ಕೊಪ್ಪಳ:ಜಿಲ್ಲೆಯಲ್ಲಿ ಜೂನ್ ೨೩ ರವರೆಗೆ ರವರೆಗೆ ರವರೆಗೆ ಪತ್ತೆಯಾದ ೪೧ ಕೊರೊನಾ ಪಾಸಿಟಿವ್ ಕೇಸ್ಗಳ ಪೈಕಿ ಇಂದು ಇಬ್ಬರು ಗುಣಮುಖರಾಗುವ ಮೂಲಕ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ.
ಕೆಪಿಎಲ್೨೧ ಪಿ೭೪೫೪, ಹಾಗೂ ಕೆಪಿಎಲ್ ೨೨ ಪಿ- ೭೭೭೭ ಸೋಂಕಿತರು ಗುಣಮುಖರಾಗಿದ್ದಾರೆ.ಒಟ್ಟಾರೆ ಜಿಲ್ಲೆಯಲ್ಲಿ ಮಂಗಳವಾರದವರೆಗೆ ಪತ್ತೆಯಾದ ೪೧ ಪ್ರಕರಣಗಳಲ್ಲಿ ೧೮ ಜನ ಗುಣಮುಖರಾಗಿದ್ದು ಓರ್ವ ಮಹಿಳೆ ಸಾವನ್ನಪ್ಪಿದ್ದಾಳೆ. ಅದರಂತೆ ಇನ್ನೂ ೨೨ ಜನ ಸೋಂಕಿತರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ದಾನರಡ್ಡಿ ಅವರು ತಿಳಿಸಿದ್ದಾರೆ.