ಕೊಪ್ಪಳ: ಜಿಲ್ಲೆಯಲ್ಲಿ ಇಬ್ಬರು ಕೊರೊನಾ ಸೋಂಕುಮುಕ್ತರಾಗಿ ಆಸ್ಪತ್ರೆಯಿಂದ ಶುಕ್ರವಾರ ಬೀಡುಗಡೆಗೊಂಡಿದ್ದಾರೆ.
ಮೇ.18ರಂದು ಮೂವರಲ್ಲಿ ದೃಡಪಟ್ಟ ಸೊಂಕಿತರಲ್ಲಿ ಸೋಂಕಿತ ಪಿ.1174 ಮತ್ತು ಪಿ.1175 ಸೊಂಕಿತರು ಗುಣಮುಖರಾಗಿ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಜಿಲ್ಲೆಯ ನಿಲೋಗಿಪುರದ ಮಹಿಳೆ ಹಾಗೂ ಕೊಪ್ಪಳದ ಪದಕಿ ಲೇಔಟ್ನ ವ್ಯಕ್ತಿ ಇಬ್ಬರು ಸೋಂಕುಮುಕ್ತರಾಗಿದ್ದಾರೆ. ಆಸ್ಪತ್ರೆ ಸಿಬ್ಬಂದಿಗಳು ಚಪ್ಪಾಳೆ ತಟ್ಟುವ ಮೂಲಕ ಸಂತಸ ವ್ಯಕ್ತ ಪಡಿಸಿ ಬೀಡುಗಡೆಗೊಳಿಸಿದರು.
ಇನ್ನಿಬ್ಬರು ಸೋಂಕಿತರಿಗೆ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈಗಾಗಲೇ ಎರಡನೇ ಬಾರಿ ಸ್ವ್ಯಾಬ್ ಟೆಸ್ಟ್ನ ರಿಜಲ್ಟ್ ನೆಗೆಟಿವ್ ಬಂದಿದೆ. ಮೂರನೇ ಬಾರಿ ಟೆಸ್ಟ್ ಮಾಡಿಸಿ ವರದಿ ಬಂದ ನಂತರ ಅವರನ್ನು ಬೀಡುಗಡೆಗೊಳಿಸಲಾಗುವುದು ಎಂದು ಮಾಧ್ಯಮಗಳಿಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದಾನರಡ್ಡಿ ಮಾಹಿತಿ ನೀಡಿದರು.