Monday, July 4, 2022

Latest Posts

ಕೊಪ್ಪಳ ಜಿಲ್ಲೆಯಲ್ಲಿ ಇಲ್ಲಿಯವೇರೆಗೂ ಯಾವುದೇ ಕೊರೋನಾ ದೃಡ ಪಟ್ಟಿಲ್ಲ: ಜಿಲ್ಲಾಧಿಕಾರಿ

ಕೊಪ್ಪಳ: ಜಿಲ್ಲೆಯಲ್ಲಿ ಇಲ್ಲಿಯವೇರೆಗೂ ಯಾವುದೇ ಕೊರೋನಾ ದೃಡ ಪಟ್ಟಿಲ್ಲ. ಪರೀಕ್ಷೆ ಕಳಿಸಿದ ಎಲ್ಲಾ ವರದಿಗಳು ನೆಗಟಿವ್ ಬಂದಿವೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ಹೇಳಿದರು.
ಪ್ರಕಟಣೆಯ ಮೂಲಕ ತಿಳಿಸಿದ ಅವರು. ಒಟ್ಟಾರೆ ಜಿಲ್ಲೆಯಲ್ಲಿ 80 ಜನರ ಮೇಲೆ ನೀಗಾ ಇಡಲಾಗಿತ್ತು. ಅದರಲ್ಲಿ ೩೩ ಜನರು ದೆಹಲಿ ತಬ್ಲಘಿ ಜಮಾತ್ ನಲ್ಲಿ ಭಾಗವಹಿಸಿದ್ದವರು ಆಗಿದ್ದಾರೆ. ಆದರೆ ಅವರೆಲ್ಲರ ಗಂಟಲ ದ್ರವ, ಹಾಗೂ ರಕ್ತ ಪರೀಕ್ಷೆ ಮಾಡಿಸಿದ್ದು, ನೆಗಟಿವ್ ಎಂದು ಬಂದಿದೆ. ವಿವಿಧ ದೇಶಗಳಿಂದ ಹಾಗೂ ವಿವಿಧ ರಾಜ್ಯಗಳಿಂದ ಬಂದವರು. ಅವರ ವರದಿ ಕೂಡ ನೆಗಟಿವ್ ಬಂದಿವೆ. ಎಂದು ತಿಳಿಸಿದರು.
ಗದಗಿನಲ್ಲಿ ದೃಟಪಟ್ಟ ಸೊಂಕಿತ ಸಂಬಂದಿಕರು ಗದುಗಿಗೆ ಹೋಗಿ ಬಂದು ತಾವೇ ಸ್ವಯಂ ಪ್ರೇರಿತವಾಗಿ ಹೇಳಿಕೊಂಡು ಚಿಕಿತ್ಸೆಗೆ ಬಂದಿದ್ದರು. ಅವರನ್ನು ಸೆರಿ ಮೂವರನ್ನು ನೀಗಾದಲ್ಲಿ ಇರಿಸಿ ದ್ರವ ಹಾಗೂ ರಕ್ತ ಪರೀಕ್ಷೆ ಗೆ ಕಳಿಸಲಾಯಿತು
ಅವರ ವರದಿಯಲ್ಲೂ ಕೂಡ ನೆಗಟಿವ್ ಬಂದಿದೆ ಇದರಿಂದ ಜಿಲ್ಲೆಯು ನೀರಾಳವೆನಿಸಿದೆ ಎಂದರು.
ಒಟ್ಟು ಇಲ್ಲಿವರೆಗೂ ೬೧ ಜನರು ೧೪ ದಿನ ಐಸೋಲೇಷನ್ ಮುಗಿಸಿದ್ದಾರೆ. 50 ಜನರು ಕೂಡ 25 ದಿನ ಐಸೋಲೇಷನ್ ಮುಗಿಸಿದ್ದಾರೆ. ೨೫ ಜನರು ಹೋಮ್ ಕೊರಂಟೈನ್ ನಲ್ಲಿ ಇರಿಸಲಾಗಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss