ಕೊಪ್ಪಳ: ಕೊಪ್ಪಳ ಮತ್ತು ಗಂಗಾವತಿ ತಾಲ್ಲೂಕಿನ ಖಾಸಗಿ ವೈದ್ಯಕೀಯ ಸಂಸ್ಥೆಗಳು ತಮ್ಮ ಆಸ್ಪತ್ರೆಯ ಸಾಮರ್ಥಿತ ಹಾಸಿಗೆಯಲ್ಲಿ ಶೇ.50 ರಷ್ಟು ಹಾಸಿಗೆಯನ್ನು ಕೋವಿಡ್ ಚಿಕಿತ್ಸೆಗಾಗಿ ಮೀಸಲಿಡಬೇಕು ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಅವರು ಆದೇಶ ಹೊರಡಿಸಿದ್ದಾರೆ.
ಕೊಪ್ಪಳ ಮತ್ತು ಗಂಗಾವತಿ ತಾಲ್ಲೂಕಿನ ಖಾಸಗಿ ವೈದ್ಯಕೀಯ ಸಂಸ್ಥೆಗಳು ಆಗಸ್ಟ್. 02 ರಾತ್ರಿ 8 ಗಂಟೆಯ ಒಳಗಾಗಿ ಆಸ್ಪತ್ರೆಯ ಸಾಮರ್ಥಿತ ಹಾಸಿಗೆಯಲ್ಲಿ ಶೇ.50 ರಷ್ಟು ಕೋವಿಡ್ ಚಿಕಿತ್ಸೆಗಾಗಿ ಅವಕಾಶ ಕಲ್ಪಿಸಬೇಕು. ಮತ್ತು ಸೌಲಭ್ಯ ಕಲ್ಪಿಸಲು ಅಗತ್ಯವಿರುವ ಕಟ್ಟಡಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 30, 33, ಹಾಗೂ 34 ರಡಿಯ ಆದೇಶ ಹೋರಡಿಸಲಾಗಿದೆ.
ಕೊಪ್ಪಳ ನಗರದಲ್ಲಿರುವ % ಆಸ್ಪತ್ರೆಗಳು ಹಾಗೂ ಗಂಗಾವತಿ ನಗರದಲ್ಲಿರುವ 22 ಖಾಸಗಿ ವೈದ್ಯಕೀಯ ಸಂಸ್ಥೆಗಳು ತಮ್ಮ ಆಸ್ಪತ್ರೆಯ ಸಾಮರ್ಥಿತ ಹಾಸಿಗೆಯಲ್ಲಿ ಶೇ.50 ರಷ್ಟು ಹಾಸಿಗೆಯನ್ನು ಕೋವಿಡ್ ಚಿಕಿತ್ಸೆಗಾಗಿ ಮಿಸಲಿಡಬೇಕು. ಈ ಅಂಶವನ್ನು ಕಾಲಮಿತಿ ಒಳಗೆ ಅನುಪಾಲಿಸಿ ಸೌಲಭ್ಯ ಕಲ್ಪಿಸಲು ಆಸಕ್ತಿ ತೋರದೇ, ಶೀಘ್ರವಾಗಿ ಕ್ರಮಕೈಗೊಳ್ಳದೇ ಇದ್ದಲ್ಲಿ ಹೊರ ರೋಗಿಗಳ ಚಿಕಿತ್ಸೆ ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.