ಹೊಸದಿಗಂತ ವರದಿ, ಕೊಪ್ಪಳ:
ದೇಶದಲ್ಲಿ ಮೊದಲ ಬಾರಿಗೆ ಆರಂಭವಾದ ಕೋವಿಡ್ ಲಸಿಕೆ ಕೋವಿಶೀಲ್ಡ್ ಲಸಿಕೆಯನ್ನು ಕೊಪ್ಪಳ ನಗರದ ಸರಕಾರಿ ಆಸ್ಪತ್ರೆ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದಲ್ಲಿ ಲಸಿಕೆ ಹಾಕುವುದರ ಮೂಲಕ ಚಾಲನೆ ನೀಡಲಾಯಿತು.
ಶನಿವಾರ ಬೆಳಿಗ್ಗೆ ದೇಶದ ಪ್ರಧಾನಿ ಮೋದಿಯವರ ಭಾಷಣ ಮುಗಿದ ನಂತರ ಕೋವಿಶೀಲ್ಡ್ ಲಸಿಕೆಯನ್ನು ಸಂಸದ ಕರಡಿ ಸಂಗಣ್ಣ, ಶಾಸಕ ರಾಘವೇಂದ್ರ ಹಿಟ್ನಾಳ, ಜಿ.ಪಂ ಅದ್ಯಕ್ಷ ರಾಜಶೇಖರ ಹಿಟ್ನಾಳ್ ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ, ಜಿ.ಪಂ ಸಿಇಓ ನೇತೃತ್ವದಲ್ಲಿ ಹಿರಿಯ ವೈದ್ಯರು ಲಸಿಕೆಯನ್ನು ಆಸ್ಪತ್ರೆಯ ಡಿ ನೌಕರರ ನಸವರಾಜ ಬಿ.ಎಲ್ ಅವರಿಗೆ ಮೊದಲ ಲಸಿಕೆ ಹಾಕಿದರು.