Wednesday, June 29, 2022

Latest Posts

ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್ -19 ಅಟ್ಟಹಾಸ: ಎಸ್ಸೆಸೆಲ್ಸಿ ವಿದ್ಯಾರ್ಥಿನಿ ಸಹಿತ 13 ಜನರಲ್ಲಿ ಸೋಂಕು ಪತ್ತೆ

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲೂ ಕೋವಿಡ್ 19 ಅಟ್ಟಹಾಸ ಮೆರೆಯುತ್ತಿದ್ದು,‌ ಇಂದು ಮತ್ತೇ ೧೩ ಜನರಲ್ಲಿ ಸೋಂಕು ಪತ್ತೆಯಾಗಿದೆ. ಆದರೆ ಎಸ್ಸೆಸೆಲ್ಸಿ ಪರೀಕ್ಷೆಗೆ ಹಾಜರಾಗಿರೋ ವಿದ್ಯಾರ್ಥಿನಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ವಿದ್ಯಾರ್ಥಿನಿಯು ಪರೀಕ್ಷೆ ಬರೆಯುವುದನ್ನು ಮೊಟಕುಗೊಳಿಸಿ ಆಸ್ಪತ್ರೆಗೆ ಕರೆದುಕೊಂಡ ಹೋದ ಪ್ರಸಂಗ ಜಿಲ್ಲೆಯ ಕಾರಟಗಿಯಲ್ಲಿ ಜರುಗಿತು.
ಕೊಪ್ಪಳ ಜಿಲ್ಲೆ ಕಾರಟಗಿಯ ಖಾಸಗಿ ಶಾಲೆಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಸಿಂಧನೂರಿನ ನಿವಾಸಿಯಾದ ವಿದ್ಯಾರ್ಥಿನಿ ಬೆಂಗಳೂರಿಗೆ ಪಾಲಕರ ಜೋತೆ ದುಡಿಯಲು ಹೋಗಿ ನೆರವಾಗಿ
ಕಾರಟಗಿಯ ಅಬ್ದುಲ್ ನಜೀರಸಾಬ ಕಾಲೋನಿ ನಿವಾಸಿಯ ಚಿಕ್ಕಮ್ಮಳ ಮನೆಗೆ ಆಗಮಿಸಿದ್ದಳು.
ಆದರೆ ಚಿಕ್ಕಮ್ಮಳ ಮನೆಯಲ್ಲಿಯೇ ಇದ್ದ ವಿದ್ಯಾರ್ಥಿನಿ ಕಾರಟಗಿಯಯಲ್ಲಿಯೇ ಪರೀಕ್ಷೆ ಕೇಂದ್ರ ತೆಗೆದುಕೊಂಡು ಚಿಕ್ಕಮ್ಮಳ ಮನೆಯಿಂದ ಪರೀಕ್ಷೆಗೆ ಬರೆಯಲು ಆಗಮಿಸಿದ್ದಳು.
ಆದರೆ ಬೆಂಗಳೂರಿಂದ ಬಂದ ವಿದ್ಯಾರ್ಥಿನಿಯ ಗಂಟಲು ದ್ರವ ಪರೀಕ್ಷೆಗೆ ಕಳಿಸಿದ್ದರು. ಆದರೆ ಮೊದಲಿಗೆ ಸ್ವಾಬ್ ಟೆಸ್ಟ್ ವೇಳೆ ಇಂದು ಸೋಂಕು ಪತ್ತೆಯಾಗಿರುವುದು ಕಂಡು ಬಂದಿದೆ. ಆದರೆ ಸುದ್ದಿ ತಿಳಿಯುತ್ತಿದ್ದಂತೆ ಪರೀಕ್ಷಾ ಮುಖ್ಯಸ್ಥರು, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿ ಸೋಂಕಿತ ವಿದ್ಯಾರ್ಥಿನಿಯನ್ನು ಪರೀಕ್ಷಾ ಕೇಂದ್ರದಿಂದಲೇ ಪರೀಕ್ಷೆ ಮೊಟಕುಗೊಳಿಸಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ವಿದ್ಯಾರ್ಥಿಗೆ ಸೊಂಕು ಇರುವುದು ದೃಢ ಪಡುತ್ತಿದ್ದಂತೆ ಪರೀಕ್ಷೆ ಬರೆಯವ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಹೆಚ್ಚಿದೆ.
ಆದರೆ ಈಗಾಗಲೇ ವಿದ್ಯಾರ್ಥಿನಿ ಮೂರು ಪತ್ರಿಕೆ ಪರೀಕ್ಷೆ ಬರೆದಿದ್ದು ಇಂದು ನಾಲ್ಕನೇ ಪತ್ರಿಕೆ ಪರೀಕ್ಷೆ ಬರೆಯಲು ಹೋದಾಗ ಸೋಂಕು ಇರುವುದು ಸುದ್ದಿ ತಿಳಿದಿದೆ. ಆದರೆ ಮೂರು ದಿನ ಪರೀಕ್ಷೆ ಬರೆದ ಕೊಠಡಿಯ ವಿದ್ಯಾರ್ಥಿಗಳನ್ನು ಆಯಾ ಪಾಲಕರನ್ನು ಕ್ವಾರಂಟೈನ್ ಮಾಡಲು ಮುಂದಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss