Tuesday, June 28, 2022

Latest Posts

ಕೊಪ್ಪಳ| ಗ್ರಾ.ಪಂ. ಚುನಾವಣೆ ವೇಳಾಪಟ್ಟಿ ಪ್ರಕಟ: 149 ಗ್ರಾ.ಪಂ.ಗಳಿಗೆ ಎರಡು ಹಂತದಲ್ಲಿ ಚನಾವಣೆ

ಹೊಸದಿಗಂತ ವರದಿ, ಕೊಪ್ಪಳ

ಜಿಲ್ಲೆಯ 149 ಗ್ರಾಮ ಪಂಚಾಯತ್‍ಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಈಗಾಗಲೇ ದಿನಾಂಕ ನಿಗದಿಪಡಿಸಿ ಆದೇಶ ಹೊರಡಿಸಿದ್ದು, ಅದರಂತೆ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ.

ಮೊದಲನೇ ಹಂತ 73 ಗ್ರಾ.ಪಂ.: ಮೊದಲ ಹಂತದಲ್ಲಿ ಕೊಪ್ಪಳ ತಾಲೂಕಿನ 38 ಹಾಗೂ ಯಲಬುರ್ಗಾ ತಾಲೂಕಿನ 20 ಮತ್ತು ಕುಕನೂರು ತಾಲೂಕಿನ 15 ಸೇರಿದಂತೆ 73 ಗ್ರಾಮ ಪಂಚಾಯಿತಿಗಳಿಗೆ ಮೊದಲನೇ ಹಂತದ ಚುನಾವಣೆ ನಡೆಯಲಿದೆ.

ಅದರಂತೆ ಮೊದಲೇ ಹಂತದ ಚುನಾವಣೆಗೆ ಸಂಬಂಧಿಸಿದಂತೆ ಡಿ.7 ಹಾಗೂ ಎರಡನೇ ಹಂತದ ಚುನಾವಣೆಗೆ ಸಂಬಂಧಿಸಿ ಡಿ.11ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ.

ಮೊದಲ ಹಂತದ ಚುನಾವಣೆ ನಡೆಯುವ ಕೊಪ್ಪಳ, ಯಲಬುರ್ಗಾ ಹಾಗೂ ಕುಕನೂರು ತಾಲೂಕುಗಳಲ್ಲಿ ನಾಮಪತ್ರಗಳನ್ನು ಸಲ್ಲಿಸಲು ಡಿ.11 ಕೊನೆಯ ದಿನವಾಗಿದ್ದು, ಡಿ.12ರಂದು ನಾಮಪತ್ರಗಳ ಪರಿಶೀಲನೆ, ಡಿ.14ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಮತದಾನ ಅಗತ್ಯವಿದ್ದರೆ ಡಿ.22ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.

ದ್ವೀತಿಯ ಹಂತದಲ್ಲಿ 76 ಗ್ರಾ.ಪಂಗಳು: ಅದರಂತೆ ದ್ವಿತೀಯ ಹಂತದದಲ್ಲಿ ಕುಷ್ಟಗಿ ತಾಲೂಕಿನ 36 ಗ್ರಾ.ಪಂಚಾಯಿತಿಗಳಿಗೆ. ಕಾರಟಗಿ ತಾಲೂಕಿನ 11, ಕನಕಗಿರಿ ತಾಲೂಕಿನ 11, ಗಂಗಾವತಿ ತಾಲೂಕಿನ 18 ಸೇರಿದಂತೆ 76 ಗ್ರಾಮ ಪಂಚಾಯಿತಿಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ಎರನೇ ಹಂತದ ಚುನಾವಣೆ ನಡೆಯುವ ಕುಷ್ಟಗಿ, ಕಾರಟಗಿ ಕನಕಗಿರಿ,ಗಂಗಾವತಿ, ತಾಲೂಕಿನ ಗ್ರಾ,ಪಂಚಾಯಿತಿಗಳಿಗೆ ನಾಮಪತ್ರ ಸಲ್ಲಿಸಲು ಡಿ.16 ಕೊನೆಯ ದಿನವಾಗಿದ್ದು, ಡಿ.17ರಂದು ನಾಮಪತ್ರಗಳ ಪರಿಶೀಲನೆ, ಉಮೇದುವಾರಿಕೆ ಹಿಂಪಡೆಯಲು ಡಿ.19 ಕೊನೆಯ ದಿನವಾಗಿದ್ದು, ಡಿ.27ರಂದು ಮತದಾನ ನಡೆಯಲಿದೆ.

ಎರಡೂ ಹಂತದ ಚುನಾವಣೆಯ ಬಳಿಕ ಮತಗಳ ಎಣಿಕೆಯು ಡಿ.30ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ.

ಕೋವಿಡ್-19ರ ಹಿನ್ನೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಮಾರ್ಗಸೂಚಿಯನ್ನು ತಯಾರಿಸಿದ್ದು, ಅದರಲ್ಲಿರುವ ಸೂಚನೆಗಳನ್ನು ಅಳವಡಿಸಿಕೊಂಡು ಚುನಾವಣೆ ನಡೆಸಬೇಕು. ಪ್ರತೀ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆ 1000ಕ್ಕೆ ಮಿತಿಗೊಳಿಸಲಾಗಿದೆ. ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಮತಗಟ್ಟೆ ಪ್ರವೇಶಿಸುವ ಮುನ್ನ ತಮ್ಮ ಕೈಗಳನ್ನು ಸ್ಯಾನಿಟೈಝ್ ಮಾಡಿಕೊಂಡು ಮತ ಚಲಾಯಿಸಬೇಕು ಎಂದು ಸೂಚಿಸಲಾಗಿದೆ.
ಕೋವಿಡ್ ಸೋಂಕಿತರು ಹಾಗೂ ಕೋವಿಡ್ ಶಂಕಿತರು ಅಗತ್ಯ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಸಂಬಂಧಿಸಿದ ಮತಗಟ್ಟೆಗಳಲ್ಲಿ ಮತದಾನದ ಕೊನೆಯ ಒಂದು ಗಂಟೆ ಅವಧಿಯಲ್ಲಿ ಮತದಾನ ಮಾಡಬಹುದಾಗಿದೆ.

ಕೊಪ್ಪಳ ಜಿಲ್ಲೆಯ 1011 ಗ್ರಾ.ಪಂ.ಗಳಿಗೆ 227 ಆಕ್ಸಿಲರಿ ಮತಗಟ್ಟೆಗಳು ಸೇರಿದಂತೆ ಒಟ್ಟು 1,238 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಅದರಲ್ಲಿ 41,4,746 ಪುರುಷರು ಹಾಗೂ 41,4,121 ಮಹಿಳೆಯರು ಹಾಗೂ 235 ಮಂದಿ ಇತರರು ಸೇರಿದಂತೆ ಒಟ್ಟು 82,8,890 ಮಂದಿ ಮತದಾನದ ಹಕ್ಕು ಚಲಾವಣೆ ಮಾಡಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss