ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಗುರುವಾರ ಮತ್ತೆ ನಾಲ್ವರಿಗೆ ಕೊರೋನಾ ದೃಡ ಪಡುವುದರ ಮೂಲಕ ತನ್ನ ಅಟ್ಟ ಹಾಸ ಮುಂದು ವರೆದಿರುವುದು ಒಂದೆಡೆ ಆತಂಕವಾದರೆ ಇನ್ನೋಂದಡೆ ಇಂದು 23 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆ ಯಿಂದ ಬಿಡುಗಡೆಯಾಗಿರುವುದು ಒಂದುಷ್ಟು ಸಮಾಧನಕರ ನೀಡಿದೆ.
ಇಂದು ದೃಡ ಪಟ್ಟವರಲ್ಲಿ ೩೮ ವರ್ಷದ ಪುರಷನಿಗೆ ಕೆಪಿಎಲ್ ೯೮-ಪಿ-೧೬೮೪೫, ಹಾಗೂ ಹಾಗೂ ೦೯ ವರ್ಷದ ಬಾಲಕಿಗೆ ಕೆಪಿಎಲ್-೯೯-ಪಿ- ೧೬೮೪೫, ಸೋಂಕು ದೃಡಪಟ್ಟಿದೆ. ಅದರೆ ಸೋಂಕಿತ ಪಿ- ೯೮೦೮ ಸಂಪರ್ಕದಿಂದ ಕೊರೋನಾ ಬಂದಿದೆ. ಅದರಂತೆ ೨೮ ವರ್ಷದ ಪುರುಷನಿಗೆ ಕೆಪಿಎಲ್-೧೦೦ ಪಿ-೧೬೮೪೭ ಸೋಂಕು ಬಂದಿದ್ದು ಸೋಂಕಿತ ಪಿ-೯೪೮ ಸೋಂಕಿತನ ಸಂಪರ್ಕದಿಂದ ಸೋಂಕು ತಗುಲಿದೆ. ಅದರಂತೆ ೩೧ ವರ್ಷದ ಮಹಿಳೆಗೆ ಕೆಪಿಎಲ್-೧೦೧ ಪಿ-೧೬೮೪೮ ಸೇರಿ ನಾಲ್ವರಿಗೆ ಸೋಂಕು ತಗುಲಿದೆ.
23 ಜನ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ
ಅದರಂತೆ ಒಟ್ಟಾರೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 101ಕ್ಕೆರಿ ಸಂಚೂರಿ ಬಾರಿಸಿದೆ. ಇದರ ಪೈಕಿ ಇಬ್ಬರು ಸಾವನ್ನಪ್ಪಿದ್ದು, ಇಂದು 23 ಜನರು ಸೇರಿ ಒಟ್ಟು 41 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ಜಿಲ್ಲೆಗೆ ಸಮಾಧಾನಕರ ನೀಡಿದೆ.