ಕೊಪ್ಪಳ| ಕೊರೋನಾ ವೈರಸ್ ನಿಂದ ಜಿಲ್ಲೆ ನಿರಾಳ: ಮೂರು ದಿನ ಸೊಂಕಿಲ್ಲದೆ ಕರುಣೆ ತೋರಿರುವುದೇ ಸಮಾಧಾನ!

0
154

ಕೊಪ್ಪಳ: ಕಳೆದ ಮೇ.18 ರಂದು ಸೋಮವಾರ ಜಿಲ್ಲೆಯಲ್ಲಿ ಮೂವರಿಗೆ ಕೊರೋನಾ ವೈರಸ್ ದೃಢ ಪಡುವ ಮೂಲಕ ತಲ್ಲಣ
ಮೂಡಿಸಿದ್ದ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ಯಾವುದೇ ಕೊರೋನಾ ಪತ್ತೆಯಾಗದೆ ಇರುವುದರಿಂದ ಜಿಲ್ಲೆಯ ಜನತೆಗೆ ನಿರಾಳದ ಜೋತೆಗೆ ಸಮಾಧಾನ ನೀಡಿದೆ.

ಕಳೆದ 52 ದಿನಗಳ ಕಾಲ ಕೊರೋನಾ ವೈರಸ್ ಬರದಂತೆ ನೋಡಿಕೊಂಡಿದ್ದ ಜಿಲ್ಲೆಯಲ್ಲಿ ಮುಂಬೈ, ಮಹಾರಾಷ್ಟ್ರ, ತಮಿಳುನಾಡಿನಿಂದ ಬಂದ ಮೂವರು ವಲಸೆ ಕಾರ್ಮಿಕರು ಕೊರೋನಾ ವೈರಸ್ ಹೊತ್ತು ತರುವ ಮೂಲಕ 52 ದಿನದ ವೃತಕ್ಕೆ ಭಂಗ ತರುವುದರ ಮೂಲಕ ಹಸಿರು ವಲಯದ ಹಣೆ ಪಟ್ಟಿಯನ್ನು ಅಳಸಿ ಹಾಕಿದರು.

ಆದರೆ ಮಹಾರಾಷ್ಟ್ರ ದಿಂದ ಬಂದಿದ್ದ ಪಿ. 1173 ಸೋಂಕಿತ ವ್ಯಕ್ತಿಯ ಪ್ರಯಾಣ ಇಸ್ಟರಿಯಲ್ಲಿ 25 ಜನರ ಪ್ರಯಾಣಿಕರಲ್ಲಿ 9 ಜನ ಭಿಕ್ಷುಕರು ಪ್ರಯಾಣಿಸಿದ್ದು ಅಚ್ವರಿ ಮೂಡಿಸಿತ್ತು. ಆದರೆ ಭಿಕ್ಷುಕರು ಬರಿ ಪ್ರಯಾ ಮಾಡಿದ್ದರೆ ಅಚ್ವರಿ ಪಡಬೇಕಾಗಿರುವುದು ಏನು ಇಲ್ಲವಾಗಿತ್ತು. ಆದರೆ 9 ಜನ ಭಿಕ್ಷುಕರು ಕುಷ್ಟಗಿಯಲ್ಲಿ ಮನೆ ಮನೆಗೆ ಭಿಕ್ಷೆ ಬೇಡಿದ ಹಿನ್ನಲೆಯಲ್ಲಿ ಕೋರೋಣಾ ಹರಡುವ ಶಂಕೆಯಿಂದ ಭಿಕ್ಷೆ ನೀಡಿದ 100ಕ್ಕೂ ಹೆಚ್ಚು ಜನರನ್ನು ದ್ವಿತೀಯ ಸಂಪರ್ಕದವರು ಎಂದು ಪರಿಗಣಿಸಿ ಕ್ವಾರಂಟೈನ್ ಮಾಡಲಾಗಿದೆ.

ಅದರಂತೆ ಇನ್ನೂ ಇಬ್ಬರ ಪಿ.1174 ಹಾಗೂ ಪಿ.1175 ಸೊಂಕಿತರ ಪ್ರಯಾಣದವರನ್ನು ಜಿಲ್ಲಾಡಳಿತ ಪತ್ತೆ ಹಚ್ವಿ 100ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು.

ಆದರೆ ಗುರುವಾರ ಕೊಪ್ಪಳಕ್ಕೆ ಭಿಕ್ಷುಕರಿಂದ ಮತ್ತೆ ಕೊರೋನಾ ಗಂಡಾಂತರ ತರಬಹುದು ಎಂದು ಭಯ ಪಟ್ಟಿದ್ದ ಜಿಲ್ಲೆಯ ಜನತೆಗೆ ಗುರುವಾರ ಬೆಳಗಿನ ಪರೀಕ್ಷಾ ವರದಿಯ ಬುಲ್ಟಿನ್ ನಲ್ಲಿ ಕೊರೋನಾ ಇಲ್ಲದಿರುವುದು ಸ್ವಲ್ಪ ಮಟ್ಟಿಗೆ ಸಮಧಾನ ನೀಡಿದೆ.

ಆದರೆ ಜಿಲ್ಲೆಗೆ ಇನ್ನೂ 3,910 ಜನ ವಿವಿಧ ಜಿಲ್ಲೆಗಳಿಂದ ಹಾಗೂ ಸಾವಿರಕ್ಕೂ ಹೆಚ್ಚು ವಿವಿಧ ರಾಜ್ಯಗಳ ಸೇರಿದಂತೆ ಸುಮಾರು 4ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರು ಆಗಮಿಸಿದ್ದಾರೆ. ಅವರಿಂದ ಜಿಲ್ಲೆಗೆ ಯಾವ ಗಂಡಾಂತರ ಕಾದಿದಿಯೋ ಎಂಬುದು ಆತಂಕ ಮೂಡಿಸಿದೆ.

LEAVE A REPLY

Please enter your comment!
Please enter your name here