Monday, July 4, 2022

Latest Posts

ಕೊಪ್ಪಳ, ಗಂಗಾವತಿ ಠಾಣೆ ಮೇಲ್ದರ್ಜೆಗೇರಿಸಲು ಕೆಡಿಪಿ ಸದಸ್ಯ ಅಮರೇಶ್ ಕರಡಿ ಮನವಿ

ಕೊಪ್ಪಳ: ಜಿಲ್ಲೆಯ ಕೊಪ್ಪಳ ಹಾಗೂ ಗಂಗಾವರಿ ಪೊಲೀಸ್ ಠಾಣೆಗಳನ್ನು ಈಗಿರುವ ದರ್ಜೆಗಿಂತ ಮೇಲ್ದರ್ಜೆಗೆ ಏರಿಸಿ ಅವುಗಳಿಗೆ ಪೊಲೀಸ್ ಇನ್‌ಸ್ಪೆಕ್ಟರ್ ಹುದ್ದೆಯ ಅಧಿಕಾರಿಯನ್ನು ಠಾಣಾಧಿ ಕಾರಿಯನ್ನಾಗಿ ನೇಮಿಸಬೇಕು ಎಂದು ಕೆಡಿಪಿ ಸದಸ್ಯ ಅಮರೇಶ್ ಕರಡಿ ಅವರು ಗೃಹ ಇಲಾಖೆ ಕಾರ್ಯದರ್ಶಿ ಡಿ. ರೂಪಾ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಬೆಂಗಳೂರಿನ ಗೃಹ ಇಲಾಖೆ ಕಾರ್ಯದರ್ಶಿ ಕಚೇರಿಯಲ್ಲಿ ರೂಪಾ ಅವರನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಿರುವ ಅವರು, ಈ ಹಿಂದೆ ಡಿಜಿಪಿ ಅವರು ಆಯಾ ಜಿಲ್ಲೆಯ ಎಸ್ಪಿಗಳಿಗೆ ಸೂಚನೆ ನೀಡಿ, ತಮ್ಮಲ್ಲಿನ ಯಾವ ಯಾವ ಠಾಣೆಗಳನ್ನು ಮೇಲ್ದರ್ಜೆಗೇರಿಸಬೇಕು ಎಂಬ ಅಭಿಪ್ರಾಯ ವರದಿ ಕಳುಹಿಸಿಕೊಡಲು ತಿಳಿಸಿದ್ದರು.
ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ವರದಿಯಾಗುವ ಅಪರಾಧಗಳ ಸಂಖ್ಯೆ, ಕಾನೂನು ಸುವ್ಯವಸ್ಥೆ ಸಮಸ್ಯೆ ಹಾಗೂ ಅಲ್ಲಿ ಮಂಜೂ ರಾದ ಪೊಲೀಸ್ ಉಪ ನಿರೀಕ್ಷಕ ಹುದ್ದೆಗಳ ಸಂಖ್ಯೆ ಆಧರಿಸಿ ಅಭಿಪ್ರಾಯ ವರದಿ ನೀಡುವುದು ಸೂಕ್ತವಾಗಿತ್ತು. ಈ ಅಂಶಗಳನ್ನು ಪರಿಗಣಿಸಿದಾಗ ಜಿಲ್ಲೆಯಲ್ಲಿ ಕೊಪ್ಪಳ ಹಾಗೂ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗಳು ಮೇಲ್ದರ್ಜೆಗೇರಲು ಸೂಕ್ತವಾಗಿವೆ. ಈ ಎರಡು ಠಾಣೆಗಳಲ್ಲಿ ಜಿಲ್ಲೆಯ ಎಲ್ಲ ಠಾಣೆಗಳಿಗಿಂತ ಅಧಿಕ ಅಪರಾಧ ಪ್ರಕರಣಗಳು ವರದಿಯಾಗುತ್ತಿರುತ್ತವೆ. ಕೊಪ್ಪಳ ಗ್ರಾಮೀಣ ಠಾಣೆಗೆ ಮೂರು ಉಪನಿರೀಕ್ಷಕರನ್ನು ಹಾಗೂ ಗಂಗಾವತಿ ಗ್ರಾಮೀಣ ಠಾಣೆಗೆ ನಾಲ್ಕು ಉಪ ನಿರೀಕ್ಷಕರನ್ನು ಮಂಜೂರು ಮಾಡಲಾಗಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿದಾಗ ಜಿಲ್ಲೆಯಲ್ಲಿ ಈ ಎರಡು ಠಾಣೆಗಳು ಮೇಲ್ದರ್ಜೆಗೇರಿಸಬೇಕಿದೆ.
