Tuesday, July 5, 2022

Latest Posts

ಕೊಪ್ಪಳ ಜಿಲ್ಲೆಯಲ್ಲಿ ಮತ್ತೆ 13 ಜನರಿಗೆ ಕೋವಿಡ್ ಪಾಸಿಟಿವ್ : ಶತಕದತ್ತ ಸಾಗಿದ ಸೋಂಕಿತರ ಸಂಖ್ಯೆ

ಕೊಪ್ಪಳ: ಜಿಲ್ಲೆಯಲ್ಲಿ ಬುಧವಾರ ಮತ್ತೆ 13 ಜನರಿಗೆ ಸೋಂಕು ದೃಡಪಟ್ಟಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 97ಕ್ಕೆ ಏರಿ ಶತಕದತ್ತ ಸಾಗಿದೆ. ಗಂಗಾವತಿ ನಗರದ ಪಿ-9810 ಸೋಂಕಿತನಿಂದ 10 ಹಾಗೂ 7 ವರ್ಷದ ಮಕ್ಕಳು ಸೇರಿದಂತೆ ನಗರದಲ್ಲಿ 5 ಜನರಿಗೆ ಸೋಂಕು ಬಂದಿದೆ.
ಗಂಗಾವತಿಯ ತಾಲೂಕಿನ ಯರಡೋಣಿ ಗ್ರಾಮದ 34ಪುರುಷನಿಗೆ, ಚಿಕ್ಕಜಂತಕಲ್ ಗ್ರಾಮದ 18 ವರ್ಷದ ಯುವಕನಿಗೆ, ವೇಂಕಟಗಿರಿ ಗ್ರಾಮದಲ್ಲಿ 45 ವರ್ಷದ ವ್ಯಕ್ತಿಗೆ, ಸೊಂಖು ಪತ್ತೆಯಾಗಿದೆ. ಅದರಂತೆ ಕೊಪ್ಪಳ ನಗರದ 49 ವರ್ಷದ ಓರ್ವ ಪುರಷನಿಗೆ ಹಾಗೂ ಕೊಪ್ಪಳ ತಾಲೂಕಿನ ಮುನಿರಾಬಾದ್ ಗ್ರಾಮದ 34 ವರ್ಷದ ಕೊರೋನಾ ವಾರಿಯರ್ಸ್ ಮಹಿಳೆಗೆ ಸೋಂಕು ತಗುಲಿದೆ.
ಕುಷ್ಟಗಿ ತಾಲೂಕಿನ ದೊಣ್ಣೆಗುಡ್ಡ ಗ್ರಾಮದಲ್ಲಿ 12 ವರ್ಷದ ಇಬ್ಬರು ಹುಡುಗರಿಗೆ, 41 ವರ್ಷದ ವ್ಯಕ್ತಿಗೆ, ಮೂವರಿಗೆ ಸೋಂಕು ಬಂದಿದೆ.
ಒಟ್ಟಾರೆ ಬುಧುವಾರ 13 ಜನ ಸೇರಿದಂತೆ ಜಿಲ್ಲೆಯಲ್ಲಿ 97 ಜನರಿಗೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಅದರಲ್ಲಿ 27 ಜನ ಗುಣಮುಖರಾಗಿದ್ದು ಓರ್ವ ಮಹಿಳೆ ಸಾವನ್ನಪ್ಪಿದ್ದಾಳೆ. 69 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss