ಕೊಪ್ಪಳ:ಕೊರೋನಾ ಸೋಂಕಿಗೆ ಬುಧವಾರ ಬೆಳಿಗ್ಗೆ ಇಬ್ಬರು ಮೃತ ಪಟ್ಟಿದ್ದಾರೆ. ಮೃತರ ಸಂಖ್ಯೆ ೨೨ ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ಯಲಬುರ್ಗಾ ತಾಲೂಕಿನ ಸೋಂಪೂರು ಗ್ರಾಮದ ೭೦ ವರ್ಷದ ಮಹಿಳೆ ಕೊರೋನಾ ಸೋಂಕು ದೃಢವಾಗಿ ಕೊವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ಉಸಿರಾಟದ ತೊಂದರೆ ಯಿಂದ ಮಂಗಳವಾರ ಸಾವಿಗೀಡಾಗಿದ್ದಾನೆ.
ಅದರಂತೆ ಗಂಗಾವತಿಯ ೪೬ ವರ್ಷದ ಮಹಿಳೆ ಜು.೨೭ರಂದು ಸೋಂಕು ದೃಡ ಪಟ್ಟು ಕೊವಿಡ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ದಾಖಲಿಸಲಾಗಿತ್ತು. ಆದರೆ ತೀವ್ರ ಉಸಿರಾಟದ ತೊಂದರೆಯಿಂದ ಬುಧವಾರ ಬೆಳಿಗ್ಗೆ ಮೃತ ಪಟ್ಟಿದ್ದಾರೆ.
ಆದರೆ ಒಂದು ದಿನ ಬೀಡದೆ ಬಲಿ ಪಡೆಯುತ್ತಿರುವ ಸಾವಿನ ಸಂಖ್ಯೆಗೆ ಜಿಲ್ಲೆಯ ಜನತೆ ಆತಂಕ ಭಯಬೀತರಾಗಿದ್ದಾರೆ.
ಆದರೆ ಕೊರೋನಾ ಕುರಿತು ಜನರು ಆತಂಕ ಪಡುವುದು ಬೇಡ. ಕೊವಿಡ್ ಸುರಕ್ಷತಾ ಕ್ರಮಗಳನ್ನು ಮುಂಜಾಗ್ರತಾ ಕೈಗೊಳ್ಳಿ, ಸ್ಯಾನಿಟೆಜರ್, ಸಾಮಾಜಿಕ ಅಂತರ ಕೈಗೊಂಡು ಕರೊನಾ ವೈರಸ್ ನ ತಡೆಗಟ್ಟುವ ಕೆಲಸ ಜನತೆ ಮಾಡಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ ತಿಳಿಸಿದ್ದಾರೆ.