Monday, August 8, 2022

Latest Posts

 ಕೊಪ್ಪಳ ಜಿಲ್ಲೆಯಲ್ಲಿ ಕಳಪೆ ಬೀಜ ಪತ್ತೆ| ಕಂಪನಿ ಸೀಜ್‍ಗೆ ಕ್ರಮ: ಬಿ.ಸಿ.ಪಾಟೀಲ್..

ಕೊಪ್ಪಳ: ಇತ್ತಿಚೆಗೆ  ಕೊಪ್ಪಳ ಜಿಲ್ಲೆಯಲ್ಲಿ ಕಳಪೆ ಬೀಜ  ಗೊಬ್ಬರ  ವಿತರಿಸಿದ ಪ್ರಕರಣ  ಗಮನಕ್ಕೆ  ಬಂದು ಅದು ಕಳಪೆ ಎಂಬುದು ಸಾಬಿತಾಗಿದೆ. ಈಗಾಗಾಗಿ  ಗೊಬ್ಬರ ಕಂಪನಿ ಸೀಜ್  ಮಾಡಲು ಹಾಗೂ ಮಾರಾಟ ಮಾಡಿದ  ಅಂಗಡಿಯ ವಿರುದ್ದ ಕ್ರಮಕ್ಕೆ  ಸೂಚಿಸಲಾಗಿದೆ  ಎಂದು  ಕೃಷಿ ಸಚಿವ ಹಾಗೂ  ಜಿಲ್ಲಾ  ಉಸ್ತುವಾರಿ ಸಚಿವ  ಬಿ.ಸಿ.ಪಾಟೀಲ್  ಹೇಳಿದರು.

ಕೊಪ್ಪಳದಲ್ಲಿ 73ನೇ  ಕಲ್ಯಾಣ ಕರ್ನಾಟಕ ಉತ್ಸವ  ದಿನಾಚರಣೆ  ಧ್ವಜಾರೋಹಣ  ನೆರವೆರಿಸಿ ಮಾತನಾಡಿದ ಅವರು,  ಕೊಪ್ಪಳ ಜಿಲ್ಲೆಯಲ್ಲಿ  ಪತ್ತೆಯಾದ  ಕಳೆಪೆ ಗೊಬ್ಬರ ಕುರಿತು ಬೂದಗುಂಪ ರೈತ ಕೆಂಚನಗೌಡ ದೂರಿನ ಆದಾರದ ಮೇಲೆ  ಗೊಬ್ಬರವನ್ನು ಪರೀಕ್ಷೆಗೆ  ಕಳಿಸಲಾಗಿತ್ತು. ಈಗ ವರದಿ ಬಂದಿದ್ದು, ಗೊಬ್ಬರ  ಕಳಪೆ  ಎಂಬುದು  ಪತ್ತೆಯಾಗಿದೆ. ಆದರೆ  ಈ ಗೊಬ್ಬರ ಪೆರಿಗ್ರೀನ್  ಕಂಪನಿ ಎಂಬುದು ಗೊತ್ತಾಗಿದೆ.  ಈ ಕಂಪನಿ  ಕಲಬುರಗಿಯಲ್ಲಿ  ಇದ್ದು,  ಈ ಕಂಪನಿ  ಸೀಜ್ ಮಾಡಿ ಕ್ರೀಮಿನಲ್  ಕೇಸ್ ದಾಖಲಿಸುವಂತೆ ಹಾಗೂ ಮಾರಾಟ  ಮಾಡಿದ  ಅಂಗಡಿಯ ವಿರುದ್ದ  ಕೂಡ  ಕ್ರಮ  ಕೈಗೊಳ್ಳುವಂತೆ  ಸೂಚಿಸಲಾಗಿದೆ ಎಂದು ಹೇಳಿದರು.

ಅದರಂತೆ  ಕೊಪ್ಪಳದ  ಶಾಂತಿ  ಆಗ್ರೋದಲ್ಲಿ  ಈರುಳ್ಳಿ ಬೀಜ  ಕಳಪೆ  ವಿಚಾರಕ್ಕೆ  ಸಂಬಂದಿಸಿದಂತೆ  ಪ್ರತಿಕ್ರೀಯೆಯಿಸಿದ  ಅವರು,  ಈ ಬಗ್ಗೆ ತೋಟಗಾರಿಕೆ  ಇಲಾಖೆಗೆ  ಪತ್ರ ಬರೆಯಲಾಗಿದೆ.  ಈ ಬಗ್ಗೆ  ತೋಟಗಾರಿಕೆ ಇಲಾಕೆಯ  ವರದಿ ಬಂದ ನಂತರ  ಕ್ರಮಕ್ಕೆ  ಮುಂದಾಗುವುದಾಗಿ  ತಿಳಿಸಿದರು.

ಜಿಲ್ಲೆಯ  ಪೊಲೀಸ್  ಇಲಾಖೆಯ ಆಂತರಿಕ  ಕಲಹ ಪ್ರಶ್ನೇಗೆ  ಉತ್ತರಿಸಿದ ಅವರು,  ಇದರ ಕುರಿತು  ಸಾಕಷ್ಟು  ಪರಸ್ಪರ ಪರ-ವಿರೋದ ದೂರುಗಳು  ಬಂದಿವೆ. ಆದರೆ  ಪೊಲೀಸ್ ಇಲಾಖೆಯ ಕ್ರಮ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಈಗಾಗಿ  ಅವುಗಳನ್ನು ಗೃಹಮಂತ್ರಿಗಳ  ಗಮನಕ್ಕೆ  ತರಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್  ಅಧ್ಯಕ್ಷ ಹೆಚ್.ವಿಶ್ವನಾಥರಡ್ಡಿ,  ನಗರಾಭಿವೃದ್ಧಿ  ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್  ಮೈನಳ್ಳಿ, ಜಿಲ್ಲಾಧಿಕಾರಿ ಎಸ್.ವಿಕಾಸ್  ಕಿಶೋರ್, ಜಿ.ಪಂ.ಸಿಇಓ  ರಘುನಂದಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss