ಕೊಪ್ಪಳ: ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಅವರಿಗೆ ಗುರುವಾರ ರಾತ್ರಿ ಕೊರೋನಾ ಸೋಂಕು ಇರುವುದು ದೃಡವಾಗಿದೆ.
ಕಳೆದ ವಾರಗಳಿಂದ ಅವರ ಕಚೇರಿಯ ಸಿಬ್ಬಂದಿಗಳಿಗೆ ಸೋಂಕು ಬಂದಿದ್ದರಿಂದ ಅವರು ಹೋಂ ಕ್ವಾರಂಟೈನ್ ಆಗಿದ್ದರು. ಆದರೆ ಗುರುವಾರ ಬೆಳಿಗ್ಗೆ ಪರೀಕ್ಷೆ ಮಾಡಿಸಿದಾಗ ಕೊರೋನಾ ಇರುವುದು ಪತ್ತೆಯಾಗಿದೆ.
ತಮ್ಮ ಸಂಪರ್ಕಕ್ಕೆ ಬಂದವರು, ಆರೋಗ್ಯ ಕಾಳಜಿ ವಹಿಸುವಂತೆ, ಹಾಗೂ ಸೋಂಕಿನ ಲಕ್ಷಣಗಳು ಕಂಡು ಬಂದರೆ ತಪಾಷಣೆ ಮಾಡಿಕೊಳ್ಳುವಂತೆ ಮನವಿಸಿದ್ದಾರೆ.
ಸೋಂಕಿನಿಂದ ಯಾರು ಸಹ ಗಾಬರಿಯಾಬೇಕಿಲ್ಲ. ಎಲ್ಲರೂ ಎಚ್ಚರಿಕಾ ಕ್ರಮಗಳನ್ನು ವಹಿಸುವಂತೆ ಅವರು ತಿಳಿಸಿದ್ದಾರೆ.