Monday, August 8, 2022

Latest Posts

ಕೊಪ್ಪಳ| ಗಿಡ ಮರಗಳನ್ನು ನೆಟ್ಟು ದೇವರಿಗೆ ಕಾಣಿಕೆ ನೀಡಿ: ಗವಿಮಠದ ಗವಿಸಿದ್ಧೇಶ್ವರ ಶ್ರೀ

ಕೊಪ್ಪಳ: ಮನುಷ್ಯ ದೇಹ ಬಿಟ್ಟು ಹೋಗುವಾಗ ದೇವರಿಗೆ ಏನಾದರು ಒಂದು ಕಾಣಿಕೆಗಳನ್ನು ನೀಡಬೇಕೆಂದಿದ್ದರೆ ನಾವೆಲ್ಲಾ ಗಿಡಮರಗಳನ್ನು ನೆಟ್ಟು ಬೆಳೆಸಬೇಕು ಎಂದು ಗವಿಮಠದ ಗವಿಸಿದ್ಧೇಶ್ವರ  ಮಹಾಸ್ವಾಮಿಗಳು ಹೇಳಿದರು.
ಅವರು ಬುಧವರ “ದೈವ ಸಾಕ್ಷಾತ್ಕಾರಕ್ಕಾಗಿ ಲಕ್ಷದೀಪೆÇೀತ್ಸವ ಪ್ರಕೃತಿ ಸಾಕ್ಷಾತ್ಕಾರಕ್ಕಾಗಿ ಲಕ್ಷವೃಕ್ಷೋತ್ಸವ” ಎಂಬ ಧ್ಯೇಯ ವಾಕ್ಯದೊಂದಿಗೆ ಕೊಪ್ಪಳ ಹಾಗೂ ಸುತ್ತಮುತ್ತಲೂ  ಲಕ್ಷ ಸಸಿಗಳನ್ನು ನೆಡುವಂತಹ ಕಾರ್ಯಕ್ರಮವನ್ನು ಜನರು ವೀಕ್ಷಿಸಲು ವರ್ಚುವಲ್ ಆನ್‍ಲೈನ್‍ನಲ್ಲಿ ನೇರ ಪ್ರಸಾರ ಮಾಡುವಂತಹ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇವರು ನಮಗೆ ಸುಂದರವಾದ ನಿಸರ್ಗ ಮತ್ತು ಬದುಕನ್ನು ಕೊಟ್ಟಿದ್ದಾನೆ. ವಿದೇಶಕ್ಕೆ ಹೋಲಿಸಿದರೆ ನಮ್ಮ ದೇಶದಲ್ಲಿ ಗಿಡಮರಗಳನ್ನು ಬೆಳೆಸುವ ಸಂಖ್ಯೆ ಕಡಿಮೆ. ನಾವೆಲ್ಲಾ ಗಿಡ ಮರಗಳನ್ನು ಬೆಳೆಸುವುದರಿಂದ ಪರಿಸರವನ್ನು ಸುಂದರಗೊಳಿಸಬಹುದು. ಇದು ಮನುಷ್ಯನ ಆರೋಗ್ಯಕ್ಕೆ ಪೂರಕವಾಗುತ್ತದೆ ಎಂದು ಆಶೀರ್ವಚನ ನೀಡಿದರು.
ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಬಿ.ಸಿ ಪಾಟೀಲರು ವರ್ಚುವಲ್ ಆನ್‍ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿ, ಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಕೊಪ್ಪಳದ ಹಿರೇಹಳ್ಳ ಪುನಶ್ಚೇತನ ರೈತರ ಸಹಕಾರದಲ್ಲಿ ಮಾಡಿದ್ದು ಬಹುದೊಡ್ಡ ಕೆಲಸ. ಇದೀಗ ಲಕ್ಷ ಸಸಿಗಳನ್ನು ನೆಟ್ಟು ಈ ನಾಡಿನಲ್ಲಿ ಹಸಿರು ತುಂಬಿಸುವ ಕೆಲಸಕಾರ್ಯಗಳನ್ನು ಮಾಡುತ್ತಿದ್ದಾರೆ. ಇವರ ದಿಟ್ಟ ಜನಪರ  ಕಾರ್ಯಕ್ರಮ ಈ ನಾಡಿಗೆ ಮಾದರಿ ಎಂದರು.
ಮತ್ತೋರ್ವ ನೀರಾವರಿ ಮತ್ತು ಕಾನೂನು ಸಂಸದೀಯ ಸಚಿವರಾದ ಜೆ.ಸಿ ಮಾಧು ಸ್ವಾಮಿ ಮಾತನಾಡಿ, ನೆಲ,ಜಲ ಮತ್ತು ಪರಿಸರ ಸಂರಕ್ಷಣೆಗಾಗಿ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳು ಅನೇಕ ಜನಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಪೂಜ್ಯರ ಈ ಕೈಂಕರ್ಯಕ್ಕೆ ಮತ್ತು  ಸತ್ಕಾರ್ಯಕ್ಕೆ ಸದಾ ಕೈಜೋಡಿಸುತ್ತೇನೆ. ಲಕ್ಷ ಗಿಡಗಳನ್ನು ನೆಟ್ಟು ಬೆಳೆಸುವಂತಹ ಸಮಾಜ ಮುಖೀ ಕಾರ್ಯ ನಿಜವಾಗಿಯೂ ಅರ್ಥಪೂರ್ಣವೆಂದರು.
ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ, ಅಮರೇಗೌಡ ಬಯ್ಯಾಪುರ, ಪರಣ್ಣ ಮುನವಳ್ಳಿ, ಬಸವರಾಜ ದಡೇಸೂಗೂರ, ಕೃಷಿ ನೀರಾವರಿ ಇಲಾಖೆಯ ಕಾರ್ಯದರ್ಶಿಗಳಾದ ಮೃತ್ಯುಂಜಯ ಸ್ವಾಮಿ ಮಾತನಾಡಿದರು.
ಕೊಪ್ಪಳದ ವಿವಿದೆಡೆ ಜರುಗಿದ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಂಸದÀ ಸಂಗಣ್ಣ ಕರಡಿ,  ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್,  ಇವರು ಜಿಲ್ಲಾಡಳಿತ ಕಛೇರಿ ಆವರಣದಲ್ಲಿ,  ಪೊಲೀಸ ವರಿಷ್ಠಾಧಿಕಾರಿ ಜಿ ಸಂಗೀತಾ ಇವರು  ತಾವು ಇದ್ದಲ್ಲಿಯೇ  ಸಸಿ ನೆಟ್ಟು ಆನ್ ಲೈನ್ ಮೂಲಕ ಮಾತನಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss