ಗಂಗಾವತಿ:ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಹಾಸಿಗೆಗಳನ್ನು ಕಡ್ಡಾಯವಾಗಿ ಕೊರೊನಾ ಸೋಂಕಿತರಿಗೆ ಮೀಸಲಿಡಬೇಕು ಎಂಬ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿದ ನಗರದ ನಾನಾ ಖಾಸಗಿ ಆಸ್ಪತ್ರೆಗಳ ಬಾಗಿಲುಗಳನ್ನು ಅಧಿಕಾರಿಗಳು ಬಂದ್ ಮಾಡಿಸಿದ್ದಾರೆ.
ತಹಸೀಲಾರ್ ಕವಿತಾ ನೇತೃತ್ವದಲ್ಲಿ ನಗರದ ಯಶೋಧಾ, ಶುಶ್ರುತಾ ನರ್ಸಿಂಗ್ ಹೋಂ, ನಿರ್ಮಲ ಮಕ್ಕಳ ಆಸ್ಪತ್ರೆ, ವಿನಾಯಕ ನರ್ಸಿಂಗ್ ಹೋಂ, ತೇಜಸ್ವಿನಿ ಮಕ್ಕಳ ಆಸ್ಪತೆ, ಅಮರ್ ಆಸ್ಪತ್ರೆ, ವರಸಿದ್ಧಿ ವಿನಾಯಕ ಆಸ್ಪತ್ರೆ, ಲಕ್ಷ್ಮಿ ನರ್ಸಿಂಗ್ ಹೋಂ, ವಿವೇಕಾನಂದ ಆಸ್ಪತ್ರೆ, ವಾಸವಿ ನರ್ಸಿಂಗ್ ಹೋಂ, ಮಾರುತಿ ಕಣ್ಣು ಮತ್ತು ಹಲ್ಲಿನ ಆಸ್ಪತ್ರೆ ಹಾಗೂ ನೇತ್ರಜ್ಯೋತಿ ಆಸ್ಪತ್ರೆಗಳನ್ನು ಬಂದ್ ಮಾಡಿಸಲಾಗಿದೆ.
ಡಿವೈಎಸ್ಪಿ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಶೇಖರಪ್ಪ ಈಳಿಗೇರ ತಹಶೀಲ್ದಾರ್ ಕವಿತಾ ಅವರಿಗೆ ಸಾಥ್ ನೀಡಿದರು. ಜನರಿಗೆ ತುತರ್ು ಆರೋಗ್ಯ ಸೇವೆ ನೀಡುವಲ್ಲಿ ಹಿಂದೇಟು ಹಾಕಿದ ಮತು ವಿಪತ್ತು ನಿಭಾಯಿಸುವಲ್ಲಿ ಅಸಹಕಾರ ತೋರಿದ ಹಿನ್ನೆಲೆ ಕೆಲ ಆಸ್ಪತ್ರೆಗಳನ್ನು ಸೀಲ್ಡೌನ್ ಮಾಡಲಾಗಿದ್ದು, ಇನ್ನು ಕೆಲ ಆಸ್ಪತ್ರೆಗಳಿಗೆ ಲಾಕ್ ಮಾಡಲಾಗಿದೆ.