ಆದರೆ ಈ ಹಿಂದಿನ ಎಸ್ಪಿ ಈ ಎರಡು ಠಾಣೆಗಳನ್ನು ಪರಿಗಣಿಸದೆ ಕಾರಟಗಿ ಮತ್ತು ಕನಕಗಿರಿ ಠಾಣೆಗಳನ್ನು ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಎರಡೂ ಠಾಣೆಗಳಲ್ಲಿ ವರದಿಯಾದ ಪ್ರಕರಣಗಳನ್ನು ನೋಡಿದರೆ ಹಾಗೂ ಅಲ್ಲಿ ಮಂಜೂರಾದ ಆರಕ್ಷಕ ಉಪನಿರೀಕ್ಷಕ ಹುದ್ದೆಗಳನ್ನು ಪರಿಗಣಿಸಿದರೆ ಮೇಲ್ದರ್ಜೆಗೇರಲು ಸೂಕ್ತವಲ್ಲ.
ಈ ಕಾರಣಕ್ಕಾಗಿ ಈ ವಿಷಯದ ಬಗ್ಗೆ ಪರಿಶೀ ಲಿಸಿ, ಗಂಗಾವತಿ ಮತ್ತು ಕೊಪ್ಪಳ ಗ್ರಾಮೀಣ ಠಾಣೆಗಳನ್ನು ಮೇಲ್ದರ್ಜೆಗೇರಿಸಿ ಪೊಲೀಸ್ ಇನ್‌ಸ್ಪೆಕ್ಟರ್ ಹುದ್ದೆಯ ಅಧಿಕಾರಿಯನ್ನು ಠಾಣಾಧಿಕಾರಿಯನ್ನಾಗಿ ಹಾಗೂ ಈ ಎರಡು ಠಾಣೆಗಳನ್ನು ಮೇಲ್ದರ್ಜೆ ಗೇರಿಸಿದ ಬಾಧಿತವಾಗುವ ವೃತ್ತಗಳಾದ ಗಂಗಾವತಿ ಗ್ರಾಮೀಣ ವೃತ್ತ ಮತ್ತು ಕೊಪ್ಪಳ ಗ್ರಾಮೀಣ ವೃತ್ತಗಳನ್ನು ಮರು ಹೊಂದಾ ಣಿಕೆ ಮಾಡಿ ಕೊಪ್ಪಳ ಗ್ರಾಮೀಣ ವೃತ್ತವನ್ನು ಮುನಿರಾಬಾದ್ ವೃತ್ತವನ್ನಾಗಿ ಬದಲಾಯಿಸಿ ಆ ವೃತ್ತಕ್ಕೆ ಮುನಿರಾಬಾದ್ ಹಾಗೂ ಅಳವಂಡಿ ಠಾಣೆಗಳನ್ನು ಮತ್ತು ಗಂಗಾವತಿ ಗ್ರಾಮೀಣ ವೃತ್ತಕ್ಕೆ ಕನಕಗಿರಿ ವೃತ್ತ ಎಂದು ಮರು ನಾಮಕರಣ ಮಾಡಿ ಆ ವೃತ್ತಕ್ಕೆ ಕನಕಗಿರಿ ಮತ್ತು ಕಾರಟಗಿ ಠಾಣೆಗಳನ್ನು ಒಳಗೊಂಡಂತೆ ಮರು ಹೊಂದಾಣಿಕೆ ಮಾಡಬೇಕು ಎಂದು ಮನವಿ ಮಾಡಿಕೊಂಡಿ ದ್ದಾರೆ.
ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಗೃಹ ಇಲಾಖೆ ಕಾರ್ಯದರ್ಶಿ ಡಿ. ರೂಪಾ ಅವರು ಸಕರಾತ್ಮಕ ಪ್ರತಿಕ್ರಿಯೆ ನೀಡಿರುವುದಾಗಿ ತಿಳಿಸಿದ್ದಾರೆ ಎಂದು ಅಮರೇಶ್ ಕರಡಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss