲೆಕ್ಕ ಕೊಡಿ ಎಂದು ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಕೊಪ್ಪಳ: ಜಿಲ್ಲೆಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ನಾಯಕರು ಲೆಕ್ಕಕೊಡಿ ಎಂದು ಪ್ರತಿಭಟನೆ ಮಾಡಿದರು, ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಒಂದು ಸಣ್ಣ ಗ್ರಾಮ ಪಂಚಾಯತಿ ಯಿಂದ ಹಿಡಿದು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದವರೆಗೆ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ, ಅದು ತಮ್ಮ ಕಣ್ಣಿಗೆ ಕಾಣುತ್ತಿದೆ, ತಾಕತ್ತು ಇದ್ದರೆ ಲೆಕ್ಕ ಕೊಡಿ ಎಂದು ಸವಾಲ್ ಹಾಕಿದರು.

ಸರ್ಕಾರ ಇಲ್ಲಿಯವರೆಗೆ ಸರಿಯಾದ ಲೆಕ್ಕ ಇನ್ನೂ ಕೊಟ್ಟಿಲ್ಲ, ನೀವು ಲೆಕ್ಕ ಕೊಡುವವರೆಗೂ ನಾವು ಬಿಡುವುದಿಲ್ಲ, ಈ ಹೋರಾಟ ಇಲ್ಲಿಗೆ ಮುಗಿಯಲ್ಲ ನಮ್ಮ ಈ ಹೈದರಾಬಾದ್ ಕರ್ನಾಟಕ ಕಲ್ಯಾಣ ಕರ್ನಾಟಕದ ಪ್ರತಿ ಗ್ರಾಮ ಪಂಚಾಯತಿ ಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಮಾಜಿ ಸಚಿವರುಗಳಾದ ಯುಟಿ ಖಾದರ್ ಮತ್ತು ಉಮಾಶ್ರೀ ಮಾತನಾಡಿ ಕಳೆದ ಬಾರಿ ಪ್ರವಾಹ ಬಂದಾಗಿನ ಪರಿಹಾರ ಇನ್ನೂ ಕೊಟ್ಟಿಲ್ಲ ಇವರು ಹೇಗೆ ಸರ್ಕಾರ ನಿಭಾಹಿಸುತ್ತಾರೆ, ಕಳೆದ ಬಾರಿ ಮನೆ ಕಳೆದು ಕೊಂಡ ಸಂತ್ರಸ್ತರಿಗೆ ಮನೆ ನಿರ್ಮಿಸಿ ಕೊಡುತ್ತೆವೆ ಎಂದು ಹೇಳಿದ ಸರ್ಕಾರ ರಾಜ್ಯಾದ್ಯಂತ ಕೇವಲ 46 ಮನೆಗಳಿಗೆ 5 ಲಕ್ಷದಂತೆ ನೀಡಿರುತ್ತಾರೆ, ಇದರ ಮೇಲೆ ನೀವೆ ಅರ್ಥೈಸಿಕೊಳ್ಳಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಜಶೇಖರ ಹಿಟ್ನಾಳ, ಹೆಮಲಾತಾ ನಾಯಕ, ಹಸನಸಾಬ ದೊಟಿಹಾಳ ಕಾಗ್ರೆಸ್ ನ ಅನೇಕ ಮುಖಂಡರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss